ತೀರ್ಥಹಳ್ಳಿ : (ನ್ಯೂಸ್ ಮಲ್ನಾಡ್ ವರದಿ) ಬೈಕ್ ಹಾಗೂ ಓಮಿನಿ ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಚಾಲನೆ ನಡೆಸುತ್ತಿದ್ದ ಶಾಲಾ ಮುಖ್ಯೋಪಾಧ್ಯಾಯರು ಕೊನೆಯುಸಿರೆಳೆದಿದ್ದಾರೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕಟ್ಟೆಹಕ್ಲು ಸಮೀಪ ಈ ದುರಂತ ಸಂಭವಿಸಿದ್ದು, ಕಟ್ಟೆಹಕ್ಲು ಬಳಿಯ ನಾಗರವಳ್ಳಿ ಸಮೀಪದ ರಸ್ತೆ ತಿರುವಿನಲ್ಲಿ ಓಮಿನಿ ಕಾರ್ ಗೆ ಬೈಕ್ ಡಿಕ್ಕಿ ಹೊಡೆದು ಶಾಲಾ ಮುಖ್ಯೋಪಾಧ್ಯಾಯ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ.
ಇದನ್ನೂ ಓದಿ : ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಕಾರಿನ ನಡುವೆ ಮುಖಾಮುಖಿ ರಸ್ತೆ ಅಪಘಾತ
ಮೃತ ಶಾಲಾ ಮುಖ್ಯೋಪಾಧ್ಯಯರನ್ನು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಬೊಮ್ಲಾಪುರ ನಿವಾಸಿ ವೆಂಕಟೇಶ್ ಎಂದು ಗುರುತಿಸಲಾಗಿದೆ. ಶಾಲಾ ಕಾರ್ಯದ ನಿಮಿತ್ತ ತೆರಳುವಾಗ ಈ ಅಪಘಾತ ಸಂಭವಿಸಿದೆ ಎನ್ನಲಾಗಿದ್ದು, ಮೃತ ಶಿಕ್ಷಕ ವೆಂಕಟೇಶ್ ಅವರು ಉತ್ತಮ ಶಿಕ್ಷಕ ಎಂದು ಈ ಭಾಗದಲ್ಲಿ ಹೆಸರು ಮಾಡಿದ್ದರು.
ನೆಚ್ಚಿನ ಶಿಕ್ಷಕನನ್ನು ಕಳೆದುಕೊಂಡ ಶಾಲಾ ವಿದ್ಯಾರ್ಥಿಗಳು ಹಾಗೂ ಶಾಲೆಯ ಸಹ ಶಿಕ್ಷಕರು ಮೃತರ ಸಾವಿನ ಕುರಿತು ಅತೀವ ಬೇಸರವನ್ನು ಹೊರಹಾಕಿದ್ದಾರೆ. ಸ್ಥಳೀಯರು ಕೂಡ ಉತ್ತಮ ಶಿಕ್ಷಕರಾಗಿದ್ದ ವೆಂಕಟೇಶ್ ಅವರ ಸಾವಿನ ಕುರಿತು ಸಂತಾಪ ಸೂಚಿಸಿದ್ದಾರೆ. ಘಟನಾ ಸಂಬಂಧ ತೀರ್ಥಹಳ್ಳಿಯ ಮಾಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


.jpeg)



0 Comments