ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಮಾಜಿ ಮುಖ್ಯಮಂತ್ರಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸಾವರ್ಕರ್ ಕುರಿತಾದ ವಿವಾದಾತ್ಮಕ ಹೇಳಿಕೆ ನೀಡಿದ ಬೆನ್ನಲ್ಲೇ ಇಂದು ಅವರ ಭೇಟಿಯನ್ನು ವಿರೋಧಿಸಿ ಕೊಡಗಿನಲ್ಲಿ ಬಿಜೆಪಿ ಕಾರ್ಯಕರ್ತರು ಕಪ್ಪು ಬಾವುಟಗಳ ಪ್ರದರ್ಶನ ಹಾಗೂ ಪ್ರತಿಭಟನೆಯನ್ನು ನಡೆಸಿದರು, ಮೊಟ್ಟೆಯನ್ನೂ ಸಹ ಅವರ ಕಾರ್ ಮೇಲೆ ಹೊಡೆದು ಆಕ್ರೋಶ ಹೊರಹಾಕಿದರು, ಅದರ ಮುಂದುವರಿದ ಭಾಗವಾಗಿ ಶೃಂಗೇರಿ ಹಾಗೂ ಕೊಪ್ಪ ತಾಲೂಕುಗಳಲ್ಲೂ ಸಹ ಗೋ ಬ್ಯಾಕ್ ಸಿದ್ದರಾಮಯ್ಯ ಕೂಗು, ವ್ಯಾಪಕವಾಗಿ ಕೇಳಿ ಬರುತ್ತಿದೆ.
ಇದನ್ನೂ ಓದಿ : ಚಿಕ್ಕಮಗಳೂರು : ರಾಷ್ಟ್ರ ಧ್ವಜವನ್ನು ಸಿಗರೇಟ್ ನಿಂದ ಸುಟ್ಟಿದ್ದ ಕಿಡಿಗೇಡಿ ಅರೆಸ್ಟ್
ಇಂದು ಮಳೆ ಹಾನಿ ಪ್ರದೇಶಗಳನ್ನು ವೀಕ್ಷಣೆ ಮಾಡುವ ಸಲುವಾಗಿ ಕೊಡಗಿಗೆ ತೆರಳಿದ್ದ ಸಿದ್ದರಾಮಯ್ಯ ಅವರ ವಿರುದ್ಧವಾಗಿ ವ್ಯಾಪಕವಾದ ಆಕ್ರೋಶ ಎದುರಾಗಿದ್ದು, ನಾಳೆ ಶೃಂಗೇರಿ ವಿಧಾನಸಭಾ ಕ್ಷೇತ್ರದ ವಿವಿಧ ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಸಿದ್ದರಾಮಯ್ಯ ಅವರ ಪ್ರವಾಸವಿದ್ದು ಈ ಪ್ರವಾಸಕ್ಕೆ ಸಂಘ ಪರಿವಾರ ಹಾಗೂ ಬಿಜೆಪಿ ಕಾರ್ಯಕರ್ತರು ತೀವ್ರವಾದ ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತಾಗಿ ಪೋಸ್ಟ್ ಹಾಕಿರುವ ಕೆಲವರು, ಪವಿತ್ರ ಶೃಂಗೇರಿಯ ನೆಲಕ್ಕೆ ಅಪವಿತ್ರ ಸಿದ್ದರಾಮಯ್ಯ ಭೇಟಿ, ಗೋ ಬ್ಯಾಕ್ ಸಿದ್ದರಾಮಯ್ಯ, ಜೈ ವೀರಸಾವರ್ಕರ್ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ನಾಳೆ ಸಿದ್ದರಾಮಯ್ಯ ಅವರು ಕಾರ್ಯಕರ್ತರನ್ನುದ್ದೇಶಿಸಿ ಶೃಂಗೇರಿಯ ಗೌರೀಶಂಕರ ಸಭಾಂಗಣದಲ್ಲಿ ಮಾತನಾಡಲಿದ್ದಾರೆ ಎನ್ನಲಾಗುತ್ತಿದ್ದು ಯಾವುದೇ ಅಧಿಕೃತ ಮಾಹಿತಿಗಳು ಹಾಗೂ ಕಾರ್ಯಕ್ರಮಗಳು ಈವರೆಗೆ ನಿಗದಿಯಾಗಿಲ್ಲ ಶೃಂಗೇರಿಯ ನೇರಳೆಕುಡಿಗೆ ಭೂಕುಸಿತ ಉಂಟಾದ ರಸ್ತೆಗೆ ಭೇಟಿ ನೀಡಿ ಹಾನಿಯನ್ನು ವೀಕ್ಷಣೆ ಮಾಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಜಿದ್ದಾಜಿದ್ದಿನ ಕ್ಷೇತ್ರವಾದ ಶೃಂಗೇರಿಯಲ್ಲಿ ಗೋ ಬ್ಯಾಕ್ ಸಿದ್ದರಾಮಯ್ಯ ಅಭಿಯಾನಗಳು ಜೋರಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.






1 Comments
ಈಗ ವಾಪಾಸ್ ಹೋಗೋದೇ ಒಳ್ಳೇದು. ಶಿವಮೊಗ್ಗ ಘಟನೆ ನೋಡಿದರೆ ಮಲೆನಾಡು ಕ್ಷೇಮವಲ್ಲ ಏನಿಸುತ್ತೆ.
ReplyDelete