ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ರಾಜ್ಯಮಟ್ಟದಲ್ಲಿ ಬಹು ಸುದ್ಧಿಯಾಗಿದ್ದ ಶೃಂಗೇರಿ ಹಕ್ಕುಪತ್ರ ಹಗರಣದ ತನಿಖೆ ಬಹುತೇಕ ಮುಗಿದಿದ್ದು, ತನಿಖೆಯ ವರದಿ ಅಷ್ಟೇ ಹೊರಬೀಳಬೇಕಿದೆ.
ಈ ನಡುವೆ ಅದೇ ಹಕ್ಕುಪತ್ರಗಳ ಮೇಲೆ ಇ ಸ್ವತ್ತು ನೀಡಿ ನಂತರ ಅದನ್ನು ಮುಚ್ಚಿ ಹಾಕಲು ತನಿಖೆಯ ಸಂಧರ್ಭದಲ್ಲಿ ಸಿಗದಂತೆ ಡಿಲೀಟ್ ಮಾಡಿದ್ದಾರೆ ಎಂದು ಈ ಹಿಂದೆ ಲೋಕಾಯುಕ್ತಕ್ಕೆ ದೂರು ದಾಖಲಾಗಿತ್ತು.
ಈ ಸಂಬಂಧ ಕರ್ನಾಟಕ ಲೋಕಾಯುಕ್ತವು ವಿದ್ಯಾರಣ್ಯಪುರ ಪಿಡಿಓ ಗೋಪಾಲ ಹಂಡ ಹಾಗೂ ಶೃಂಗೇರಿ ತಾಲೂಕು ಪಂಚಾಯಿತಿ ಇಓ ಜಯರಾಂಗೆ ತನಿಖೆ ಸಂಬಂಧ ನೋಟಿಸ್ ಜಾರಿ ಮಾಡಿದೆ. ಈ ಹಿಂದೆ ಹಣ ಪಡೆದು ಹಕ್ಕುಪತ್ರ ಹಂಚುವಾಗ ಎಸಿಬಿ ಬಲೆಗೆ ಬಿದ್ದು ಶೃಂಗೇರಿ ಹಳೆಯ ತಹಸೀಲ್ದಾರ್ ಅಂಬುಜಾ ಸೇರಿದಂತೆ ಹಲವರು ಜೈಲು ಪಾಲಾಗಿದ್ದರು, ಈಗ ಹಗರಣ ಸಂಬಂಧ ಮತ್ತಿಬ್ಬರ ತಲೆದಂಡವಾಗುವ ಸಾಧ್ಯತೆ ಕಾಣುತ್ತಿದೆ.
ಏನಿದು ಪ್ರಕರಣ :
ಕಳೆದ ಕೆಲವು ತಿಂಗಳ ಹಿಂದೆ ಶೃಂಗೇರಿ ತಹಸೀಲ್ದಾರ್ ಅಂಬುಜಾ ಹಾಗೂ ಟೀಂ ಜನರಿಂದ ಲಕ್ಷ ಲಕ್ಷ ಹಣ ಪಡೆದು ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಹಕ್ಕುಪತ್ರ ಹಂಚಿದ್ದರು, ಖಚಿತ ಮಾಹಿತಿಯ ಮೇರೆಗೆ ಎಸಿಬಿ ದಾಳಿ ನಡೆಸಿ ಓರ್ವ ಪಿಡಿಓ ಹಾಗೂ ಅಂಬುಜಾರನ್ನು ಬಂಧಿಸಿತ್ತು. ಈ ಪ್ರಕರಣ ಸಂಬಂಧ ಇನ್ನೂ ಹಲವು ಅಧಿಕಾರಿಗಳ ಮೇಲೆ ಪ್ರಕರಣ ದಾಖಲಾಗಿತ್ತು.
ಅದೇ ಸಂದರ್ಭದಲ್ಲಿ ತಾಲೂಕು ಕಛೇರಿಯಿಂದ ನೀಡಿದ್ದ ಹಕ್ಕುಪತ್ರಗಳಿಗೆ ಸರಿಯಾದ ಪೂರಕ ದಾಖಲೆ ಪಡೆಯದೆ ವಿದ್ಯಾರಣ್ಯಪುರ ಗ್ರಾಮ ಪಂಚಾಯಿತಿಯಲ್ಲಿ 46ಕ್ಕೂ ಅಧಿಕ ಇ ಸ್ವತ್ತುಗಳನ್ನು ನೀಡಲಾಗಿತ್ತು. ಆದರೆ ಹಕ್ಕುಪತ್ರ ಹಗರಣ ಹೊರಬಿದ್ದು ತನಿಖಾ ತಂಡ ನೇಮಕವಾಗುತ್ತಿದ್ದಂತೆ ತಾನೂ ಸಿಕ್ಕಿಬೀಳುವ ಭಯದಲ್ಲಿ ಪಂಚಾಯಿತಿ ಪಿಡಿಓ ಗೋಪಾಲಹಂಡ ತಾಲೂಕು ಪಂಚಾಯತಿ ಇಓ ಜಯರಾಂಗೆ ಹಣ ನೀಡಿ ಅವರ ಲಾಗಿನ್ ಮೂಲಕ ಡಿಲೀಟ್ ಮಾಡಿಸಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಅಶ್ವಿನ್ ಎಂಬುವವರು ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದರು.

.jpeg)



0 Comments