ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಹೋಬಳಿಯ ಹೆಗ್ಗುಡ್ಲು, ದೊಡ್ಡನಂದಿ, ಮತ್ತಿಕಟ್ಟೆ ಭಾಗಕ್ಕೆ ಬಸ್ಸುಗಳು ಬಾರದೇ ಅನೇಕ ವರ್ಷಗಳೇ ಕಳೆದಿವೆ. ಗ್ರಾಮಕ್ಕೊಂದು ಬಸ್ ಬೇಕು ಎಂಬುವುದು ಇಲ್ಲಿನ ಸ್ಥಳೀಯರ ಆಶಯವಾದರೂ ಕೂಡ ಈ ಭಾಗದಲ್ಲಿ ಬಸ್ ಸಂಚಾರವಿರಲಿಲ್ಲ. ಸುಮಾರು 250 ಕ್ಕೂ ಅಧಿಕ ಕುಟುಂಬಗಳು ಇಲ್ಲಿ ವಾಸಿಸುತ್ತಿದ್ದು ಅವರ ಸಂಚಾರಕ್ಕೆ ತೀವ್ರ ಸಮಸ್ಯೆಗಳು ಎದುರಾಗಿದ್ದವು. ಬಸ್ ವ್ಯವಸ್ಥೆ ಕಲ್ಪಿಸುವಂತೆ ಸರ್ಕಾರವನ್ನು, ಕೆ.ಎಸ್.ಆರ್.ಟಿ.ಸಿ ಸಂಸ್ಥೆಯ ಅಧಿಕಾರಿಗಳನ್ನು ಗ್ರಾಮಸ್ಥರು ಮನವಿ ಮಾಡಿದ್ದರೂ ಕೂಡ ಯಾವುದೇ ಪ್ರಯೋಜನಗಳಾಗಿರಲಿಲ್ಲ.
03 ಕಿಮೀಗಳ ಅಂತರವನ್ನು ಜನರು ನಡೆದೇ ಸಾಗುತ್ತಿದ್ದರು. ಶಾಲಾ - ಕಾಲೇಜುಗಳ ವಿದ್ಯಾರ್ಥಿಗಳಿಗೆ, ವಯೋ ವೃಧ್ಧರಿಗೆ ಸಹ ಬೇರಾವುದೇ ಪರ್ಯಾಯ ಅನುಕೂಲತೆಗಳು ಸರ್ಕಾರದಿಂದ ದೊರೆಯುತ್ತಿರಲಿಲ್ಲ. ಬಾಡಿಗೆ ವಾಹನಗಳಿಗೆ ದುಬಾರಿ ಮೊತ್ತದ ಬಾಡಿಗೆಹಣವನ್ನು ನೀಡಿ ರೋಸಿಹೋಗಿದ್ದ ಜನರು ಇದೀಗ ಸಂಚಾರಕ್ಕೆ ಉತ್ತಮ ವ್ಯವಸ್ಥೆಯನ್ನು ಪಡೆಯುವಲ್ಲಿ ಸಶಕ್ತರಾಗಿದ್ದಾರೆ.
ಗ್ರಾಮದ ಮಕ್ಕಳೊಂದಿಗೆ ಬಸ್ಸಿನಲ್ಲಿ ಪ್ರಯಾಣಿಸಿದ ಶಾಸಕ :
ಗ್ರಾಮಕ್ಕೆ ಬಸ್ಸನ್ನು ಉದ್ಘಾಟಿಸಿದ ಶಾಸಕ ಎಂ.ಪಿ ಕುಮಾರಸ್ವಾಮಿ, ಬಸ್ಸಿನಲ್ಲೇ ಪುಟ್ಟ ಮಕ್ಕಳೊಂದಿಗೆ ಹಾಗೂ ಅಲ್ಲಿನ ಸ್ಥಳೀಯರ ಜೊತೆಗೆ ಪ್ರಯಾಣಿಸಿದ್ದಾರೆ. ಗ್ರಾಮಕ್ಕೆ ಬಸ್ಸನ್ನು ಬಿಡುವಲ್ಲಿ ತಮ್ಮದೇ ಆದ ಪ್ರಯತ್ನವನ್ನು ನಡೆಸಿದ ಶಾಸಕರಿಗೆ ಸಾರ್ವಜನಿಕರು ಧನ್ಯವಾದಗಳನ್ನು ತಿಳಿಸಿದ್ದಾರೆ.
ಬಸ್ಸನೇ ಕಾಣದ ಗ್ರಾಮಗಳಿಗೆ ಸ್ವಾತಂತ್ರö್ಯದ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ಬಸ್ ವ್ಯವಸ್ಥೆ ಕಲ್ಪಿಸಿರುವುದು ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ.
.jpeg)
.jpeg)



0 Comments