ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಮಲೆನಾಡು ಭಾಗಗಳಲ್ಲಿ ಭಾರೀ ಪ್ರಮಾಣದ ಮಳೆಯಾಗುತ್ತಿದ್ದು ಅಲ್ಲಲ್ಲಿ ರಸ್ತೆಗೆ ಅಡ್ಡಲಾಗಿ ಮರಗಳು ಉದುರುವುದು, ವಿದ್ಯುತ್ ಕಂಬಗಳು ಉರುಳುವುದು ಸೇರಿದಂತೆ ಅನೇಕ ಅವಘಡಗಳು ಸಂಭವಿಸುತ್ತಿದೆ, ಅಂತೆಯೇ ಶೃಂಗೇರಿಯಿಂದ ಕೊಪ್ಪದ ಕಡೆಗೆ ತೆರಳುವ ರಾಜ್ಯ ಹೆದ್ದಾರಿಯಲ್ಲಿ ಬಿರುಕುಮೂಡಿದೆ.
ಇದನ್ನೂ ಓದಿ : ಶೃಂಗೇರಿ ಹೊರವಲಯದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಉರುಳಿದ ಕಾರ್
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಅಡ್ಡಗದ್ದೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಳುವೆ ಶಾಲೆ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿರುಕುಮೂಡಿದ್ದು ಪ್ರಯಾಣಿಕರು ಜಾಗರೂಕತೆಯಿಂದ ಈ ಮಾರ್ಗದಲ್ಲಿ ಸಂಚಾರ ಮಾಡಬೇಕಿದೆ. ಧಾರ್ಮಿಕ ಕ್ಷೇತ್ರಗಳಾದ ಶೃಂಗೇರಿ ಶ್ರೀ ಮಠ ಹಾಗೂ ಹರಿಹರಪುರ ಮಠಕ್ಕೆಸಾಗಲು ಇರುವ ರಸ್ತೆ ಇದಾಗಿದ್ದು ಭಾರೀ ಮಳೆಗೆ ರಸ್ತೆಯಲ್ಲಿ ಕೊಂಚಮಟ್ಟದ ಕುಸಿತ ಕಂಡಿದ್ದು ಪ್ರವಾಸಿಗರು ಹಾಗೂ ಈ ಮಾರ್ಗದಲ್ಲಿ ವಾಹನಗಳ ಮೂಲಕ ಸಂಚಾರ ನಡೆಸುವವರು ಹೆಚ್ಚಿನ ಜಾಗರೂಕತೆವಹಿಸಿ ಪ್ರಯಾಣಿಸಬೇಕಿದೆ.
ಮುಂಜಾಗ್ರತಾ ಕ್ರಮವಾಗಿ ಈಗಾಗಲೇ ಬ್ಯಾರಿಕೇಡ್ ಹಾಗೂ ಕೆಂಪು ಬಣ್ಣದ ಎಚ್ಚರಿಕೆಯ ಟೇಪ್ ಗಳನ್ನು ಅಳವಡಿಸಲಾಗಿದ್ದು ಕುಸಿದ ಸ್ಥಳದಲ್ಲಿ ಯಾವುದೇ ವಾಹನಗಳು ಒಡಾಡದಂತೆ ಅಡ್ಡಲಾಗಿರಿಸಲಾಗಿದೆ.
ಜುಲೈ ತಿಂಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಶೃಂಗೇರಿಯಿಂದ ಆಗುಂಬೆ, ಹೆಬ್ರಿ, ಉಡುಪಿ ಭಾಗಗಳನ್ನು ಕಲ್ಪಿಸುವ ಶೃಂಗೇರಿ ಆಗುಂಬೆ ರಸ್ತೆಯು ಶೃಂಗೇರಿ ಹಿರವಕಾಯವಾದ ನೇರಳೆಕುಡಿಗೆ ಬಳಿ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿತ್ತು.
ಭೂ ಕುಸಿತದ ತೀವ್ರತೆ ಹಾಗೂ ಭಾರೀ ಪ್ರಮಾಣದಲ್ಲಿ ರಸ್ತೆ ಹಾನಿಯಾಗಿರುವ ಪರಿಣಾಮ ಈಗಲೂ ಈ ರಸ್ತೆಯಲ್ಲಿ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ.
ಶೃಂಗೇರಿಯನ್ನು ಸಂಪರ್ಕಿಸುವ ಎರಡು ಪ್ರಮುಖ ರಸ್ತೆಗಳು ಕುಸಿತಗೊಂಡಿದ್ದು ವಾಹನಗಳಲ್ಲಿ ಈ ಮಾರ್ಗದ ಮೂಲಕ ಸಂಚರಿಸುವವರು ನಿಧಾನಗತಿಯಲ್ಲಿ ಸಾಗಬೇಕಿದೆ.






0 Comments