ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಸರ್ಕಾರಿ ಬಸ್ ಚಲಿಸುತ್ತಿರುವ ಸಮಯದಲ್ಲಿ ಇದ್ದಕ್ಕಿದ್ದಂತೆ ಬಸ್ಸಿನ ಎರಡು ಚಕ್ರಗಳು ಕಳಚಿ ಬಿದ್ದಿರುವ ದುರಂತ ಚಿಕ್ಕಮಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಚಿಕ್ಕಮಗಳೂರು ತಾಲೂಕಿನ ಮಾಗಡಿ ಸಮೀಪ ಗುರುವಾರ ಈ ಘಟನೆ ಸಂಭವಿಸಿದ್ದು, ನಿಧಾನಗತಿಯಲ್ಲಿ ಚಾಲನೆಯಲ್ಲಿದ್ದ ಬಸ್ ನ ಎರಡು ಚಕ್ರಗಳು ಬಸ್ಸಿನಿಂದ ಅಚಾನಕ್ಕಾಗಿ ಬೇರ್ಪಟ್ಟಿದೆ. ಈ ರೀತಿ ಘಟನೆಗಳು ಸಂಭವಿಸುವ ಸಾಧ್ಯತೆಗಳು ಕಡಿಮೆಯಾಗಿದ್ದು ಈ ಘಟನೆ ಸಂಭವಿಸಿದ ಸಮಯದಲ್ಲಿ ಬಸ್ಸಿನಲ್ಲಿದ್ದ ಪ್ರಯಾಣಿಕರು ತೀವ್ರ ಆತಂಕಕೊಳಗಾಗಿದ್ದರು.
ಬಸ್ಸಿನಲ್ಲಿದ್ದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಗಾಯಗೊಂಡವರನ್ನು ಚಿಕಿತ್ಸೆಗೆ ಒಳಪಡಿಸಲಾಗಿದೆ ಎಂಬುದಾಗಿ ತಿಳಿದುಬಂದಿದೆ.
ಹಾಸನ ಡಿಪೋಗೆ ಸಂಬಂಧಿಸಿದ ಬಸ್ ಇದಾಗಿತ್ತು ಎನ್ನಲಾಗಿದ್ದು ಬಸ್ ನಿಧಾನಗತಿಯಲ್ಲಿದ್ದ ಕಾರಣ ಭಾರೀ ಅನಾಹುತವೊಂದು ತಪ್ಪಿದೆ. ಅವಗಡ ಸಂಭವಿಸುತ್ತಿದ್ದಂತೆ ಆಗಮಿಸಿದ ಸ್ಥಳೀಯರು ಹಾಗೂ ಪ್ರವಾಸಿಗರು ಬಸ್ಸಿನಲ್ಲಿದ್ದವರ ರಕ್ಷಣೆಗೆ ಧಾವಿಸಿದ್ದರು. ಅದೃಷ್ಟವಶಾತ್ ಎಂಬಂತೆ ಎಲ್ಲರೂ ಪ್ರಾಣಪಾಯಗಳಿಂದ ಪಾರಾಗಿದ್ದಾರೆ.






0 Comments