ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಉಪವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಣೆ  ಮಾಡುತ್ತಿದ್ದ ಡಾ. H.L ನಾಗರಾಜ್ ಅವರು ವರ್ಗಾವಣೆಯ ಬಳಿಕ ಅವರಿಂದ ತೆರವಾದ  ಸ್ಥಾನಕ್ಕೆ ಇನ್ನೋರ್ವ  ಅಧಿಕಾರಿಯನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. 

ಈವರೆಗೆ ಚಿಕ್ಕಮಗಳೂರು ಜಿಲ್ಲೆಯ ಉಪ ವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದ, ಜನರಿಗೆ ಅತ್ಯಂತ ಹತ್ತಿರವಾಗಿದ್ದ ಹಿರಿಯ ಉಪ ವಿಭಾಗಾಧಿಕಾರಿ ಡಾ. H.L ನಾಗರಾಜ್ ಅವರು ಜಿಲ್ಲೆಯಿಂದ ಮುಂಬಡ್ತಿಗೊಂಡು ಮಂಡ್ಯದ ಅಪರ ಜಿಲ್ಲಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದಾರೆ. ಅವರಿಂದ ತೆರವಾದ ಸ್ಥಾನಕ್ಕೆ ತಿಕ್ಕೋಟು ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಯಾಗಿದ್ದ ರಾಜೇಶ ಹೆಚ್.ಡಿ ಇವರನ್ನು ನೇಮಕಮಾಡಿ ಸರ್ಕಾರ ಆದೇಶಿಸಿದೆ. 

ಇದನ್ನೂ ಓದಿ : ಮೂಡಿಗೆರೆ : ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ವಿದ್ಯುತ್ ತಗುಲಿ ಮೃತಪಟ್ಟ ವ್ಯಕ್ತಿ


ಈ ಹಿಂದೆ ಸರ್ಕಾರವು ಡಾ. H.L ನಾಗರಾಜ್ ಅವರನ್ನು ಅಪರ ಜಿಲ್ಲಾಧಿಕಾರಿಯಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ವರ್ಗಾವಣೆ ಮಾಡಿತ್ತು. ಕೆಲ ಸಮಯದ ಬಳಿಕ ಆದೇಶವನ್ನು ಸರ್ಕಾರವೇ ಹಿಂಪಡೆದಿತ್ತು. ಮಂಡ್ಯದ ಅಪರ ಜಿಲ್ಲಾಧಿಕಾರಿಯಾಗಿದ್ದ ವಿ.ಆರ್ ಶೈಲಜಾ ಅವರ ಸ್ಥಾನಕ್ಕೆ ಡಾ. ನಾಗರಾಜ್ ಅವರನ್ನು ಮುಂದಿನ ಆದೇಶದವರೆಗೆ ಸರ್ಕಾರ ನೇಮಕ ಮಾಡಿ ವರ್ಗಾವಣೆಯ ಆದೇಶ ನೀಡಿದೆ.

ಅನೇಕ ಜನಪರ ಕಾರ್ಯಗಳನ್ನು ಜಿಲ್ಲೆಯ ಜನರಿಗಾಗಿ ನಡೆಸಿರುವ ಜನಪರ ಕಾಳಜಿಯನ್ನು ಹೊಂದಿರುವ ಡಾ.ನಾಗರಾಜ್ ಅವರಿಗೆ ಜಿಲ್ಲೆಯ ಜನರು ಶುಭಹಾರೈಸಿ ಬೀಳ್ಕೊಡುಗೆ ನೀಡಿದ್ದಾರೆ. ಅಂತೆಯೇ ಹೊಸದಾಗಿ ನೇಮಕಗೊಂಡಿರುವ ಉಪ ವಿಭಾಗಾಧಿಕಾರಿಗಳಿಂದ ಜಿಲ್ಲೆಯ ಜನರು ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದಾರೆ.