ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ಅಕ್ರಮವಾಗಿ ಗಾಂಜಾ ಮಾರಾಟ ನಡೆಸುತ್ತಿದ್ದ ನಾಲ್ವರನ್ನು ಪೊಲೀಸರು ಕಾರ್ಯಾಚರಣೆಯ ಮೂಲಕ ಸೆರೆಹಿಡಿದು ಆರೋಪಿಗಳಿಂದ ಗಾಂಜಾ ವಶಕ್ಕೆ ಪಡೆದಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಇದನ್ನೂ ಓದಿ : ಆಗುಂಬೆ ಘಾಟ್ ನಲ್ಲಿ ಭಾರೀ ಗಾತ್ರದ ವಾಹನಗಳ ಸಂಚಾರಕ್ಕೆ ವಿಧಿಸಿದ್ದ ನಿರ್ಬಂಧ ಮುಂದುವರಿಕೆ
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಹಳೆನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹೊಳೆಹೊನ್ನೂರು ರಸ್ತೆಯಿಂದ ಹೊಸಸೀಗೇಬಾಗಿ ಕಡೆಗೆ ಹೋಗುವ ರಸ್ತೆಯ ಸಮೀಪದ ಅಂಗಡಿಯ ಮುಂಭಾಗದಲ್ಲಿನ ಕಚ್ಚಾರಸ್ತೆಯಲ್ಲಿ ನಾಲ್ವರು ವ್ಯಕ್ತಿಗಳು ಸಾರ್ವಜನಿಕರಿಗೆ ಅಕ್ರಮವಾಗಿ ಮಾದಕ ವಸ್ತುವಾದ ಗಾಂಜಾ ಮಾರಾಟ ನಡೆಸುತ್ತಿರುವ ಕುರಿತು ಮಾಹಿತಿಪಡೆದ ಪೊಲೀಸರು ಕಾರ್ಯಪ್ರವೃತ್ತರಾಗಿ ಆರೋಪಿಗಳಿದ್ದ ಸ್ಥಳಕ್ಕೆ ಧಾವಿಸಿದ್ದಾರೆ.
ಈ ಸಂದರ್ಭದಲ್ಲಿ ಆರೋಪಿಗಳಾದ ಮೊಹಮ್ಮದ್ ಖಾಲಿದ್, ಮೊಹಮ್ಮದ್ ಸಾಹಿಲ್, ಮೊಹಮ್ಮದ್ ಅರ್ಶನ್, ಸಯ್ಯದ್ ಅರ್ಭಾಜ್ ಎಂಬ ನಾಲ್ವರು ಸ್ಥಳದಲ್ಲಿದ್ದು ಅವರನ್ನು ಗಾಂಜಾ ಸಮೇತ ಸೆರೆಹಿಡಿದಿದ್ದಾರೆ.
ಬಂಧಿತರಿಂದ ಅಂದಾಜು ಮೌಲ್ಯ 69,000 ರೂಪಾಯಿಗಳ 02 ಕೆಜಿ 150 ಗ್ರಾಂ ತೂಕದ ಒಣ ಗಾಂಜಾ, 800 ರೂ ನಗದು ಹಣ, 03 ಮೊಬೈಲ್ ಫೋನ್ ಗಳು ಹಾಗೂ ಕೃತ್ಯಕ್ಕೆ ಬಳಸಿದ 02 ದ್ವಿ ಚಕ್ರ ವಾಹನ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು ಈ ಸಂಬಂಧ ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಎ.ಎಸ್.ಪಿ ಭದ್ರಾವತಿ ಉಪ ವಿಭಾಗ, ಸಿಪಿಐ ಭದ್ರಾವತಿ ನಗರ ವೃತ್ತ ಹಾಗೂ ಹಳೆನಗರ ಪೊಲೀಸ್ ಠಾಣೆಯ ಅಧಿಕಾರಿವರ್ಗ ಮತ್ತು ಸಿಬ್ಬಂದಿಗಳು ಭಾಗವಹಿಸಿ ಕಾರ್ಯಾಚರಣೆಯನ್ನು ನಡೆಸಿದ್ದಾರೆ.
ಮದುವೆಯಾಗುವ ನೆಪದಲ್ಲಿ ಚಿಕ್ಕಮಗಳೂರು ಮೂಲದ ಯುವತಿಗೆ ಲಕ್ಷಾಂತರ ರೂಪಾಯಿ ವಂಚನೆ :
ಶಿವಮೊಗ್ಗ : ಮಹಿಳೆ ಯೋರ್ವಳಿಗೆ ಮದುವೆಯಾಗುವುದಾಗಿ ನಂಬಿಸಿ ಆಕೆಗೆ ಲಕ್ಷಾಂತರ ರೂಪಾಯಿ ಹಣವನ್ನು ಪಡೆದು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ಚಿಕ್ಕಮಗಳೂರು ಜಿಲ್ಲೆ ತರೀಕೆರೆಯ ಮಹಿಳೆಗೆ ಮ್ಯಾಟ್ರಿಮೋನಿ ಯೊಂದರಲ್ಲಿ ಪರಿಚಯವಾದ ವಿಜಯರಾಜ್ ಗೌಡ ಎಂಬಾತ ವಂಚಿಸಿದ್ದಾನೆ ಎಂಬುದಾಗಿ ಮಹಿಳೆ ಆರೋಪಿಸಿದ್ದು, ಮದುವೆಯಾಗುವುದಾಗಿ ನಂಬಿಸಿ ಮಹಿಳೆಯಿಂದ 13.55 ಲಕ್ಷ ರೂಪಾಯಿ ಹಣ ಪಡೆದುಕೊಂಡು ವಂಚಿಸಿದ್ದಾನೆ ಎನ್ನಲಾಗಿದೆ.
ಬೆಂಗಳೂರಿನಲ್ಲಿ ವಾಸವಾಗಿರುವ ವಿಜಯರಾಜ್ ಗೌಡ ಮ್ಯಾಟ್ರಿಮೋನಿ ಸೈಟ್ ನಲ್ಲಿ ಮಹಿಳೆಗೆ ಪರಿಚಯವಾಗಿದ್ದು, ಮೊಬೈಲ್ ಸಂಖ್ಯೆ ವಿನಿಮಯ ಮಾಡಿಕೊಂಡು ಚಾಟಿಂಗ್ ಮಾಡಿದ್ದಾರೆ. ತನ್ನ ಮನೆ ಮೇಲೆ ಐಟಿ ದಾಳಿಯಾಗಿದ್ದು, ಹಣದ ಅವಶ್ಯಕತೆಯಿದೆ ಎಂದು ವಿಜಯರಾಜ್ ಗೌಡ ಮಹಿಳೆಗೆ ಸಂದೇಶ ಕಳುಹಿಸಿದ್ದು, ಇದನ್ನು ನಂಬಿದ ಮಹಿಳೆ ಆಗಸ್ಟ್ 5 ರಿಂದ 22ರ ವರೆಗೆ ಹಂತ ಹಂತವಾಗಿ 13.55 ಲಕ್ಷ ರೂ. ಆತನ ಖಾತೆಗೆ ಹಾಕಿದ್ದಾರೆ. ಕೊಟ್ಟ ಹಣ ಕೇಳಿದಾಗ ಆತ ಕರೆ ಸ್ವೀಕರಿಸಿಲ್ಲ. ವಂಚನೆಗೊಳಗಾದ ಮಹಿಳೆ ಸಿಇಎನ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಘಟನಾ ಸಂಬಂಧ ಶಿವಮೊಗ್ಗದ ಸಿಇಎನ್ ಠಾಣೆಗೆ ವಂಚನೆಗೊಳಗಾದ ಮಹಿಳೆ ದೂರು ನೀಡಿ ಕಳೆದುಕೊಂಡಿರುವ ಹಣ ಹಾಗೂ ಆಗಿರುವ ವಂಚನೆಗೆ ನ್ಯಾಯ ಒದಗಿಸಿಕೊಡುವಂತೆ ಕೋರಿದ್ದಾರೆ. ಅಪರಿಚಿತರ ನಂಬರ್ ಗಳಿಂದ ಬರುವ ಮೆಸೇಜ್, ಲಿಂಕ್ ಮುಂತಾದ ಆಫರ್ ಗಳಂತೆ ಬಿಂಬಿಸುವ ಯಾವುದನ್ನೂ ಸಹ ಒಮ್ಮೆಲೇ ಜನರು ನಂಬಬಾರದು ಎಂಬುದಾಗಿ ಅಧಿಕಾರಿಗಳು ಸಾರ್ವಜನಿಕರಿಗೆ ತಿಳಿಸಿದ್ದಾರೆ.

.jpeg)
.jpeg)


%20-%20Copy.jpeg)



0 Comments