ಕಳಸ : (ನ್ಯೂಸ್ ಮಲ್ನಾಡ್ ವರದಿ) ಮನೆಯಲ್ಲಿದ್ದ ವ್ಯಕ್ತಿ ಇದ್ದಕ್ಕಿದ್ದಂತೆ ರಾತ್ರಿಯ ವೇಳೆ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ. 

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹಿರೇಬೈಲು ಯಳಂದೂರು ಗ್ರಾಮದ ರಮೇಶ್ ರವರು ಮನೆಯಿಂದ ಇದ್ದಕ್ಕಿದ್ದಂತೆ ರಾತ್ರಿಯ ವೇಳೆ ನಾಪತ್ತೆಯಾಗಿದ್ದು ಇವರ ಕುರಿತಾದ ಸುಳಿವು ದೊರೆತಲ್ಲಿ ತಿಳಿಸುವಂತೆ ಕುಟುಂಬವರ್ಗ ಹಾಗೂ ಸ್ನೇಹಿತರು ಕೋರಿದ್ದಾರೆ.


ಈ ಕುರಿತಾಗಿ ಕಳಸದ ಪೊಲೀಸ್ ಠಾಣೆಯಲ್ಲಿ ಸಹ ದೂರು ದಾಖಲಾಗಿದ್ದು ಪೊಲೀಸರು ಸಹ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ. ಸಾರ್ವಜನಿಕರು ರಮೇಶ್ ಅವರ ಕುರಿತಾದ ಯಾವುದಾದರೂ ಮಾಹಿತಿ ಅಥವಾ ಸುಳಿವುಗಳು ದೊರೆತಲ್ಲಿ ಈ ಕೆಳಗಿನ ನಂಬರ್ ಗಳಿಗೆ ಕರೆ ಮಾಡಿ ಮಾಹಿತಿ ನೀಡುವಂತೆ ಕುಟುಂಬಸ್ಥರು ಹಾಗೂ ಸ್ನೇಹಿತರು ಕೋರಿದ್ದಾರೆ. 

6362980851,9482866690, 9019542750