ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕಳೆದ ಎರಡು ವರ್ಷದಿಂದ ಶೃಂಗೇರಿ ಠಾಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ CPI ರವಿ ಬಿ ಎಸ್ ಅವರಿಗೆ ಪ್ರತಿಷ್ಠಿತ ರಾಷ್ಟ್ರಪತಿ ಪದಕ (President's Police Medal for Meritorious Service)ಕ್ಕೆ ಭಾಜನರಾಗಿದ್ದಾರೆ. ಪ್ರಸ್ತುತ ಅವರು ಪುತ್ತೂರು ಗ್ರಾಮಾಂತರ ಠಾಣೆಗೆ ವರ್ಗಾವಣೆಗೊಂಡಿದ್ದಾರೆ.

ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದ್ದ ಅನೇಕ ಕೊಲೆ, ದರೋಡೆಯಂತಹ ಪ್ರಕರಣಗಳನ್ನು ತನಿಖೆ ಮೂಲಕ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ರವಿ ಅವರು ಯಶಸ್ವಿಯಾಗಿದ್ದರು. 

ಈ ಪ್ರಶಸ್ತಿಯನ್ನು ಪಡೆದಿರುವುದು ಅತ್ಯಂತ ಸಂತಸ ತಂದಿದೆ. ಜಗನ್ಮಾತೆ ಶಾರದೆ ಆಶೀರ್ವಾದ, ಕಾರ್ಯನಿರ್ವಹಿಸಿದ ಎಲ್ಲಾ ಠಾಣೆಗಳ ಮೇಲಧಿಕಾರಿಗಳು ಹಾಗೂ ಸಿಬ್ಬಂದಿಗಳು ನನ್ನ ಕಾರ್ಯಗಳಿಗೆ ಸಂಪೂರ್ಣ ಸಹಕಾರ ನೀಡಿದ್ದು ಅವರಿಗೂ ಈ ಸಂದರ್ಭದಲ್ಲಿ ಧನ್ಯವಾದಗಳನ್ನು ತಿಳಿಸುತ್ತೇನೆ - ರವಿ ಬಿ.ಎಸ್, ಠಾಣಾಧಿಕಾರಿಗಳು, ಪುತ್ತೂರು ಗ್ರಾಮಾಂತರ ಠಾಣೆ.


ಇವರು ಪುತ್ತೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ನಡೆದ ಕೋಮು ಗಲಭೆಯೊಂದರ ಸಂದರ್ಭದಲ್ಲಿ ಇವರ ಮೇಲೆಯೇ ಕಲ್ಲು ತೂರಾಟ ಸಹ ನಡೆದಿತ್ತು, ಇದಲ್ಲದೆ ಅನೇಕ ಪ್ರಕರಣಗಳನ್ನು ಬೇಧಿಸಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ರವಿ ಅವರು ಯಶಸ್ವಿಯಾಗಿದ್ದರು.

ಹಾಗೆಯೇ ಕಡೂರಿನ ಪೊಲೀಸ್ ತರಬೇತಿ ಶಾಲೆ (Police Training School, Kadur) ಇಲ್ಲಿಯ ಎಸ್ಪಿ ಹಾಗೂ ಪ್ರಾಂಶುಪಾಲರಾದ ಎನ್ ಶ್ರೀನಿವಾಸ್ ಅವರಿಗೆ ಪೊಲೀಸ್ ಇಲಾಖೆಯಲ್ಲಿನ ಅತ್ಯುತ್ತಮ ಸೇವೆಯನ್ನು ಪರಿಗಣಿಸಿ ರಾಷ್ಟ್ರಪತಿ ಪದಕಕ್ಕೆ ಆಯ್ಕೆ ಮಾಡಲಾಗಿದೆ. ಒಟ್ಟಿನಲ್ಲಿ ರಾಜ್ಯದ 18 ಜನ ಅಧಿಕಾರಿಗಳ ಪೈಕಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಇಬ್ಬರು ಪೊಲೀಸ್ ಅಧಿಕಾರಿಗಳು ಪ್ರತಿಷ್ಠಿತ ರಾಷ್ಟ್ರಪತಿ ಪದಕಕ್ಕೆ ಭಾಜನರಾಗಿರುವುದು ಜಿಲ್ಲೆಗೆ ಹೆಮ್ಮೆ ತಂದಿದೆ.

Srinivas N, SP, Police Training School, Kadur
Srinivas N, SP, Police Training School, Kadur

ಸ್ವಾತಂತ್ರ್ಯ ದಿನಾಚರಣೆಯಂದು ಪದಕ ಪ್ರದಾನ ಕಾರ್ಯಕ್ರಮ ಜರುಗಲಿದ್ದು, ರಾಜ್ಯದಲ್ಲಿ ಪದಕ ಪಡೆದವರ ವಿವರ ಇಲ್ಲಿದೆ:

1) ಎನ್‌. ಶ್ರೀನಿವಾಸ್, ಎಸ್ಪಿ, ಪೊಲೀಸ್ ತರಬೇತಿ ಶಾಲೆ, ಕಡೂರು

2) ಪ್ರತಾಪ್ ಸಿಂಗ್ ತೋರಟ್, ಡಿವೈಎಸ್ಪಿ, ಆಂತರಿಕ ಭದ್ರತಾ ವಿಭಾಗ, ಬಂಟ್ವಾಳ

3) ಟಿ.ಎಂ.ಶಿವಕುಮಾರ್, ಡಿವೈಎಸ್ಪಿ, ಹೈಕೋರ್ಟ್ ಭದ್ರತೆ

4) ಜೆ.ಎಚ್. ಇನಾಂದಾರ್, ಡಿವೈಎಸ್ಪಿ, ಡಿಸಿಆರ್‌ಬಿ, ಕಲಬುರಗಿ

5) ಎನ್‌.ಟಿ. ಶ್ರೀನಿವಾಸ್ ರೆಡ್ಡಿ, ಡಿವೈಎಸ್ಪಿ, ಸಿಐಡಿ ಅರಣ್ಯ ವಿಭಾಗ

6) ಪಿ. ನರಸಿಂಹಮೂರ್ತಿ, ಡಿವೈಎಸ್ಪಿ, ಸಿಐಡಿ

7) ರಾಘವೇಂದ್ರ ರಾವ್ ಶಿಂಧೆ, ಎಸಿಪಿ, ಎಫ್‌ಪಿಬಿ, ಬೆಂಗಳೂರು

8) ಆರ್‌. ಪ್ರಕಾಶ್, ಡಿವೈಎಸ್ಪಿ, ಎಸಿಬಿ

9) ಧೃವರಾಜ್ ಬಿ. ಪಾಟೀಲ, ಸಿಪಿಐ, ನವಲಗುಂದ, ಧಾರವಾಡ

10) ಎಸ್. ಮೊಹಮ್ಮದ್ ಅಲಿ, ಇನ್‌ಸ್ಪೆಕ್ಟರ್, ಎಸಿಬಿ, ಬೆಂಗಳೂರು

11) ಜಿ.ಸಿ. ರಾಜ, ಇನ್‌ಸ್ಪೆಕ್ಟರ್, ವಿದ್ಯಾರಣ್ಯಪುರ, ಮೈಸೂರು

12) ರವಿ ಬೆಳವಾಡಿ, ಇನ್‌ಸ್ಪೆಕ್ಟರ್, ಶೃಂಗೇರಿ, ಚಿಕ್ಕಮಗಳೂರು (ಪ್ರಸ್ತುತ ಪುತ್ತೂರು ಗ್ರಾ. ಠಾಣೆ)

13) ಮುಫೀದ್ ಖಾನ್, ಆರ್‌ಪಿಐ, ಕೆಎಸ್‌ಆರ್‌ಪಿ 4ನೇ ಪಡೆ, ಬೆಂಗಳೂರು

14) ಮಹದೇವಯ್ಯ, ಸಹಾಯಕ ಆರ್‌ಎಸ್‌ಐ, ಕೆಎಸ್‌ಆರ್‌ಪಿ 4ನೇ ಪಡೆ, ಬೆಂಗಳೂರು

15) ಮುರುಳಿ, ಸಹಾಯಕ ಆರ್‌ಎಸ್‌ಐ, ಕೆಎಸ್‌ಆರ್‌ಪಿ 3ನೇ ಪಡೆ, ಬೆಂಗಳೂರು

16) ಬಸವರಾಜ ಅಂಡೆಮ್ಮನವರ, ಸಹಾಯಕ ಗುಪ್ತದಳ ಅಧಿಕಾರಿ, ಬೆಂಗಳೂರು

17) ಬಾಲಕೃಷ್ಣ ಶಿಂಧೆ, ಎಎಸ್‌ಐ, ಡಿಎಸ್‌ಬಿ, ಬೆಳಗಾವಿ

18) ರಂಜಿತ್ ಶೆಟ್ಟಿ, ಎಎಸ್‌ಐ, ಕೆಂಪೇಗೌಡ ನಗರ, ಬೆಂಗಳೂರು