ಕೊಪ್ಪ : (ನ್ಯೂಸ್ ಮಲ್ನಾಡ್ ವರದಿ) ಕೊಪ್ಪದ ಆಟೋ ರಿಕ್ಷಾ ಚಾಲಕನೋರ್ವ ಇದ್ದಕ್ಕಿದಂತೆ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದು ಆತನ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿರುವ ಘಟನೆ ಕೊಪ್ಪದಲ್ಲಿ ನಡೆದಿದೆ.
ಇದನ್ನೂ ಓದಿ : ಮತ್ತೆ ಬಂದ ಮಳೆರಾಯ, ಐದು ದಿನ ಭಾರೀ ಮಳೆ ಸಾಧ್ಯತೆ : ಯಲ್ಲೋ ಅಲರ್ಟ್ ಘೋಷಣೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಚೌಕಿ ನಿವಾಸಿ ದೀಪಕ್ ಕಳೆದ ಮೂರು ದಿನಗಳ ಹಿಂದೆ ಕಾಣೆಯಾಗಿದ್ದರು. ಈತ ಓಡಿಸುತಿದ್ದ ಆಟೋ ರಿಕ್ಷಾ ಕೆಸವೇ ರಸ್ತೆಯ ಸ್ಮಶಾನದ ಹತ್ತಿರ ನಡು ರಸ್ತೆಯಲ್ಲಿ ನಿಂತಿದ್ದು, ಮನೆಯವರು ಗಾಬರಿಗೊಂಡು ದೀಪಕ್ ನ ಪತ್ತೆ ಕಾರ್ಯದಲ್ಲಿ ತೊಡಗಿದ್ದರು.
ಆದರೆ ನಿನ್ನೆ ಈತನ ಶವ ಚೌಕಿ ಲೇಔಟ್ ಹತ್ತಿರದ ಬ್ರಾಹ್ಮೀ ನದಿಯಲ್ಲಿ (ಮುಸುರೆ ಹಳ್ಳ) ಪತ್ತೆಯಾಗಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.
ಕೇವಲ ಎರಡು ಅಡಿ ನೀರು ಇರುವ ನದಿಯಲ್ಲಿ ಶವ ತೇಲಿ ಹೋಗಲು ಕ್ಲಿಷ್ಟಕರವಾಗಿರುವಾಗ ಮುಳುಗಿ ಸಾಯಲು ಸಾಧ್ಯವೇ ಎಂಬ ರೀತಿಯ ಪ್ರಶ್ನೆಗಳು ಕೇಳಿಬರುತ್ತಿದ್ದು, ಕೊಲೆಯಾಗಿರುವ ಶಂಕೆ ವ್ಯಕ್ತವಾಗುತ್ತಿದೆ.
ಈ ಸಾವಿನ ಕುರಿತಾಗಿ ಪೊಲೀಸರ ತನಿಖೆಯಿಂದಷ್ಟೆ ಸಂಪೂರ್ಣವಾದ ಮಾಹಿತಿ ಹೊರಬೀಳಬೇಕಿದೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಈ ಸಂಬಂಧ ಹೆಚ್ಚಿನ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ.






0 Comments