ಚಿಕ್ಕಮಗಳೂರು : ಕಾಡಿನಿಂದ ನಾಡಿಗೆ ಬಂದ ಜಿಂಕೆ ಸಾವನ್ನಪ್ಪಿರುವ ಘಟನೆ ಬಣಕಲ್ ನಲ್ಲಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ವಿಲೇಜ್ ನಲ್ಲಿ ಈ ಘಟನೆ ನಡೆದಿದ್ದು, ನಾಡಿಗೆ ಬಂದ ಜಿಂಕೆಗೆ ಸ್ಥಳೀಯರಾದ ರವೀಂದ್ರ ಅವರು ನೀರು ಕುಡಿಸಿ ಬದುಕಿಸಲು ಪ್ರಯತ್ನಿಸಿದರೂ ಕೂಡ ಆತಂಕಗೊಂಡಿದ್ದ ಜಿಂಕೆಯು ಸಾವನ್ನಪ್ಪಿದೆ.
ಜಿಂಕೆಯನ್ನು ನಾಯಿಗಳು ಬೆದರಿಸಿ ಬೆನ್ನಟ್ಟಿದ ಹಿನ್ನೆಲೆ ಹೃದಯಾಘಾತದಿಂದಾಗಿ ಜಿಂಕೆ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ್ದು, ಅರಣ್ಯ ರಕ್ಷಕ ಅಭಿಜಿತ್ ಮತ್ತು ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕವಷ್ಟೇ ಜಿಂಕೆಯ ಸಾವಿನ ಕುರಿತಾದ ಮಾಹಿತಿಗಳು ಲಭ್ಯವಾಗಲಿದೆ.
ತನು ಕೊಟ್ಟಿಗೆಹಾರ, ವರದಿಗಾರರು







0 Comments