ಬಾಳೆಹೊನ್ನೂರು : (ನ್ಯೂಸ್ ಮಲ್ನಾಡ್ ವರದಿ) ಚಾಲಕನ ಸಮಯಪ್ರಜ್ಞೆಯಿಂದ ಸಂಭವಿಸುತ್ತಿದ್ದ ತೀವ್ರತರಹದ ಅವಘಡವೊಂದು ನಿಯಂತ್ರಣಕ್ಕೆ ಬಂದಿರುವ ಘಟನೆ ವರದಿಯಾಗಿದೆ.
ಇದನ್ನೂ ಓದಿ : ಆನೆದಾಳಿಯಿಂದ ರೋಸಿದ ರೈತರು ; ಅರಣ್ಯ ಇಲಾಖೆ ಸಿಬ್ಬಂದಿಯನ್ನು ಕೂಡಿ ಹಾಕಿ ಆಕ್ರೋಶ
ಇಂದು ಬೆಳಗ್ಗೆ 8.45 ರ ಆಸುಪಾಸಿನಲ್ಲಿ ಬಾಳೆಹೊನ್ನೂರು ನಿಂದ ಕಳಸಕ್ಕೆ ತೆರಳುವ ಕೆಕೆಬಿ ಬಸ್ ಮಾರ್ಗಮಧ್ಯೆಯಾದ ಸಂಪಿಗೆಕಟ್ಟೆ ಬಳಿ ಬರುತ್ತಿದ್ದಂತೆ ಬಸ್ಸಿನ ಬ್ರೇಕ್ ಹಾಳಾಗಿದೆ. ಎಷ್ಟೇ ಪ್ರಯತ್ನಿಸಿದರೂ ಬ್ರೇಕ್ ಹಿಡಿಯದೇ ಇದ್ದ ಪರಿಣಾಮ ಚಲಿಸುತ್ತಿದ್ದ ಬಸ್ ನ ಚಾಲನೆಗೆ ಸಮಸ್ಯೆ ಎದುರಾಗಿತ್ತು, ಬಸ್ಸಿನಲ್ಲಿದ್ದವರ ಪ್ರಾಣಕ್ಕೂ ಸಮಸ್ಯೆ ಎದುರಾಗಿತ್ತು. ಆದರೆ ಚಾಲಕನ ಧೈರ್ಯಹಾಗೂ ಸಮಯೋಚಿತ ನಿರ್ಧಾರದಿಂದ ಎದುರಾಗಬಹುದಾಗಿದ್ದ ದೊಡ್ಡ ಅವಘಡ ನಿಯಂತ್ರಣಕ್ಕೆ ಸಿಕ್ಕಿದೆ.
KKB ಬಸ್ ನ ಚಾಲಕ ಸುನಿಲ್ ಅವರು ಬ್ರೇಕ್ ಫೇಲ್ ಆಗಿ ನಿಯಂತ್ರಣ ಕಳೆದುಕೊಂಡಿದ್ದ ಬಸ್ ನ್ನು ಸೂಕ್ತ ಸಮಯಕ್ಕೆ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು ಬಸ್ಸನ್ನು ರಸ್ತೆ ಪಕ್ಕದ ಚರಂಡಿಗೆ ಇಳಿಸಿ ಬಸ್ಸನ್ನು ನಿಲ್ಲಿಸಿದ್ದಾರೆ. ಇದರಿಂದಾಗಿ ತಮ್ಮೊಂದಿಗೆ ಬಸ್ಸಿನ ಪ್ರಯಾಣಿಕರ ಜೀವವನ್ನು ರಕ್ಷಣೆ ಮಾಡುವಲ್ಲಿ ಸುನೀಲ್ ಯಶಸ್ವಿಯಾಗಿದ್ದಾರೆ.
ಇದೇ ಬಸ್ಸಿನಲ್ಲಿ ಕಳಸಕ್ಕೆ ತೆರಳುವ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ತೋಟಕ್ಕೆ ತೆರಳುವ ಕೆಲಸದ ಕಾರ್ಮಿಕರು, ಆಸ್ಪತ್ರೆಗಳಿಗೆ ತೆರಳುವ ವಯೋವೃದ್ಧರು ಪ್ರಯಾಣ ನಡೆಸುತ್ತಿದ್ದರು. ಚಾಲಕ ಸುನಿಲ್ ಅವರ ಚಾಕಚಕ್ಯತೆ ಹಾಗೂ ಚಾಲನೆಯಲ್ಲಿ ಹೊಂದಿರುವ ಪರಿಣತಿಯಿಂದಾಗಿ ಯಾವುದೇ ಪ್ರಯಾಣಿಕರಿಗೆ ಪೆಟ್ಟಾಗದಂತೆ ಬಸ್ ಸಹ ಹಾನಿಯಾಗದಂತೆ ಸುರಕ್ಷಿತವಾಗಿ ಬಸ್ಸನ್ನು ನಿಯಂತ್ರಣಕ್ಕೆ ತಂದು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಾಲಕನ ಈ ಸಮಯೋಚಿತ ಹಾಗೂ ಜವಾಬ್ದಾರಿಯುತ ನಡೆಗೆ ಸಾರ್ವಜನಿಕರು ಹಾಗೂ ಪ್ರಯಾಣಿಕರು ಪ್ರಶಂಸಿಸಿದ್ದಾರೆ.




.jpeg)

0 Comments