ಹಾಸನ : (ನ್ಯೂಸ್ ಮಲ್ನಾಡ್ ವರದಿ) ಮಹಿಳೆಯೋರ್ವರ ನಡೆದುಕೊಂಡು ಹೋಗುತ್ತಿದ್ದ ವೇಳೆ ಮಹಿಳೆಯ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರವನ್ನು ಕಳ್ಳ ಕದ್ದೊಯ್ದಿರುವ ಘಟನೆ ಬೆಳಕಿಗೆ ಬಂದಿದೆ.

ಹಾಸನದ ಅರಕಲಗೂಡು ಪಟ್ಟಣದ ಬ್ರಾಹ್ಮಣ ಬೀದಿಯಲ್ಲಿ ಈ ಘಟನೆ ನಡೆದಿದ್ದು ತರಕಾರಿ ವ್ಯಾಪಾರ ಮುಗಿಸಿ ಮನೆಗೆ ತೆರಳುತ್ತಿದ್ದ ಮಹಿಳೆ ಸುಮಿತ್ರಾ ಎಂಬುವವರನ್ನು ಬೈಕ್ ನಲ್ಲಿ ಹಿಂಬಾಲಿಸಿದ ಕಳ್ಳ ನಂತರದಲ್ಲಿ ಬೈಕ್ ನಿಲ್ಲಿಸಿ ನಡೆದೇ ಮಹಿಳೆಯ ಹಿಂದೆ ಸಾಗಿದ್ದಾನೆ. ಹಿಂಬದಿಯಿಂದ ಮಹಿಳೆಯ ಕುತ್ತಿಗೆಗೆ ಕೈ ಹಾಕಿ ಸರ ಎಗರಿಸಿ ಕಳ್ಳ ಎಸ್ಕೇಪ್ ಆಗಿದ್ದಾನೆ. 

ಇದನ್ನೂ ಓದಿ : ಕಾಂಗ್ರೆಸ್ಸಿಗರು ಅಳವಡಿಸಿದ್ದ ಗಣೇಶ ಚತುರ್ಥಿ ಶುಭಕೋರುವ ಬ್ಯಾನರ್ ನ್ನು ಹರಿದ ಬಿಜೆಪಿ ಮುಖಂಡ



ಘಟನಾ ಸಂಬಂಧ ಅರಕಲಗೂಡು ಠಾಣೆಗೆ ತೆರಳಿ ದೂರು ದಾಖಲು ಮಾಡಿರುವ ಮಹಿಳೆ 1.20 ಲಕ್ಷ ರೂ. ಬೆಲೆಯ 30 ಗ್ರಾಂ ತೂಕದ ಮಾಂಗಲ್ಯಸರವನ್ನು ಕಳ್ಳರು ಕದ್ದಿದ್ದಾರೆ. ಆರೋಪಿಗಳ ಪತ್ತೆ ಮಾಡಿ ಸರವನ್ನು ಮರಳಿ ಹುಡುಕಿ ಒದಗಿಸಬೇಕು ಎಂದು ಪ್ರಕರಣ ದಾಖಲಿಸಿದ್ದಾರೆ. ಘಟನೆಯಿಂದ ಆತಂಕಕ್ಕೊಳಗಾಗಿರುವ ಸ್ಥಳೀಯರು ಈ ಸಂಬಂಧ ಪೊಲೀಸರು ಹೆಚ್ಚಿನ ನಿಗಾವಹಿಸಿ ಸಾರ್ವಜನಿಕರ ರಕ್ಷಣೆಗೆ ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ.

ಕಾಂಗ್ರೆಸ್ಸಿಗರು ಅಳವಡಿಸಿದ್ದ ಗಣೇಶ ಚತುರ್ಥಿ ಶುಭಕೋರುವ ಬ್ಯಾನರ್ ನ್ನು ಹರಿದ ಬಿಜೆಪಿ ಮುಖಂಡ :

ಹಾಸನ: ಹಾಸನದಲ್ಲಿ ಕಾಂಗ್ರೆಸ್ಸಿಗರು ಗಣಪತಿ ಹಬ್ಬಕ್ಕೆ ಶುಭಕೋರಿ ಅಳವಡಿಸಿದ್ದ ಪ್ಲೆಕ್ಸ್ ನ್ನು ಬಿಜೆಪಿ ಯುವಮೋರ್ಚಾ ತಾಲೂಕು ಮುಖಂಡ ದೊಣ್ಣೆಯಿಂದ ಹೊಡೆದು ಹರಿದು ಹಾಕಿರುವ ಘಟನೆ ನಡೆದಿದೆ. 

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ಕಾಂಗ್ರೆಸ್ ಮುಖಂಡರಾದ ಮುರಳಿಮೋಹನ್ ಎಂಬುವವರ ಬೆಂಬಲಿಗರು ಗಣೇಶ ಚತುರ್ಥಿಯ ಅಂಗವಾಗಿ ಶುಭಕೋರಿ ಅಳವಡಿಸಿದ್ದ ಬ್ಯಾನರ್ ನ್ನು ಬಿಜೆಪಿ ಯುವಮೋರ್ಚಾ ತಾಲೂಕು ಪದಾಧಿಕಾರಿ ದೊಣ್ಣೆಯಿಂದ ಹೊಡೆದು ಸಂಪೂರ್ಣವಾಗಿ ಹರಿದು ಹಾಕಿದ್ದಾರೆ. ಫ್ಲೆಕ್ಸ್ ಹರಿದು ಹಾಕಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಕಾಂಗ್ರೆಸ್ಸಿಗರು ತೀವ್ರತರಹದ ಆಕ್ರೋಶವನ್ನು ಹೊರಹಾಕಿದ್ದಾರೆ. 


ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ಬ್ಯಾನರ್, ಫ್ಲೆಕ್ಸ್ ಅಳವಡಿಕೆಯಲ್ಲೂ ತೀವ್ರತರಹದ ಗಲಾಟೆಗಳು ಸಂಭವಿಸುತ್ತಿದ್ದು ರಾಜಕೀಯ ಪಕ್ಷಗಳ ಬೆಂಬಲಿಗರು ಸ್ವಪಕ್ಷಗಳ ಅಸ್ತಿತ್ವಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ. ಇನ್ನೇನು ಕೇವಲ ಎರಡು ದಿನಗಳಲ್ಲಿ ಅದ್ಧೂರಿಯಾದ ಗಣಪತಿ ಹಬ್ಬ ಆಚರಿಸಲು ಗಣಪತಿ ಮಂಡಳಿಗಳು, ದೇವಸ್ಥಾನಗಳು ಭರದಿಂದ ಸಿದ್ಧತೆ ನಡೆಸುತ್ತಿದ್ದರೆ ಇಂತಹ ಘಟನೆಗಳನ್ನು ಸಾರ್ವಜನಿಕರಲ್ಲಿ ಆತಂಕದ ವಾತಾವರಣವನ್ನು ಸೃಷ್ಟಿ ಮಾಡುತ್ತಿದೆ.