ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಗೋಹತ್ಯೆ ನಿಷೇಧ ಮಾಡಬೇಕು, ಗೋ ಸಂತತಿಯನ್ನು ಉಳಿಸಬೇಕು ಎಂಬ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇಂತಹ ಕಠಿಣ ಕಾನೂನು ಕ್ರಮಗಳನ್ನು, ಕಾಯ್ದೆಗಳನ್ನು ಜಾರಿಗೆ ತಂದರೂ ಸಹ ಮಲೆನಾಡು ಭಾಗದಲ್ಲಿ ವ್ಯಾಪಕವಾಗಿ ಗೋಹತ್ಯೆ ನಡೆಯುತ್ತಲೇ ಇದೆ. ದನಗಳ್ಳರ ಹಾವಳಿ ಸಹ ಮಿತಿ ಮೀರಿದ್ದು ಕವರ್ ನಲ್ಲಿ ದನದ ಕಾಲುಗಳನ್ನು ತುಂಬಿ ರಸ್ತೆಯ ಪಕ್ಕದಲ್ಲೇ ಯಾರೋ ಗೋಹಂತಕರು ಬಿಸಾಡಿ ಹೋಗಿರುವ ಘಟನೆ ವರದಿಯಾಗಿದೆ.
ಇದನ್ನೂ ಓದಿ : ಅಕ್ರಮ ಸಂಬಂಧಕ್ಕಾಗಿ ವಿವಾಹಿತೆಯ ಪತಿಯನ್ನು ಜೈಲಿಗೆ ಹಾಕಿಸುವ ಸಂಚು ರೂಪಿಸಿದ್ದ ಆಯೂಬ್ ಪೊಲೀಸರ ಬಲೆಗೆ
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ರಾಷ್ಟ್ರೀಯ ಹೆದ್ದಾರಿ 173ರಲ್ಲಿ ಚಕ್ಕಮಕ್ಕಿ ಗ್ರಾಮದ ರಸ್ತೆ ಬದಿಯಲ್ಲಿ ದನದ ಕಾಲುಗಳು ಪತ್ತೆಯಾಗಿದೆ. ಪ್ಲಾಸ್ಟಿಕ್ ಕವರ್ ನಲ್ಲಿ ದನದ ಕಾಲುಗಳನ್ನು ತುಂಬಿ ಬಿಸಾಡಿದ್ದು, ರಸ್ತೆಯಲ್ಲಿರೋ ಬಿಡಾಡಿ ದನಗಳನ್ನು ಕಡಿದು ಸಾಗಾಟ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಒಂದೆಡೆ ಈ ಭಾಗದಲ್ಲಿ ಆಗಾಗ ನಡೆಯುತ್ತಿರುವ ಹುಲಿ ದಾಳಿಯಿಂದ ಹಸುಗಳು ಬಲಿಯಾಗುತ್ತಿದ್ದರೆ ಇನ್ನೊಂದೆಡೆ ಗೋಹಂತಕರ ಈ ರೀತಿಯ ಕೃತ್ಯಗಳಿಂದ ಕೃಷಿಕರು, ಜಾನುವಾರುಗಳ ಮಾಲೀಕರು ತೀವ್ರ ಆತಂಕಕ್ಕೆ ಜಾರಿದ್ದಾರೆ. ಇದಲ್ಲದೇ ಈ ಮಾರ್ಗದಲ್ಲಿ ವಾಹನಗಳ ಸಂಚಾರ ಹೆಚ್ಚಿರುವುದರಿಂದ ಅತೀವೇಗವಾಗಿ ವಾಹನಗಳ ಚಾಲನೆ ನಡೆಸುವ ಸವಾರರು ರಸ್ತೆಯ ಅಕ್ಕಪಕ್ಕದಲ್ಲಿ, ರಸ್ತೆಯಲ್ಲಿ ಮಲಗಿರುವ ದನಗಳ ಮೇಲೆ ಹತ್ತಿಸಿಕೊಂಡು ಹೋಗುವುದರಿಂದ ದನಗಳ ಸಾವನ್ನಪ್ಪುತ್ತಿವೆ.
ಈ ಘಟನೆಯು ಮೂಡಿಗೆರೆ ತಾಲೂಕಿನ ಬಣಕಲ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಈ ರೀತಿಯ ಅಕ್ರಮ ಕೃತ್ಯಗಳಿಗೆ ಪೊಲೀಸರು ಬ್ರೇಕ್ ಹಾಕಬೇಕು. ಗೋವುಗಳ ಸಾಗಾಟ ನಡೆಸುವವರ ವಿರುದ್ಧ ಕಾನೂನಿನ ಅಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

.jpeg)




0 Comments