ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ಹಾರ್ಡ್ ವೇರ್ ನಡೆಸುತ್ತಿದ್ದ ಉದ್ಯಮಿ ಹಾಗೂ ಆತನ ಮಗನಿಗೆ ಗುತ್ತಿಗೆದಾರ ನೋರ್ವ ಚೂರಿ ಇರಿದು ಓರ್ವ ವ್ಯಕ್ತಿಯನ್ನು ಕೊಂದಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಶಿವಮೊಗ್ಗದ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು ಶಿರಾಳಕೊಪ್ಪದ ಹಾರ್ಡ್ ವೇರ್ ಉದ್ಯಮಿ ದಯಾನಂದ ಹಾಗೂ ಇವರ ಪುತ್ರ ರಾಘವೇಂದ್ರ ಚಾಕು ಇರಿತಕ್ಕೊಳಗಾದವರು. ಈ ಕೃತ್ಯವನ್ನು ಎಸಗಿದಾತನನ್ನು ಕಂಟ್ರಾಕ್ಟರ್ ಕೋಟೇಶಪ್ಪ ಎಂದು ಗುರುತಿಸಲಾಗಿದ್ದು ಈತನು ಕಾಂಟ್ರಾಕ್ಟ್ ವಿಷಯಕ್ಕೆ ಸಂಬಂಧಿಸಿದಂತೆ ಚೂರಿ ಇರಿದಿದ್ದಾನೆ ಎನ್ನಲಾಗಿದೆ.
ದಯಾನಂದ್ ಶಿರಾಳಕೊಪ್ಪದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ನಡೆಸುತ್ತಿದ್ದರು. ಕಂಟ್ರಾಕ್ಟರ್ ಕೋಟೇಶಪ್ಪನಿಗೆ ಈ ಕಾಮಗಾರಿಯ ಸಲುವಾಗಿ ಕೆಲಸ ನೀಡಿದ್ದು, ಕಾಮಗಾರಿ ಸರಿಯಾಗಿ ನಿರ್ವಹಿಸದ ಹಿನ್ನೆಲೆಯಲ್ಲಿ ಕೋಟೇಶಪ್ಪನೊಂದಿಗಿನ ವ್ಯವಹಾರವನ್ನು ದಯಾನಂದ್ ಸ್ಥಗಿತಗೊಳಿಸಿದ್ದರು. ಈ ಬಳಿಕದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಬೇರೆಯವರಿಗೆ ನೀಡಿದ್ದರು.
ಹೀಗಾಗಿ ಸಿಟ್ಟಿಗೆದ್ದ ಕೋಟೇಶಪ್ಪ ಇಂದು ದಯಾನಂದ್ ಅವರ ಹಾರ್ಡ್ವೇರ್ ಶಾಪ್ ಗೆ ಏಕಾಏಕಿ ನುಗ್ಗಿ, ದಯಾನಂದ್ ಹಾಗೂ ರಾಘವೇಂದ್ರ ಇಬ್ಬರಿಗೂ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಚೂರಿ ಇರಿತಕ್ಕೊಳಗಾಗಿ ಗಂಭೀರವಾಗಿ ಗಾಯಗೊಂಡ ದಯಾನಂದ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ರಾಘವೇಂದ್ರ ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಘಟನಾ ಸಂಬಂಧ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಈ ಕುರಿತು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.





0 Comments