ಶಿವಮೊಗ್ಗ: ಮನೆಯೊಂದರ ಹೊರಗಿದ್ದ ಶೂ ನಲ್ಲಿ ಬೆಚ್ಚಗೆ ಅವಿತು ಕುಳಿತು ನಾಗರಹಾವೊಂದು ಸೈಲೆಂಟಾಗಿ ಆಶ್ರಯಪಡೆದಿದ್ದ ಘಟನೆ ಶಿವಮೊಗ್ಗದ ಬೊಮ್ಮನಕಟ್ಟೆ ಬಡಾವಣೆಯಲ್ಲಿ ನಡೆದಿದೆ.

ವಿಷಯ ಮನೆಯವರಿಗೆ ತಿಳಿದ ಕೂಡಲೇ ಉರಗಪ್ರೇಮಿ ಸ್ನೇಕ್ ಕಿರಣ್ ಅವರನ್ನು ಕರೆಸಿ ಹಾವನ್ನು ಸುರಕ್ಷಿತವಾಗಿ ಹಿಡಿದು ರಕ್ಷಿಸಲಾಯಿತು.



ಸಾಮಾನ್ಯವಾಗಿ ಮಳೆಗಾಲದಲ್ಲಿ ಆಹಾರಕ್ಕಾಗಿ ಹಾಗೂ ಮಳೆಯಿಂದ ತಪ್ಪಿಸಿಕೊಳ್ಳಲು ಮನೆಗಳ ಸಮೀಪ ಬರುತ್ತವೆ. ಇನ್ನು ಕಪ್ಪೆ, ಇಲಿಗಳನ್ನು ಆಹಾರಕ್ಕಾಗಿ ಅರಸಿ ಬರುವ ಹಾವುಗಳು ಶೂ, ಬೈಕ್, ಕಾರ್, ಕೊಟ್ಟಿಗೆ, ಹುಲ್ಲು ಇವುಗಳಲ್ಲಿ ಅವಿತುಕೊಳ್ಳುತ್ತವೆ.

ಹಾವಿನ ಬಗ್ಗೆ ಭಯ ಬೇಡ. ಜಾಗೃತಿ ಇರಲಿ : 

ಅದೊಂದು ಸಾಮಾನ್ಯ ಜೀವಿ. ಹಾಗೆಂದು ಯಾವುದೇ ಪೂರ್ವ ತಯಾರಿ ಅಥವಾ ಸೂಕ್ತ ತರಬೇತಿ ಇಲ್ಲದೆ ಅದನ್ನು ಹಿಡಿಯಲು ಮುಂದಾಗುವುದು ಬಹಳ ಅಪಾಯಕಾರಿ ಕೆಲಸ ಎಂದು ಸ್ನೇಕ್ ಕಿರಣ್ ಕಿವಿ ಮಾತು ಹೇಳಿದರು.