ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಭಾರತೀಯರ ಹೆಮ್ಮೆಯಾದ ತ್ರಿವರ್ಣ ಧ್ವಜವನ್ನು ಸಿಗರೇಟಿನಿಂದ ಸುಟ್ಟು ರಾಷ್ಟ್ರ ಧ್ವಜದ ಘನತೆಗೆ ಧಕ್ಕೆ ಉಂಟುಮಾಡಿದ್ದ ಕಿಡಿಗೇಡಿಯನ್ನು ಪೊಲೀಸರು ಬಂಧಿಸಿದ್ದಾರೆ. 

ಇದನ್ನೂ ಓದಿ : ಮುಸ್ಲಿಂ ಯುವಕರೊಂದಿಗೆ ಹಿಂದೂ ಯುವತಿಯಿದ್ದ ಕಾರಣ ಗುಂಪಿನಿಂದ ಹಲ್ಲೆ ; ಪ್ರಕರಣ ದಾಖಲು

75 ನೆಯ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ದೇಶಾದ್ಯಂತ ಹರ್ ಘರ್ ತಿರಂಗಾ ಅಭಿಯಾನ ನಡೆದಿತ್ತು. ಈ ಸಮಯದಲ್ಲಿ ದೇಶದ ಅಸ್ಮಿತೆ ಹಾಗೂ ಗೌರವದ ಪ್ರತೀಕವಾದ ರಾಷ್ಟ್ರ ಧ್ವಜವನ್ನು ಕಿಡಿಗೇಡಿ ವ್ಯಕ್ತಿ ಗೌರವಿಸದೆ ಸಿಗರೇಟ್ ನಿಂದ ತೂತು ಮಾಡಿ ವಿಕೃತಿ ಮೆರೆದಿದ್ದ.


ಬಂಧಿತನನ್ನು ಚಿಕ್ಕಮಗಳೂರಿನ ಅಸ್ಗರ್ ಎಂದು ಗುರುತಿಸಲಾಗಿದೆ. ಈತ ಸಿಗರೇಟು ಸೇದಿ ಮನೆ ಬಳಿ ಕಟ್ಟಿದ್ದ ರಾಷ್ಟ್ರ ಧ್ವಜವನ್ನು ಸುಟ್ಟು ತೂತು ಮಾಡುತ್ತಿರುವ ವಿಡಿಯೋ ಈ ಹಿಂದೆ ವೈರಲ್ ಆಗಿತ್ತು. ಈ ನಂತರದಲ್ಲಿ ರಾಷ್ಟ್ರಧ್ವಜಕ್ಕೆ‌ ಅಪಮಾನ ಎಸಗಿದವನನ್ನು ಬಿಡದೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದರು.

ಇದೆಲ್ಲದರ ನಂತರ ಕಾರ್ಯಾಚರಣೆಗಿಳಿದ ಚಿಕ್ಕಮಗಳೂರಿನ ಪೊಲೀಸರು ಆರೋಪಿ ವಾಸವಿದ್ದ ಬಾರಲೇನ್ ಪ್ರದೇಶದ ಬಾಡಿಗೆ ಮನೆ ಮೇಲೆ ದಾಳಿ ನಡೆಸಿದ್ದರು. ಆದರೆ ಆರೋಪಿ ಚಿಕ್ಕಮಗಳೂರು ನಗರದ ಬಸ್ ನಿಲ್ದಾಣದಲ್ಲಿ ಪತ್ತೆಯಾಗಿದ್ದ ಎನ್ನಲಾಗಿದ್ದು. ಆತನ‌ನ್ನು ಬಂಧಿಸಿದ ಪೊಲೀಸರು ಆತನ ಬಳಿ‌ ಇದ್ದ ವಿರೂಪಗೊಂಡ ಧ್ವಜವನ್ನು ವಶಕ್ಕೆಪಡೆದು, ರಾಷ್ಟ್ರದ ಗೌರವಕ್ಕೆ ಅಪಮಾನ ಮಾಡಿದ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.