ಮೂಡಿಗೆರೆ : (ನ್ಯೂಸ್ ಮಲ್ನಾಡ್ ವರದಿ) ಹುಲಿ ದಾಳಿಯಿಂದ ಎತ್ತು ಮೃತಪಟ್ಟಿರುವ ಘಟನೆ ಮೂಡಿಗೆರೆಯಲ್ಲಿ ವರದಿಯಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಹೋಬಳಿಯ ದೊಡ್ಡನಂದಿ ಗ್ರಾಮದ ಬೊಮ್ಮನಹಳ್ಳಿ ಎಂಬಲ್ಲಿ ಎತ್ತಿನ ಮೇಲೆ ಹುಲಿ ದಾಳಿ ನಡೆಸಿ ಬಲಿ ಪಡೆದುಕೊಂಡಿದೆ. 

ಇದನ್ನೂ ಓದಿ : ತೀರ್ಥಹಳ್ಳಿ : ನಿಯಂತ್ರಣ ತಪ್ಪಿ ಬಿದ್ದು ಬೈಕ್ ಸವಾರನ ದುರ್ಮರಣ


ಈ ಎತ್ತುವು ಸ್ಥಳೀಯರಾದ ನಾರಾಯಣ ಗೌಡ ಎಂಬುವವರಿಗೆ ಸೇರಿದ್ದಾಗಿದ್ದು ಸಾಕಿದ್ದ ಎತ್ತನ್ನು ಕಳೆದುಕೊಂಡ ನಾರಾಯಣ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಉಪವಲಯ ಅರಣ್ಯಾಧಿಕಾರಿ ಉಮೇಶ್, ಅರಣ್ಯ ರಕ್ಷಕ ಮೋಹಸೀನ್, ಜಾನುವಾರು ಅಧಿಕಾರಿ ಅಜೀಜ್  ಅಹಮದ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಒಂದೆಡೆ ಕಾಡಾನೆಗಳ ಉಪಟಳದಿಂದ ರೈತ ಬೆಳೆದ ಬೆಳೆಯನ್ನು ರಕ್ಷಣೆ ಮಾಡಿಕೊಳ್ಳಲಾರದೆ ಒದ್ದಾಡುತ್ತಿದ್ದರೆ ಇನ್ನೊಂದೆಡೆ ಹುಲಿ ದಾಳಿಯು ತೋಟ ಗದ್ದೆಗಳಲ್ಲಿ ಕೃಷಿಕಾರ್ಯ ನಿರ್ವಹಿಸುವ ರೈತರಿಗೆ ತೀವ್ರ ಆತಂಕವನ್ನು ಸೃಷ್ಟಿಸಿದೆ. 

ತನು ಕೊಟ್ಟಿಗೆಹಾರ, ವರದಿಗಾರರು