ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಈದ್ಗಾ ಮೈದಾನದ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಜಮೀರ್ ಅಹಮದ್ ವಿರುದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ : ಅಕ್ರಮವಾಗಿ ಜೂಜಾಟದಲ್ಲಿ ಭಾಗಿಯಾಗಿದ್ದ ಐವರು ಸೆರೆ ; ಪ್ರಕರಣ ದಾಖಲು

ಈ ಕುರಿತಾಗಿ ಮಾತನಾಡಿದ ಅವರು ಅಮಾವಾಸ್ಯೆ ಹುಣ್ಣಿಮೆಗೆ ಯಾರ್ಯಾರಿಗೋ ಯಾವುದೋ ರೀತಿಯ ಭಾವನೆಗಳು, ಏನೇನೋ ಎನ್ನಿಸಲು ಶುರುವಾಗುತ್ತದೆ. ಅದು ಅವರವರ ರೋಗ ಅವರು ಸರಿ ಇದ್ದಾರೆ ಎನ್ನುವುದಕ್ಕೆ ಆಗುವುದಿಲ್ಲ ಎಂಬುದಾಗಿ ಶಾಸಕ ಸಿ.ಟಿ ರವಿ ಗುಡುಗಿದ್ದಾರೆ. 


10 ಬಾರಿ ಮುಖ್ಯಮಂತ್ರಿ ಬದಲಾವಣೆಯಾಗಬೇಕಿತ್ತು :

ರಾಜ್ಯದ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪ್ರಮಾಣ ವಚನ ಸ್ವೀಕರಿಸಿದ ನಂತರದ ದಿನಗಳಿಂದ ಕಾಂಗ್ರೆಸ್ ಸಿಎಂ ಬದಲಾವಣೆ ಕುರಿತು ಮಾತನಾಡಲು ಆರಂಭಿಸಿದೆ. ಅವರ ವರದಿಯೇ ನಿಜವಾಗಿದ್ರೆ ಇಷ್ಟರಲ್ಲಿ ಹತ್ತುಬಾರಿ ಮುಖ್ಯಮಂತ್ರಿಗಳ ಬದಲಾವಣೆಯಾಗಬೇಕಿತ್ತು ಎಂದು ತೀವ್ರವಾಗಿ ಕುಟುಕಿದ್ದಾರೆ. 

ಗಣಪತಿ ಪ್ರತಿಷ್ಠಾಪನೆಯನ್ನು ಈದ್ಗಾ ಮೈದಾನದಲ್ಲಿ ಮಾಡದಂತೆ ಹೇಳಲು ಜಮೀರ್ ಅಹಮದ್ ಅವರಿಗೇನು ಅಧಿಕಾರವಿದೆ, ಅವರೇನು ವಿಶೇಷ ಅಧಿಕಾರಿಯೇ ಎಂದು ಪ್ರಶ್ನಿಸಿದ್ದಾರೆ. ಎಲ್ಲರೂ ಒಂದಾಗಿ ಆಚರಿಸುವ ಸಾರ್ವಜನಿಕ ಗಣೇಶ ಚತುರ್ಥಿ ಹಬ್ಬಕ್ಕೆ ಜಮೀರ್ ಅಹಮದ್ ಅಪ್ಪಣೆ ಪಡೆಯಬೇಕೆಂದು ದುರಾದೃಷ್ಟಕರ ಸಂಗತಿಯಾಗಿದೆ. ಈದ್ಗಾ ಮೈದಾನ ಸರ್ಕಾರದ ಆಸ್ತಿ, ಗಣಪತಿ ಕೂರಿಸಲು ನಾನು ಬಿಡುವುದಿಲ್ಲ ಎಂಬುದು ಜಮೀರ್ ಅಸಹಿಷ್ಣು ಭಾವನೆಯನ್ನು ತೋರುತ್ತದೆ ಎಂದು ವಾಗ್ದಾಳಿ ನಡೆಸಿದರು.