ಕೊಡಗು :(ನ್ಯೂಸ್ ಮಲ್ನಾಡ್ ವರದಿ) ಕೌಟುಂಬಿಕ ಕಲಹ ಬೇಸತ್ತು ಕ್ಷುಲ್ಲಕ ಕಾರಣದ ನಿಮಿತ್ತ ಪತಿ ಮಹಾಶಯನೇ ಪತ್ನಿಗೆ ಗುಂಡಿಟ್ಟು ದಾರುಣವಾಗಿ ಹತ್ಯೆ ಮಾಡಿರುವ ಘಟನೆ ಕೊಡಗು ಜಿಲ್ಲೆಯ ಚೇರಳ ಶ್ರೀಮಂಗಲ ಎಂಬಲ್ಲಿ ನಡೆದಿದೆ.
ಷಶ್ಮಾ (43) ಎಂಬಾಕೆ ಕೊಲೆಯಾದ ದುರ್ದೈವಿಯಾಗಿದ್ದು, ಕುಟುಂಬದಲ್ಲಿ ಆಗಾಗ್ಗೆ ಕ್ಷುಲ್ಲಕ ಕಾರಣಗಳಿಗೆ ಜಗಳ ಆಗುತ್ತಿತ್ತು ಆರೋಪಿ ಪತಿ ಕಿಶನ್ ಕೌಟುಂಬಿಕ ಕಲಹಗಳಿಂದ ಬೇಸತ್ತು, ಪತ್ನಿಯನ್ನೇ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ ಎಂಬ ಮಾಹಿತಿಯು ಲಭ್ಯವಾಗಿದೆ.
ಘಟನಾ ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ವ್ಯಾಪ್ತಿಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು ಹತ್ಯೆ ಮಾಡಿದ ಆರೋಪಿ ಪತಿ ಕಿಶನ್ ನಯನ್ನು ಬಂಧಿಸಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ
ಕಾಡಾನೆ ದಾಳಿಗೆ ವ್ಯಕ್ತಿ ಬಲಿ:
ಕೊಡಗು : ಕಾಡಾನೆ ದಾಳಿಗೆ ವ್ಯಕ್ತಿಯೊಬ್ಬರು ಬಲಿಯಾಗಿರುವ ಘಟನೆ ಚೆಟ್ಟಳ್ಳಿ ಸಮೀಪದ ಕುಡ್ಲೂರು ಚೆಟ್ಟಳ್ಳಿಯ ಮಲಕೋಡುವಿನಲ್ಲಿ ನಡೆದಿದೆ.
ಕುಡ್ಲೂರು ಚೆಟ್ಟಳ್ಳಿ ಮಲಕೋಡು ನಿವಾಸಿ ಮುಹಮ್ಮದ್ ಆನೆ ದಾಳಿಯಿಂದ ಮೃತಪಟ್ಟ ವ್ಯಕ್ತಿ.
ಎಂದಿನಂತೆ ಬೆಳಗ್ಗೆ ಕೆಲಸಕ್ಕೆ ತೆರಳುವಾಗ ಕಂಡಕರೆ ಎಂಬಲ್ಲಿ ಹಠಾತ್ತನೆ ಪ್ರತ್ಯಕ್ಷಗೊಂಡ ಕಾಡಾನೆಯೊಂದು ಮುಹಮ್ಮದ್ ಅವರ ಮೇಲೆ ತೀವ್ರ ದಾಳಿ ಮಾಡಿದ್ದು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.
ನಂತರದಲ್ಲಿ ಇನ್ನೂ ಹೆಚ್ವಿನ ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾ ಆಸ್ಪತ್ರೆಯಿಂದ ಮೈಸೂರಿಗೆ ರವಾನಿಸುತ್ತಿರುವ ಸಂದರ್ಭ ದಾರಿ ಮಧ್ಯೆಯಲ್ಲಿಯೇ ಮೃತಪಟ್ಟಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.






0 Comments