ಭಾರತದಾದ್ಯಂತ ಭಾರತೀಯರು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದರೆ, ಅತ್ತ ದೂರದ ಸೌದಿ ಅರೇಬಿಯಾದಲ್ಲೂ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಕಾಫಿನಾಡಿನ ಕುಟುಂಬವರ್ಗ ಹೆಮ್ಮೆಯಿಂದ ಆಚರಿಸಿದೆ. 

ಇದನ್ನೂ ಓದಿ : ಶೃಂಗೇರಿ : ಮನೆಯ ಹೊರಭಾಗದಲ್ಲಿ ನಿಲ್ಲಿಸಿದ್ದ ಬೈಕ್ ಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

ಮೂಲತಃ ಮೂಡಿಗೆರೆಯವರಾದ ಪರ್ವೀಜ್ ಖಾನ್ ಎಂಬುವವರ ಕುಟುಂಬವರ್ಗದವರು ಕಳೆದ ಕೆಲ ವರ್ಷಗಳಿಂದ ಸೌದಿ ಅರೇಬಿಯಾದ ಹಾಯಿಲ್ ಸಿಟಿಯಲ್ಲಿ ವಾಸವಾಗಿದ್ದಾರೆ. ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ವಿದೇಶದಲ್ಲಿದ್ದೇ ಬಹಳಷ್ಟು ಹೆಮ್ಮೆಯಿಂದ ಆಚರಿಸಿರುವ ಅವರು ತಮ್ಮ ಮಕ್ಕಳೊಂದಿಗೆ ಭಾರತದ ತ್ರಿವರ್ಣ ಧ್ವಜವನ್ನು ಹಿಡಿದು ಸಂಭ್ರಮಿಸಿದ್ದಾರೆ. 


ಸ್ವಾತಂತ್ರೋತ್ಸವದ ಹಿನ್ನೆಲೆಯಲ್ಲಿ ಸಡಗರದಿಂದ ತಿರಂಗವನ್ನ ಹಿಡಿದು ಪೋಷಕರು ಹಾಗೂ ಮಕ್ಕಳು ಸಂಭ್ರಮಿಸಿದ್ದಾರೆ. ಕಾಫಿನಾಡಿನ ಕುಟುಂಬವರ್ಗದವರು ದೂರದ ಸೌದಿ ಅರೇಬಿಯಾದಿಂದ ದೇಶ ಪ್ರೇಮವನ್ನು ಮೆರೆದಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ.

ಅಮೃತ ಮಹೋತ್ಸವದ ಸಡಗರ ಭಾರತ ದೇಶದ ಹೊರಗೂ ವ್ಯಾಪಕವಾಗಿ ಕಾಣಸಿಗುತ್ತಿರುವುದು ನಮ್ಮ ಮಣ್ಣಿನ ಗರಿಮೆ, ಸಂಸ್ಕೃತಿ , ಪರಂಪರೆಯನ್ನು ಎತ್ತಿ ಹಿಡಿಯುತ್ತಿದೆ.

ತನು ಕೊಟ್ಟಿಗೆಹಾರ, ವರದಿಗಾರರು