ಕುವೆಂಪು ವಿಶ್ವವಿದ್ಯಾಲಯವು ಬಿಡುಗಡೆ ಮಾಡಿದ್ದ ಶೈಕ್ಷಣಿಕ ವೇಳಾಪಟ್ಟಿಯನ್ನು ವಿರೋಧಿಸಿ ಕುವೆಂಪು ವಿಶ್ವವಿದ್ಯಾನಿಲಯದ ವಿವಿಧ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ತಿದ್ದುಪಡಿಗೆ ಆಗ್ರಹಿಸಿದ್ದರು.
ಈ ಕುರಿತಾಗಿ ವಿದ್ಯಾರ್ಥಿಗಳು ನೀಡಿದ ಮನವಿ ಹಾಗೂ ಕೋರಿಕೆಯ ಮೇರೆಗೆ ಕುವೆಂಪು ವಿಶ್ವವಿದ್ಯಾಲಯ ಶಂಕರಘಟ್ಟ ಶಿವಮೊಗ್ಗ ಜಿಲ್ಲೆಯ ಅಧಿಕಾರಿಗಳ ವರ್ಗ ಪರಿಷ್ಕೃತವಾದ ವೇಳಾಪಟ್ಟಿಯನ್ನು ರಚಿಸಿ ಬಿಡುಗಡೆ ಮಾಡಿದೆ.
ಈ ಹಿಂದಿನ ವೇಳಾಪಟ್ಟಿಯಲ್ಲಿ ಸೂಚಿಸಿದಂತೆ ನಿಗದಿಯಾಗಿದ್ದ ದಿನದಂದು ತರಗತಿಗಳನ್ನು ಮುಗಿಸುವ ವಿಚಾರವಾಗಿ ವಿದ್ಯಾರ್ಥಿಗಳು ತೀವ್ರವಾದ ಆಕ್ಷೇಪವನ್ನು ವ್ಯಕ್ತಪಡಿಸಿದ್ದು ಇದರಿಂದಾಗಿ ಅವಧಿಗೂ ಪೂರ್ವದಲ್ಲೇ ತರಗತಿಗಳನ್ನು ಮುಗಿಸಲಾಗುತ್ತದೆ ಈಗಾಗಲೇ ಪಠ್ಯದ ಭಾಗಗಳನ್ನು ಕೂಡ ಬೇಗ ಬೇಗನೆ ಮುಗಿಸುವುದರಿಂದ ಓದಲು ಅರ್ಥ ಮಾಡಿಕೊಳ್ಳಲು ಪರೀಕ್ಷೆಗೆ ತಯಾರಾಗಲು ಅಡೆತಡೆ ಉಂಟಾಗುತ್ತದೆ ಎಂದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಮನವಿಯನ್ನು ನೀಡಿದ್ದರು.
ವಿದ್ಯಾರ್ಥಿಗಳ ಮನವಿಯನ್ನು ಪರಿಗಣಿಸಿ ಕುಲಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಡೀನ್, ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿಗಳು ಸಿಡಿಸಿ ನಿರ್ದೇಶಕರು ಹಾಗೂ ಸಿಂಡಿಕೇಟ್ ಸದಸ್ಯರು ಭಾಗಿಯಾಗಿ ಸಭೆ ನಡೆಸಿ ನಾಲ್ಕು ಹಾಗೂ ಆರನೇ ಸೆಮಿಸ್ಟರ್ ಶೈಕ್ಷಣಿಕ ವೇಳಾಪಟ್ಟಿಯನ್ನು ಪರಿಷ್ಕರಿಸಿ ಬಿಡುಗಡೆ ಮಾಡಿರುವ ವೇಳಾಪಟ್ಟಿ ಈ ಕೆಳಗಿನಂತಿದೆ.








0 Comments