ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿಯ ಹೊರವಲಯದಲ್ಲಿ ಅಪರೂಪದ ಪ್ರಾಣಿ ಹುಲಿ ಬೆಕ್ಕು ಅಪಘಾತಕ್ಕೀಡಾಗಿ ಸಾವನ್ನಪ್ಪಿದೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಹಾಗೂ ಕೊಪ್ಪ ಸಂಪರ್ಕಿಸುವ ಮಾರ್ಗವಾದ ಶೃಂಗೇರಿ ಹೊರವಲಯದ ಸಂಕ್ಲಾಪುರ ಬಳಿಯಲ್ಲಿ ಹುಲಿಬೆಕ್ಕು ಸಾವನ್ನಪ್ಪಿದೆ. ವಾಹನ ದಟ್ಟಣೆ ಹೆಚ್ಚಿದ್ದು ಯಾವುದೋ ವಾಹನವು ಗುದ್ದಿ ಅಳಿವಿನ ಅಂಚಿನಲ್ಲಿರುವ ಪ್ರಾಣಿ ಹುಲಿ ಬೆಕ್ಕು ನಿನ್ನೆ ರಾತ್ರಿಯ ವೇಳೆಗೆ ಸಾವನ್ನಪ್ಪಿದೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದು, ಮೃತಪಟ್ಟ ಹುಲಿಬೆಕ್ಕನ್ನು ಘಟನಾ ಸ್ಥಳದಿಂದ ಸ್ಥಳಾಂತರ ಮಾಡಿದ್ದಾರೆ. ಇಂದು ಬೆಳಗ್ಗೆ ಅದರ ಮರಣೋತ್ತರ ಪರೀಕ್ಷೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಿರತೆ ವದಂತಿ :
ಮೃತ ಪಟ್ಟಿದ್ದು ಹುಲಿ ಬೆಕ್ಕಾದರೂ, ಚಿರತೆ ಮರಿ ಮೃತಪಟ್ಟಿದೆ ಎಂಬ ಮಾತುಗಳು ಹರಡಿತ್ತು. ಈ ಕುರಿತಾಗಿನ ವದಂತಿಗೆ ಸ್ಪಷ್ಟನೆ ನೀಡಿರುವ ಅಧಿಕಾರಿಗಳು ಮೃತಪಟ್ಟಿರುವುದು ಹುಲಿಬೆಕ್ಕೆಂದು ತಿಳಿಸಿದ್ದಾರೆ.





0 Comments