ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) KSRTC ಬಸ್ ಹಾಗೂ ಕಾರಿನ ನಡುವೆ ರಸ್ತೆ ಅಪಘಾತ ಸಂಭವಿಸಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ KSRTC ಬಸ್ ಹಾಗೂ ಮಾರುತಿ ಕಾರ್ ನ ನಡುವೆ ಈ ರಸ್ತೆ ಅಪಘಾತ ಸಂಭವಿಸಿದ್ದು ಅದೃಷ್ಟವಶಾತ್ ಎಂಬಂತೆ ಬಸ್ಸು ಹಾಗೂ ಕಾರಿನ ಪ್ರಯಾಣಿಕರು ಪ್ರಾಣಾಪಾಯಗಳಿಂದ ಪಾರಾಗಿದ್ದಾರೆ.
ಇದನ್ನೂ ಓದಿ : ಕೊಪ್ಪ : ಮಳೆಗಾಲದಲ್ಲಿ ನಡೆದುಸಾಗಲೂ ಯೋಗ್ಯವಲ್ಲದ ರಸ್ತೆ ; ಪ್ರತೀ ವರ್ಷ ಸ್ಥಳೀಯರಿಂದಲೇ ರಸ್ತೆ ದುರಸ್ಥಿ ಕಾರ್ಯ
ಈ ಅಪಘಾತದಲ್ಲಿ ಕಾರ್ ನ ಮುಂಭಾಗ ಹಾಗೂ ಹಿಂಭಾಗ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ದು ಬಸ್ಸಿನ ಚಾಲಕ ಬ್ರೇಕ್ ಹೊಡೆದ ರಭಸಕ್ಕೆ ಕೆಲ ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳಿಗೆ ತುತ್ತಾಗಿದ್ದಾರೆ ಎನ್ನಲಾಗಿದ್ದು ಮಾರುತಿ ಕಾರಿನಲ್ಲಿ ಇಬ್ಬರು ಪ್ರಯಾಣಿಕರು ಸಂಚಾರ ನಡೆಸುತ್ತಿದ್ದರು ಎನ್ನಲಾಗಿದ್ದು ಯಾವುದೇ ತೊಂದರೆಗೀಡಾಗದೆ ಸುರಕ್ಷಿತವಾಗಿದ್ದಾರೆ.
ಮೂಡಿಗೆರೆ, ಬಣಕಲ್, ಕೊಟ್ಟಿಗೆಹಾರ ಸೇರಿದಂತೆ ಮಲೆನಾಡಿನ ಬಹುತೇಕ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು ಈ ಭಾಗದಲ್ಲಿ ವಾಹನಗಳಲ್ಲಿ ಸಂಚಾರ ಮಾಡುವವರು ನಿಧಾನಗತಿಯಲ್ಲಿ ವಾಹನಗಳ ಚಾಲನೆ ಮಾಡಬೇಕಿದೆ.
ತನು ಕೊಟ್ಟಿಗೆಹಾರ, ವರದಿಗಾರರು.






0 Comments