ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಲಾರಿ ಹಾಗೂ ಕಾರ್ ನ ನಡುವೆ ಕೆರೆಕಟ್ಟೆ ಮಾರ್ಗದಲ್ಲಿ ರಸ್ತೆ ಅಪಘಾತ ಸಂಭವಿಸಿದೆ.
ಇದನ್ನೂ ಓದಿ : ಚಿಕ್ಕಮಗಳೂರು: ಗಣೇಶೋತ್ಸವಕ್ಕೆ ಈ ಬಾರಿಯೂ ಡಿಜೆಗೆ ಇಲ್ಲ ಅನುಮತಿ ; ಎಸ್ಪಿ ಉಮಾ ಪ್ರಶಾಂತ್
ಚಿಕ್ಕಮಗಳೂರು ಜಿಲ್ಲೆಯ ಪವಿತ್ರ ಧಾರ್ಮಿಕ ಕ್ಷೇತ್ರಗಳಾದ ಶೃಂಗೇರಿ, ಹೊರನಾಡು, ಕಳಸವನ್ನು ಹಾಗೂ ವಿವಿಧ ಪ್ರವಾಸಿತಾಣಗಳನ್ನು ಸಂಪರ್ಕಿಸುವ ರಾಷ್ಟ್ರೀಯಹೆದ್ದಾರಿ 169 ರ ಕೆರೆಕಟ್ಟೆಯ ಮೀನತ್ ಹಳ್ಳದ ಬಳಿಯಲ್ಲಿ ಶೃಂಗೇರಿಯಿಂದ ಕಾರ್ಕಳಕ್ಕೆ ತೆರಳುತ್ತಿದ್ದ ಲಾರಿ ಹಾಗೂ ಮಂಗಳೂರಿನಿಂದ ಶೃಂಗೇರಿ ದೇವಾಲಯಕ್ಕೆಂದು ಬರುತ್ತಿದ್ದ ಪ್ರವಾಸಿಗರ ಕಾರಿನ ನಡುವೆ ಈ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯಗಳಿಗೆ ತುತ್ತಾಗಿದ್ದಾರೆ.
ಅದೃಷ್ಟವಶಾತ್ ಎಂಬಂತೆ ಎರಡೂ ವಾಹನಗಳಲ್ಲಿದ್ದವರು ಪ್ರಾಣಾಪಾಯಗಳಿಂದ ಪಾರಾಗಿದ್ದು, ಕಾರಿನ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡಿದೆ. ನಿಯಂತ್ರಣ ಕಳೆದುಕೊಂಡ ಕಾರ್ ಸಂಪೂರ್ಣವಾಗಿ ರಸ್ತೆ ಪ್ರದೇಶದಿಂದ ಬದಿಗೆ ಸರಿದಿದ್ದು, ಲಾರಿಯೂ ಕೂಡ ರಸ್ತೆಯ ಪಕ್ಕದಲ್ಲಿ ನಿಂತಿದೆ.
ಈ ಮಾರ್ಗದಲ್ಲಿ ವಾಹನಗಳ ಸಂಚಾರ ಹೆಚ್ಚಿದ್ದು, ಹೆಚ್ಚಿನ ತಿರುವು ಮುರುವುಗಳನ್ನು ಹಾಗೂ ಕಿರಿದಾದ ರಸ್ತೆಯನ್ನು ಹೊಂದಿರುವುದರಿಂದ ಮತ್ತು ಈ ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ವಾಹನಸವಾರರು ನಿಧಾನಗತಿಯಲ್ಲಿ ರಸ್ತೆನಿಯಮಗಳನ್ನು ಪಾಲಿಸಿಕೊಂಡು ಸಂಚಾರ ಮಾಡಬೇಕಿದೆ. ದಟ್ಟ ಅರಣ್ಯ ಪ್ರದೇಶ ಮತ್ತು ಕಡಿದಾದ ರಸ್ತೆಯನ್ನು ಹೊಂದಿರುವ ಕಾರಣ ಈ ಮಾರ್ಗದಲ್ಲಿ ಸಂಭವಿಸುವ ಅಪಘಾತಗಳ ಸಂಖ್ಯೆ ಹೆಚ್ಚಿದ್ದು ಜಾಗರೂಕತೆಯಿಂದ ಚಾಲನೆ ಮಾಡಬೇಕಿದೆ.





.jpeg)

0 Comments