ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಜಿಲ್ಲೆಯಲ್ಲಿ ಅನಧಿೃತವಾಗಿ ತಲೆಯೆತ್ತಿರುವ ಹೋಂ ಸ್ಟೇ ಗಳಿಂದ ತೀವ್ರತರವಾದ ಸಮಸ್ಯೆ ಎದುರಾಗಿದ್ದು ಇದರಿಂದಾಗಿ ನೋಂದಣಿ ಮಾಡಿಕೊಂಡು ಜನರಿಗೆ ಉತ್ತಮ ಹಾಗೂ ಉತ್ಕೃಷ್ಟವಾದ ಸೇವೆಗಳನ್ನು ನೀಡುತ್ತಾ ಬಂದಿರುವ ಅಧಿಕೃತ ಹೋಂ ಸ್ಟೇಗಳಿಗೂ ಸಮಸ್ಯೆಗಳು ಎದುರಾಗಿದೆ ಈ ಕುರಿತಾಗಿ ಕ್ರಮ ಕೈಗೊಳ್ಳಬೇಕೆಂದು ಹೋಂ ಸ್ಟೇ ಅಸೋಸಿಯೇಶನ್ ಪದಾಧಿಕಾರಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಕೋರಿದರು.
ಇದನ್ನೂ ಓದಿ : ಚಿಕ್ಕಮಗಳೂರು : ಸ್ಮಶಾನಕ್ಕೆ ತೆರಳಲು ದಾರಿಯಿಲ್ಲದೆ ರಸ್ತೆ ಮಧ್ಯ ಶವವಿಟ್ಟು ಪ್ರತಿಭಟನೆ
ಜಿಲ್ಲೆಗೆ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿನೀಡಲಿದ್ದು, ಅಕ್ರಮವಾಗಿ ತಲೆ ಎತ್ತಿರುವ ಹೋಂ ಸ್ಟೇ ಗಳ ಮೇಲೆ ಸಂಬಂಧಿಸಿದ ಅಧಿಕಾರಿಗಳು ಸೂಕ್ತವಾದ ಕ್ರಮಗಳನ್ನು ಜರುಗಿಸಿ ಇಂತಹ ಅನಧಿಕೃತ ಹೋಂ ಸ್ಟೇ ಗಳಿಂದ ಆಗಮಿಸುವ ಪ್ರವಾಸಿಗರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರಲ್ಲಿ ಮನವಿ ಮಾಡಿದರು.
ನೋಂದಣಿ ಮಾಡಿಕೊಂಡು ಆಗಮಿಸುವವರಿಗೆ ಉತ್ಕೃಷ್ಟವಾದ ಸೇವೆಗಳನ್ನು ನೀಡುತ್ತಿರುವ ಹೋಂ ಸ್ಟೇ ಗಳ ಮಾಲೀಕರಿಗೆ ಇಂತಹ ಬ್ಲಾಕ್ ಮೇಲ್ ಪ್ರಕರಣಗಳು, ತಲೆ ತಗ್ಗಿಸುವಂತೆ ಮಾಡುತ್ತದೆ ಆದ ಕಾರಣ ಕಳಂಕ ಉಂಟುಮಾಡುವ ಇಂತಹ ಅಕ್ರಮ ಹಾಗೂ ಅನಧಿಕೃತ ಹೋಂ ಸ್ಟೇ ಗಳ ಮೇಲೆ ಕಾನೂನಿನ ಅಡಿಯಲ್ಲಿ ಕಠಿಣವಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪದಾಧಿಕಾರಿಗಳು ಕೋರಿದರು. ಅಕ್ರಮವಾಗಿ ತಲೆ ಎತ್ತಿರುವ ಹೋಂ ಸ್ಟೇ ಗಳಿಗೆ ಬೀಗ ಮುದ್ರೆ ಹಾಕಿ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.
ಜಿಲ್ಲಾಧಿಕಾರಿಗಳಾದ ಕೆ.ಎನ್ ರಮೇಶ್, ಜಿಲ್ಲಾ ಪಂಚಾಯತ್ ಸಿಇಓ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರಿಗೆ ಈ ಕುರಿತಾದ ಮನವಿ ಸಲ್ಲಿಸಿದ ಅಸೋಸಿಯೇಶನ್ ನ ಪದಾಧಿಕಾರಿಗಳಿಗೆ ಈ ಕುರಿತಾಗಿ ಶೀಘ್ರವೇ ಕ್ರಮ ಕೈಗೊಳ್ಳುವ ಭರವಸೆಯನ್ನು ಅಧಿಕಾರಿಗಳು ನೀಡಿದರು.
ಈ ಸಂದರ್ಭದಲ್ಲಿ ಅಸೋಸಿಯೇಶನ್ ನ ಅಧ್ಯಕ್ಷರಾದ ಎನ್.ಆರ್ ತೇಜಸ್ವಿ, ಉಪಾಧ್ಯಕ್ಷ ಪ್ರವೀಣ್, ಹೊಲದಗದ್ದೆ ಗಿರೀಶ್, ಅನ್ಸಾರ್ ಜಹೂರ್, ಅಕ್ಷತಾ ಪ್ರಸನ್ನ, ವರುಣ್, ಅವರಂಗ್ ಸೇರಿದಂತೆ ಪದಾಧಿಕಾರಿಗಳು ಇದ್ದರು.

.jpeg)




0 Comments