ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಅಮ್ಮ ಫೌಂಡೇಶನ್ ವತಿಯಿಂದ ತಾಲೂಕು ಮಟ್ಟದ ರಾಧಾ ಕೃಷ್ಣ ವೇಷ ಸ್ಪರ್ಧೆಯು ಶೃಂಗೇರಿಯಲ್ಲಿ ಆಯೋಜನೆಗೊಂಡಿದೆ.
ಇದನ್ನೂ ಓದಿ : ಸಾರ್ವಜನಿಕ ಶಾಂತಿ, ಸುವ್ಯವಸ್ಥೆಗೆ ಧಕ್ಕೆ ಸಾಧ್ಯತೆ; ಇಬ್ಬರು ರೌಡಿ ಶೀಟರ್ ಗಳು ಗಡಿಪಾರು
ಅಮ್ಮ ಫೌಂಡೇಶನ್ ಆಶ್ರಯದಲ್ಲಿ ದಿನಾಂಕ 27 ಆಗಸ್ಟ್ 2022 ರ ಶನಿವಾರ ಮದ್ಯಾಹ್ನ 2 ರಿಂದ ಶೃಂಗೇರಿ ಪಟ್ಟಣದಲ್ಲಿರುವ ಶ್ರೀ ಗೌರೀಶಂಕರ್ ಸಭಾಂಗಣ ಪಟ್ಟಣ ಪಂಚಾಯತ್ ಶೃಂಗೇರಿಯಲ್ಲಿ ತಾಲೂಕು ಮಟ್ಟದ ರಾಧಾ ಕೃಷ್ಣ ವೇಷ ಸ್ಪರ್ಧೆ ಆಯೋಜನೆಗೊಂಡಿದೆ.
ಅಮ್ಮ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಯುತ ಸುಧಾಕರ್ ಎಸ್ ಶೆಟ್ಟಿ ಅವರ ಆಯೋಜಕತ್ವದಲ್ಲಿ ಈ ಕಾರ್ಯಕ್ರಮ ರೂಪುಗೊಂಡಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ತಿಳಿಸಿದ್ದಾರೆ.
ಈ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಬಹುಮಾನಗಳಿದ್ದು ಅಂಗನವಾಡಿ, ಎಲ್.ಕೆ.ಜಿ, ಯು.ಕೆ.ಜಿ, 1 ರಿಂದ ನಾಲ್ಕನೇ ತರಗತಿ ವಿಭಾಗ, 5 ರಿಂದ 7 ನೆಯ ತರಗತಿ ವಿಭಾಗ, 8 ರಿಂದ 10 ನೆಯ ತರಗತಿ ವಿಭಾಗದ ವಿದ್ಯಾರ್ಥಿಗಳು ಮಾತ್ರ ಭಾಗವಹಿಸಲು ಅವಕಾಶವಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಕೊಪ್ಪದಲ್ಲಿ ಆಯೋಜನೆಗೊಂಡಿದ್ದ ಮೊಸರು ಕುಡಿಕೆ ಮುಂದೂಡಿಕೆ :
ಅಂತೆಯೇ ಆಗಸ್ಟ್ 28 ರಂದು ಕೊಪ್ಪದ ಲಾಲ್ ಬಹದ್ದೂರ್ ಶಾಸ್ತ್ರಿ ಕ್ರೀಡಾಂಗಣದಲ್ಲಿ ಆಯೋಜನೆ ಮಾಡಿದ್ದ ರಾಜ್ಯಮಟ್ಟದ ಮೊಸರು ಕುಡಿಕೆ ಒಡೆಯುವ ಸ್ಪರ್ಧೆಯನ್ನು ಮುಂದೂಡಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಕಳೆದ ಕೆಲ ದಿನಗಳ ಹಿಂದಷ್ಟೇ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದ ಕೊಪ್ಪದ ಆಟೋ ರಿಕ್ಷಾ ಚಾಲಕ ದೀಪಕ್ ಗೌಡ ಸಾವಿನಿಂದ ಇಡೀ ಕೊಪ್ಪದಲ್ಲಿ ಸೂತಕದ ಛಾಯೆ ನಿರ್ಮಾಣವಾಗಿದ್ದು, ಈ ಸಾವಿಗೆ ನ್ಯಾಯ ಒದಗಿಸಬೇಕೆಂಬ ನಿಟ್ಟಿನಲ್ಲಿ ಅನೇಕ ಸಂಘಟನೆಗಳು, ಪಕ್ಷ, ಸಂಸ್ಥೆಗಳು ಪ್ರತಿಭಟನೆ ಹಮ್ಮಿಕೊಂಡಿದ್ದು ಈ ಬೇಸರದ ವಾತಾವರಣದಲ್ಲಿ ಕಾರ್ಯಕ್ರಮವನ್ನು ನಡೆಸುವುದು ಬೇಡ ಎಂಬುದಾಗಿ ನಿಶ್ಚಯಿಸಿದ ಆಯೋಜಕರು ಕಾರ್ಯಕ್ರಮವನ್ನು ಮುಂದೂಡಿದ್ದಾರೆ.

.jpeg)



0 Comments