ನಾಲ್ಕು ಚಕ್ರಗಳ ಲಘು ವಾಹನವನ್ನು ಹೊಂದಿರುವ ಬಿಪಿಎಲ್ ಕಾರ್ಡ್ ದಾರರಿಗೆ ಅಧಿಕಾರಿಗಳು ಕಾರ್ಡನ್ನು ಹಿಂದಿರುಗಿಸುವಂತೆ ಹೊರಡಿಸಿರುವ ನೊಟೀಸ್ ನ ಕುರಿತಾಗಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್ ಜೀವರಾಜ್ ಸ್ಪಷ್ಟನೆ ನೀಡಿದರು. 

ಈ ಕುರಿತಾಗಿ ನರಸಿಂಹರಾಜಪುರದಲ್ಲಿ ಮಾಹಿತಿ ನೀಡಿದ ಅವರು ಪ್ರಸ್ತುತ ಬಿಪಿಎಲ್ ಕಾರ್ಡುಗಳನ್ನು ಹೊಂದಿರುವ ಯಾರೂ ಕೂಡ ಅವರ ಕಾರ್ಡುಗಳನ್ನು ಮರಳಿ ಅಧಿಕಾರಿಗಳಿಗೆ ನೀಡುವ ಪ್ರಶ್ನೆಯೇ ಇಲ್ಲ, ಈ ಕುರಿತಾಗಿ ಮುಖ್ಯಂತ್ರಿಗಳೊಂದಿಗೆ ಮಾತನಾಡಲಾಗಿದ್ದು ಅವರೂ ಕೂಡ ಅಧಿಕಾರಿಗಳಿಗೆ ಸೂಕ್ತವಾದ ನಿರ್ದೇಶನ ನೀಡಿದ್ದಾರೆ ಎಂದರು. 


ಆದೇಶದ ಪ್ರಕಾರ ಯಾವುದೇ ಕ್ರಮಗಳು ಪ್ರಸ್ತುತ ರಾಜ್ಯದಲ್ಲಿ ಜರುಗುವುದಿಲ್ಲ, ಸಾರ್ವಜನಿಕರು ಗೊಂದಲದಲ್ಲಿ ಯಾವುದೇ ಕಾರ್ಡುಗಳನ್ನು ಅಧಿಕಾರಿಗಳಿಗೆ ನೀಡಬಾರದು ಹಾಗೂ ಹೊರಡಿಸಿರುವ ಆದೇಶವನ್ನು ಹಿಂಪಡೆಯುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸಹ ನಿರ್ದೇಶನವಿದ್ದು, ಈ ಕಾನೂನು ಹೊಸತೇನಲ್ಲ ಬಹಳ ಹಿಂದಿನಿಂದಲೂ ಈ ಕುರಿತಾದ ಗೊಂದಲ ಸೃಷ್ಟಿಯಾಗಿತ್ತು ಇದನ್ನು ಸರಿಪಡಿಸುವ ಕಾರ್ಯಗಳು ಮುಂದಿನ ದಿನಗಳಲ್ಲಿ ನಡೆಯಲಿದೆ ಎಂದರು.