ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ಮನೆಯ ಹಿಂಭಾಗದಲ್ಲಿ ಮಹಿಳೆ ಪಾತ್ರೆ ತೊಳೆಯುವ ವೇಳೆಯಲ್ಲಿ ಹಿಂಬದಿಯಿಂದ ಬಂದು ಮಹಿಳೆಯ ಚಿನ್ನಾಭರಣಗಳನ್ನು ದೋಚಿದ್ದ ಖದೀಮನಿಗೆ ಜೈಲು ಶಿಕ್ಷೆ ಪ್ರಕಟಮಾಡಿ ನ್ಯಾಯಾಲಯ ಆದೇಶಿಸಿದೆ.

2019 ರ ಫೆಬ್ರವರಿ 10 ರಂದು ಸಂಜೆಯ ವೇಳೆಗೆ ಭದ್ರಾವತಿ ಪೇಪರ್‌ ಟೌನ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ಬಾಳೆ ಮಾರನಹಳ್ಳಿ ಗ್ರಾಮದ ಮಹಿಳೆ ತಮ್ಮ ಮನೆಯ ಹಿತ್ತಲಿನಲ್ಲಿ ಪಾತ್ರೆ ತೊಳೆಯುತ್ತಿರುವಾಗ ತಿಮ್ಲಾಪುರ ಗ್ರಾಮದ ವಾಸಿ ರುದ್ರನಾಯ್ಕ ರವರ ಮಗನಾದ ಜಯ  ಸುನಿಲ್‌ ಎಂಬ ವ್ಯಕ್ತಿಯು ಹಿಂದಿನಿಂದ ಬಂದು ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಮತ್ತು ಬೆಳ್ಳಿಯ ಕರಡಿಗೆಯನ್ನು ಕಿತ್ತುಕೊಂಡು ಮಹಿಳೆಯನ್ನು ತಳ್ಳಿ ಬೀಳಿಸಿ ಓಡಿ ಹೋಗಿದ್ದ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ಮುಂದಿನ ಪ್ರಕ್ರಿಯೆಗೆ ಅನುವು ಮಾಡಿದ್ದರು. 

ಇದನ್ನೂ ಓದಿ : ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕುತ್ತಿಗೆಯಿಂದ ಮಾಂಗಲ್ಯ ಸರ ಎಗರಿಸಿದ ಕಳ್ಳ


ಆಗಿನ ತನಿಖಾಧಿಕಾರಿಗಳಾಗಿದ್ದ ಯೋಗೇಶ ಕೆ ಎಂ, ಸಿಪಿಐ ಭದ್ರಾವತಿ ಗ್ರಾಮಾಂತರ ವೃತ್ತಇವರು ಪ್ರಕರಣದ ತನಿಖೆಕೈಗೊಂಡು ಆರೋಪಿತನ ವಿರುದ್ಧ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು. 

ಈ ಪ್ರಕರಣದ ಕುರಿತಾಗಿ ಸರ್ಕಾರಿ ಅಭಿಯೋಜಕರಾದ ಶ್ರೀಮತಿ ರತ್ನಮ್ಮರವರು ವಾದ ಮಂಡಿಸಿದ್ದು,  ಮಾನ್ಯ 4ನೇ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗ ಪೀಠಾಸೀನ ಭದ್ರಾವತಿಯಲ್ಲಿ ಪ್ರಕರಣದ ವಿಚಾರಣೆ ನಡೆದು ಮಾನ್ಯ ನ್ಯಾಯಧೀಶರಾದ ಶ್ರೀ ಶಶಿಧರ್ ರವರು 29-08-2022 ರಂದು ಆರೋಪಿತನಾದ ಜಯಾ ನಾಯ್ಕ ಅಲಿಯಾಸ್ ಸುನಿಲ್‌ ಬಿನ್‌ ರುದ್ರಾನಾಯ್ಕ ತಿಮ್ಲಾಫುರ ತಾಂಡಾ  ಭದ್ರಾವತಿ ತಾಲ್ಲೂಕು. ಈತನ ವಿರುದ್ಧ ಕಲಂ 397 ಐಪಿಸಿ ಕಾಯ್ದೆ ಅಡಿಯಲ್ಲಿ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಆರೋಪಿತನಿಗೆ 07 ವರ್ಷ ಕಠಿಣ ಕಾರಾಗೃಹ ಶಿಕ್ಷೆ ನೀಡಿ ಆದೇಶಿಸಿದ್ದಾರೆ.


ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಆರೋಪಿಗಳ ಸೆರೆ ; ಮದ್ಯ ಹಾಗೂ ಹಣವನ್ನು ವಶಕ್ಕೆ ಪಡೆದ ಪೊಲೀಸರು : 

ನರಸಿಂಹರಾಜಪುರ : ಕಾನೂನು ಬಾಹಿರವಾಗಿ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಅನೇಕರನ್ನು ಕಾರ್ಯಾಚರಣೆಯ ಮೂಲಕ ಪೊಲೀಸರು ಸೆರೆ ಹಿಡಿದು ವಶಕ್ಕೆ ಪಡೆದಿದ್ದಾರೆ.

ಗಾಂಜಾ ವ್ಯಸನಿ ಸೆರೆ :

ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಬಿ.ಹೆಚ್ ಕೈಮರದಲ್ಲಿ ಅನುಮಾನಾಸ್ಪದವಾಗಿ ಓಡಾಟ ನಡೆಸುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದ ಪೊಲೀಸರು ವೈದ್ಯಕೀಯ ತಪಾಸಣೆಗೊಳಪಡಿಸಿದಾಗ ಆತನು ಗಾಂಜಾ ಸೇವನೆ ಮಾಡಿರುವುದು ಧೃಢಪಟ್ಟಿತ್ತು. ಈ ಸಂಬAಧ ಎನ್.ಡಿ.ಪಿ.ಎಸ್ ಆಕ್ಟ್ ಪ್ರಕಾರ ಪೊಲೀಸರು ಪ್ರಕರಣ ದಾಖಲಿಸಿದ್ದು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ. 


ಇಸ್ಪೀಟ್ ಆಡುತ್ತಿದ್ದವರು ಪೊಲೀಸರ ಬಲೆಗೆ :

ಮುತ್ತಿನಕೊಪ್ಪ ಗ್ರಾಮಪಂಚಾಯತ್ ವ್ಯಾಪ್ತಿಯ ಬೈರಾಪುರ ಗ್ರಾಮದ ಅರಣ್ಯ ಪ್ರದೇಶದಲ್ಲಿ ಇಸ್ಪೀಟ್ ಆಡುತ್ತಿದ್ದ ಐವರನ್ನು ಪೊಲೀಸರು ಸೆರೆಹಿಡಿದಿದ್ದಾರೆ. ಇಸ್ಪೀಟ್ ಗಾಗಿ ಇಟ್ಟುಕೊಂಡಿದ್ದ 60,000 ರೂಪಾಯಿನಗದನ್ನು ವಶಕ್ಕೆ ಪಡೆದಿರುವ ಪೊಲೀಸರು ಆರೋಪಿಗಳಾದ ಮೋಹನರಾಜ್, ಶಿವಕುಮಾರ್, ಪೀರ್ ಹುಸೇನ್, ಸತೀಶ್ ನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. 

ಮದ್ಯ ಮಾರಾಟ ಮಾಡುತ್ತಿದ್ದ ಶಿವಾನಂದನ ಬಂಧನ : 

ಕಾರಿನಲ್ಲಿ ಅಕ್ರಮವಾಗಿ ಮದ್ಯಮಾರಾಟ ನಡೆಸುತ್ತಿದ್ದ ಶಿವಾನಂದ ಎಂಬಾತನನ್ನು ಮಾಹಿತಿಯಮೇರೆಗೆ ಪೊಲೀಸರು ಬಂಧಿಸಿ ಆರೋಪಿಯ ಬಳಿ ಪರವಾನಗಿ ಹೊಂದದೇ ಇದ್ದ 48 ಮದ್ಯದ ಪೌಚುಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ಬಂಧನಕ್ಕೊಳಪಡಿಸಿರುವ ಪೊಲೀಸರು ಈ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ. 

ಅಕ್ರಮ ಕೃತ್ಯಗಳನ್ನು, ಕಾನೂನು ಬಾಹಿರ ಚಟುವಟಿಕೆಗಳನ್ನು ಯಾರೇ ನಡೆಸುತ್ತಿದ್ದರೂ ಕೂಡ ಅಂತಹವರ ಮೇಲೆ ಕಾನೂನಿನ ಅಡಿಯಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದು ಸಾರ್ವಜನಿಕರು ಇಂತಹ ಕೃತ್ಯಗಳಲ್ಲಿ ಭಾಗಿಯಾಗದಂತೆ ಎಚ್ಚರಿಸಿದ್ದಾರೆ. ಅನುಮಾನಾಸ್ಪದ ರೀತಿಯಲ್ಲಿ ಯಾರಾದರೂ ಕಂಡುಬದಲ್ಲಿ ಯಾವುದೇ ಭಯವಿಲ್ಲದೆ ಮಾಹಿತಿ ನೀಡುವಂತೆ ಅಧಿಕಾರಿಗಳು ತಿಳಿಸಿದ್ದು, ಈ ಕಾರ್ಯಾಚರಣೆಯಲ್ಲಿ ನರಸಿಂಹರಾಜಪುರ ಠಾಣೆಯ ಅಧಿಕಾರಿವರ್ಗ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.