ಕೊಪ್ಪ : (ನ್ಯೂಸ್ ಮಲ್ನಾಡ್ ವರದಿ) ಥಲಸ್ಸೀಮಿಯ ಎಂಬ ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ಪುಟ್ಟ ಬಾಲಕನ ಚಿಕಿತ್ಸಾ ವೆಚ್ಚವನ್ನು ಭರಿಸುವ ಸಲುವಾಗಿ ಗೌರಿಗದ್ದೆಯ ವಿನಯ್ ಗುರೂಜಿ ಇಂದು ಧನ ಸಹಾಯ ಮಾಡಿದರು.
ಇದನ್ನೂ ಓದಿ : ಬಾಲಕನ ಚಿಕಿತ್ಸಾ ವೆಚ್ಚ ಭರಿಸಲು ಬೇಕಿದೆ ಹೃದಯ ಶ್ರೀಮಂತಿಕೆಯುಳ್ಳ ದಾನಿಗಳ ಸಹಾಯ ಹಸ್ತ
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೂವೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೀರ್ಗೂರು ದಿವಾಕರ ಎಂಬುವವರ ಪುತ್ರ ರಿತ್ವಿಕ್ ಗೆ ಥಲೆಸ್ಸೀಮಿಯ ಖಾಯಿಲೆ ಇರುವುದನ್ನು ಈ ಹಿಂದೆ ವೈದ್ಯರು ತಪಾಸಣೆ ನಡೆಸಿ ಧೃಢಪಡಿಸಿದ್ದರು. ಖಾಯಿಲೆಯಿಂದ ರುತ್ವಿಕ್ ಗುಣಮುಖನಾಗಲು ನಲವತ್ತೈದು ಲಕ್ಷಕ್ಕೂ ಅಧಿಕ ಹಣದ ಅವಶ್ಯಕತೆಯಿದ್ದು ಮಧ್ಯಮ ವರ್ಗದ ಕುಟುಂಬದವರಾದ ಕಾರಣ ಅಷ್ಟೊಂದು ಹಣವನ್ನು ಹೊಂದಿಸಲಾರದ ಕಾರಣ ದಾನಿಗಳ ಮೊರೆ ಹೋಗಿದ್ದರು.
ಈ ವಿಷಯವನ್ನು ತಿಳಿದು ಗೌರೀಗದ್ದೆ ಆಶ್ರಮದ ಶ್ರೀ ಅವಧೂತ ವಿನಯ್ ಗುರೂಜಿ ಅವರು ಒಂದು ಲಕ್ಷ ರೂಪಾಯಿಗಳ ಹಣವನ್ನು ಸಹಾಯಧನದ ರೂಪದಲ್ಲಿ ನೀಡಿದರು. ಚಿಕಿತ್ಸೆಯನ್ನು ಪಡೆದು ಶೀಘ್ರವಾಗಿ ಗುಣಮುಖವಾಗುವಂತೆ ಹರಸಿದ ಅವರು, ಬಾಲಕನಿಗೆ ಚಿಕಿತ್ಸೆ ಒದಗಿಸುವ ಸಲುವಾಗಿ ದಾನಿಗಳು, ಉಳ್ಳವರು ನೆರವಾಗುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಆಶ್ರಮದ ಟ್ರಸ್ಟಿಗಳಾದ ಜಯಪುರ ಜಯಂತ್ ಭಟ್, ಕೂಳೂರು ಶೃಂಗೇಶ್ವರ ರಾಯರು, ಪುಟ್ಟ ಬಾಲಕ ರುತ್ವಿಕ್ ಹಾಗೂ ಆತನ ಪೋಷಕರು ಇದ್ದರು.






0 Comments