ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ನಿನ್ನೆ ಶಿವಮೊಗ್ಗದಲ್ಲಿ ನಡೆದ ಚೂರಿ ಇರಿತದ ಕುರಿತಾಗಿ ರಾಜ್ಯ ಸರ್ಕಾರದ ವಿರುದ್ಧ ಶಿವಮೊಗ್ಗ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಪ್ರಶಾಂತ್ ಬಂಗೇರ ಕಿಡಿಕಾರಿದ್ದಾರೆ.

ಇದನ್ನೂ ಓದಿ : ಥಲೆಸ್ಸೀಮಿಯ ಖಾಯಿಲೆಯಿಂದ ಬಳಲುತ್ತಿರುವ ಬಾಲಕನ ಚಿಕಿತ್ಸೆಗೆ ಅವಧೂತ ವಿನಯ್ ಗುರೂಜಿಯಿಂದ ನೆರವು

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದರೂ, ಶಿವಮೊಗ್ಗದಲ್ಲಿ ದೇಶ ಭಕ್ತ ಸಾವರ್ಕರ್ ಅವರಿಗೆ ಅಪಮಾನ ಮಾಡಲಾಗುತ್ತಿದೆ ಮತ್ತೆ ಮಂಗಳೂರಿನಲ್ಲಿ, ಒಂದು ಶಾಲೆಯಲ್ಲಿ ಮಕ್ಕಳ ನೃತ್ಯದಲ್ಲಿ ಸಾವರ್ಕರ್ ಫೊಟೊ ಪ್ರದರ್ಶಿಸಿದ್ದಕೆ, SDPI ಕಾರ್ಯಕರ್ತರು ವೇದಿಕೆ ಮೇಲೆ ಹೋಗಿ ಗಲಾಟೆ ಮಾಡಿ ಶಿಕ್ಷಕರು ಕ್ಷಮೆ ಕೇಳುಂತೆ ಮಾಡಿ, ಸ್ವತಂತ್ರ ವೀರ ಸಾವರ್ಕರ್ ಅವರಿಗೆ ಅಪಮಾನ ಮಾಡಿದ್ದಾರೆ ಆದರೂ ಸರ್ಕಾರ ಹಾಗೂ ಸಚಿವರು ಕಠಿಣ ಕ್ರಮಗಳನ್ನು ಕೈಗೊಳ್ಳದೇ ಇರುವುದು ಅತ್ಯಂತ ದುರಾದೃಷ್ಟಕರ ಎಂದರು.


ಗೃಹ ಮಂತ್ರಿಗಳೆ, ಏನು ಮಾಡುತ್ತಿದ್ದೀರಿ ? ಪ್ರಶ್ನಿಸಿದ ಶ್ರೀ ರಾಮ ಸೇನೆ 

ರಾಜ್ಯದಲ್ಲಿ ಪದೇ ಪದೇ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗುತ್ತಿದೆ, ಇದಕ್ಕೆ ತಕ್ಕ ಶಾಸ್ತಿ ಯಾವಾಗ ಈ ಕುರಿತು ಗೃಹ ಸಚಿವರು ಕ್ರಮವಹಿಸುವುದು ಯಾವಾಗ ಎಂದು ಪ್ರಶ್ನಿಸಿದ್ದಾರೆ. 

ಉತ್ತರಪ್ರದೇಶದಲ್ಲಿ ಯೋಗಿ ಆಧಿತ್ಯನಾಥ ರವರ ಸರ್ಕಾರ, ಸುಮಾರು 8,742 ಕ್ಕೂ ಹೆಚ್ಚು ಎನ್ಕೌಂಟರ್ ಗಳನ್ನು ನಡೆಸಿದ್ದಾರೆ ಆದರೆ ಕೇವಲ ಬಾಯ್ ಮಾತಿಗೆ ಹಿಂದುತ್ವ , ಕಠಿಣ ಕ್ರಮ ಎನ್ನುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರೇ ಎಲ್ಲಿ ನಿಮ್ಮ ಕಠಿಣ ಕ್ರಮ..? ನಿಮ್ಮ ಜಿಲ್ಲೆ ಯಲ್ಲೇ ಮೇಲಿಂದ ಮೇಲೆ SDPI ಗೂಂಡಾಗಳು ಸಮಾಜದಲ್ಲಿ ಭಯ ಹುಟ್ಟಿಸುವ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ ಈ ಕುರಿತಾಗಿ ಕ್ರಮ ವಹಿಸುವುದು ಎಂದು ಎಂಬುದಾಗಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ.


ಮೈಕ್ ಮುಂದೆ ಉದ್ದುದ್ದ ಹಿಂದುತ್ವದ ಭಾಷಣ ಮಾಡುವ ಈಶ್ವರಪ್ಪ ನವರೇ ನಿಮ್ಮ ಜಿಲ್ಲೆಯಲ್ಲೇ ಮಹಾನ್ ದೇಶ ಭಕ್ತ ವೀರ ಸಾವರ್ಕರ್ ಗೇ ಅವಮಾನ ಆಗಿದೆ, ಹಿಂದೂಗಳ ಮೇಲೆ ಚೂರಿ ಇರಿತ ಆಗಿದೆ ನಿಮ್ಮ ಜಿಲ್ಲೆಯಲ್ಲೇ ಹಿಂದೂ ಸಮಾಜವನ್ನು ಕಾಯಲು ಆಗದ ನೀವು ರಾಜ್ಯ ದ ಹಿಂದೂ ಕಾರ್ಯಕರ್ತರನ್ನು ಹೇಗೆ ರಕ್ಷಣೆ ಮಾಡುತ್ತೀರಿ ಎಂಬುದಾಗಿ ಶ್ರೀ ರಾಮ ಸೇನೆ ಜಿಲ್ಲಾಧ್ಯಕ್ಷ ಪ್ರಶಾಂತ್ ಬಂಗೇರ ತೀವ್ರ ಆಕ್ರೋಶ ಹೊರಹಾಕಿದ್ದಾರೆ.