ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ನಗರದ ವಿವಿಧ ಕಡೆಗಳಲ್ಲಿ ಇಂದು ಚಿಕ್ಕಮಗಳೂರು ನಗರಸಭಾ ವತಿಯಿಂದ ಅಧಿಕಾರಿಗಳು ಹಾಗೂ ಅಧ್ಯಕ್ಷರ ಸಮ್ಮುಖದಲ್ಲಿ ಪ್ಲಾಸ್ಟಿಕ್ ದಾಳಿ ನಡೆಯಿತು. 

ನಗರಸಭಾ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಹಾಗೂ ಪೌರಾಯುಕ್ತರ ಎರಡು ತಂಡಗಳನ್ನು ರಚಿಸಿ ಆರಂಭವಾದ ಈ ಕಾರ್ಯಾಚರಣೆಯಲ್ಲಿ ಅಪಾರ ಪ್ರಮಾಣದ ಪ್ಲಾಸ್ಟಿಕ್ ನ್ನು ನಗರದ ಅಂಗಡಿಗಳಿಂದ ವಶಕ್ಕೆ ಪಡೆದಿದ್ದಾರೆ. 

ಇದನ್ನೂ ಓದಿ :  ಕಸ ವಿಲೇವಾರಿ ಮಾಡಲು ಹೋಗಿ ಚಾಲಕನ ಸಮೇತ ತ್ಯಾಜ್ಯದ ಹೊಂಡಕ್ಕೆ ಉರುಳಿದ ಆಟೋ

ಚಿಕ್ಕಮಗಳೂರು ನಗರದ ರಿಲಯನ್ಸ್ ಮಾರ್ಟ್ ನ್ನು ದಾಳಿ ನಡೆಸಿದ ನಗರಸಭಾ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಅವರ ನೇತೃತ್ವದ ತಂಡವು ಸುಮಾರು 500 ಕೆಜಿ ಗೂ ಹೆಚ್ಚು ಪ್ಲಾಸ್ಟಿಕ್ ವಸ್ತುಗಳನ್ನು ವಶಕ್ಕೆ ಪಡೆದಿದೆ. ಅಂತೆಯೇ ಒಂದು  ಲಕ್ಷ ರೂಪಾಯಿಗಳ ಭಾರೀ ಮೊತ್ತದ ದಂಡವನ್ನು ವಿಧಿಸಿದೆ. 


ಅಂತೆಯೇ ಪೌರಾಯುಕ್ತರ ಇನ್ನೊಂದು ತಂಡವು ಚಿಕ್ಕಮಗಳೂರು ನಗರದ ಎಂ.ಜಿ ರಸ್ತೆ ಯಲ್ಲಿರುವ ಐಯ್ಯಂಗಾರ್ ಬೇಕರಿ, ಎಸ್.ಕೆ.ಎನ್. ಟ್ರೇಡರ್ಸ್ ಸೇರಿದಂತೆ ಇನ್ನಿತರ ಅಂಗಡಿಗಳ ಮೇಲೆ ದಾಳಿ ನಡೆಸಿ ಪ್ಲಾಸ್ಟಿಕ್ ವಶಕ್ಕೆ ಪಡೆದುಕೊಂಡು 10,000 ರೂ ಗಳ ದಂಡವನ್ನು ಪ್ಲಾಸ್ಟಿಕ್ ಬಳಕೆ ನಡೆಸುತ್ತಿದ್ದವರ ಮೇಲೆ ವಿಧಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. 

ಈ ಕುರಿತಾಗಿ ಮಾತನಾಡಿದ ನಗರಸಭಾ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಸರ್ಕಾರ ವಿಧಿಸುವ ಕಾನೂನುಗಳನ್ನು ಯಾರೂ ಉಲ್ಲಂಘನೆ ಮಾಡದೆ ತಲೆಬಾಗಿ ಅದನ್ನು ಪಾಲಿಸಬೇಕು. ಸಾರ್ವಜನಿಕರು ಪ್ಲಾಸ್ಟಿಕ್ ಬಳಕೆಯನ್ನು ನಿರ್ಮೂಲನೆ ಮಾಡುವ ಸಲುವಾಗಿ ಪಣತೊಡಬೇಕು ಪ್ರಸ್ತುತ ಪ್ಲಾಸ್ಟಿಕ್ ನಿಷೇಧವಿದ್ದು, ನಗರಸಭೆಯು ಚಿಕ್ಕಮಗಳೂರು ನಗರವನ್ನು ಪ್ಲಾಸ್ಟಿಕ್ ಮುಕ್ತ ಮಾದರಿ ನಗರವಾಗಿ ಮಾಡಲು ಯೋಜನೆ ರೂಪಿಸಿದ್ದು ಇದಕ್ಕೆ ಪ್ರತಿಯೊಬ್ಬರೂ ಸಕರಿಸಬೇಕು ಎಂದರು. ಅಂತೆಯೇ ನಿಯಮವನ್ನು ಮೀರಿ ಪ್ಲಾಸ್ಟಿಕ್ ಬಳಕೆ ಮಾಡಿದರೆ ಅದಕ್ಕೆ ತಕ್ಕದಾದ ಕ್ರಮಗಳನ್ನು ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. 

ಈ ಕಾರ್ಯಾಚರಣೆಯ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷರಾದ ವರಸಿದ್ಧಿ ವೇಣುಗೋಪಾಲ್, ನಗರಸಭಾ ಅಧಿಕಾರಿಗಳು, ಪರಿಸರ  ಅಭಿಯಂತರರಾದ ಶ್ವೇತ, ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.