ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾಡಳಿತದ ವತಿಯಿಂದ 2022-23 ನೆಯ ಸಾಲಿನ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ವತಿಯಿಂದ ಶಿಕ್ಷಕರ ದಿನಾಚರಣೆ ಯಂದು ಪ್ರಧಾನ ಮಾಡಲಾಗುವ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಈ ಬಾರಿ 24 ಜನ ಶಿಕ್ಷಕರು ಆಯ್ಕೆಯಾಗಿದ್ದಾರೆ.
ಈ ಪ್ರಶಸ್ತಿಗೆ ಕಿರಿಯ ಪ್ರಾಥಮಿಕ ವಿಭಾಗ, ಹಿರಿಯ ಪ್ರಾಥಮಿಕ ವಿಭಾಗ ಹಾಗೂ ಪ್ರೌಢಶಾಲಾ ವಿಭಾಗಗಳಾಗಿ ಮೂರು ವಿಭಾಗದಲ್ಲಿ ಶಿಕ್ಷಕರನ್ನು ಆಯ್ಕೆ ಮಾಡಲಾಗಿದ್ದು, ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ಅತ್ಯುತ್ತಮ ಶಿಕ್ಷಕರಿಗೆ ಪ್ರಧಾನ ಮಾಡಲಾಗುತ್ತದೆ.
ಸೆಪ್ಟೆಂಬರ್ 5ರ ಶಿಕ್ಷಕರ ದಿನಾಚರಣೆ ಯಂದು ನಡೆಯುವ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿರುವ ಶಿಕ್ಷಕರ ಪಟ್ಟಿ ಈ ಕೆಳಗಿನಂತಿದೆ.
ಕಿರಿಯ ಪ್ರಾಥಮಿಕ ಶಾಲಾ ವಿಭಾಗದಿಂದ ಆಯ್ಕೆಯಾದ ಶಿಕ್ಷಕರು :
1. ವೆಂಕಟೇಶ್ ಜಿ.ಎಂ ಸಹ ಶಿಕ್ಷಕರು, ಸ.ಕಿ.ಪ್ರಾ.ಶಾಲೆ ರಾಜಾನಗರ, ಶೃಂಗೇರಿ ತಾಲೂಕು
2. ಹೊನ್ನಪ್ಪ ಎಂ. ಸ.ಕಿ.ಪ್ರಾ.ಶಾಲೆ ನರಸೀಪುರ, ಕೊಪ್ಪ ತಾಲೂಕು
3. ದೀಪಾ ಆರ್ ಸಹ ಶಿಕ್ಷಕರು, ಸ.ಕಿ.ಪ್ರಾ.ಶಾಲೆ ನರಸಿಂಹರಾಜಪುರ
4. ಇಂಪ, ಸಹ ಶಿಕ್ಷಕರು, ಸ.ಕಿ.ಪ್ರಾ.ಶಾಲೆ ಬಾನಹಳ್ಳಿ, ಮೂಡಿಗೆರೆ ತಾಲೂಕು
5. ಸಿ.ಶೀಲಾ, ಸಹ ಶಿಕ್ಷಕರು, ಸ.ಕಿ.ಪ್ರಾ.ಶಾಲೆ ಮಣೆನಹಳ್ಳಿ, ಚಿಕ್ಕಮಗಳೂರು
6. ವಸಂತ್ ಕುಮಾರ್, ಸಹ ಶಿಕ್ಷಕರು, ಸ.ಕಿ.ಪ್ರಾ.ಶಾಲೆ ಬೀರೂರು ವಲಯ
7. ಪುಟ್ಟಪ್ಪ, ಸಹ ಶಿಕ್ಷಕರು, ಸ.ಕಿ.ಪ್ರಾ.ಶಾಲೆ ಬಸವನಹಳ್ಳಿ, ತರೀಕೆರೆ ತಾಲೂಕು
8. ರಮೇಶ್ ಹೆಚ್.ಎಂ ಸಹ ಶಿಕ್ಷಕರು, ಸ.ಕಿ.ಪ್ರಾ.ಶಾಲೆ ದೊಡ್ಡನಕಟ್ಟೆ, ಕಡೂರು ತಾಲೂಕು
ಹಿರಿಯ ಪ್ರಾಥಮಿಕ ವಿಭಾಗದಿಂದ ಆಯ್ಕೆಯಾದ ಶಿಕ್ಷಕರು :
1. ಶೋಭಾ, ಸಹ ಶಿಕ್ಷಕರು, ಸ.ಹಿ.ಪ್ರಾ.ಶಾಲೆ ಧರೆಕೊಪ್ಪ
2. ಸುರೇಂದ್ರ, ಸಹ ಶಿಕ್ಷಕರು, ಸ.ಹಿ.ಪ್ರಾ.ಶಾಲೆ ಕೊಪ್ಪ
3. ಶಿಲ್ಪ ಕುಮಾರಿ B.S ಸಹ ಶಿಕ್ಷಕರು, ಸ.ಹಿ.ಪ್ರಾ.ಶಾಲೆ ಸೀತೂರು
4. ಶಿವಮ್ಮ.ಸಿ ಸಹ ಶಿಕ್ಷಕರು, ಸ.ಹಿ.ಪ್ರಾ.ಶಾಲೆ ನರಾಣಾಪುರ
5. ರೇಣುಕಮ್ಮ, ಪ್ರಭಾರಿ ಮುಖ್ಯಶಿಕ್ಷಕರು ಸ.ಹಿ.ಪ್ರಾ.ಶಾಲೆ ಮುತ್ತಿಗೆಪುರ, ಮೂಡಿಗೆರೆ
6. ಪುಟ್ಟಸ್ವಾಮಿ H.S ಸಹ ಶಿಕ್ಷಕರು, ಸ.ಹಿ.ಪ್ರಾ.ಶಾಲೆ ತಳಿಹಳ್ಳ, ಚಿಕ್ಕಮಗಳೂರು
7. ನಾಗರಾಜು H.C ದೈಹಿಕಶಿಕ್ಷಕರು, ಸ.ಉ.ಹಿ.ಪ್ರಾ.ಶಾಲೆ ಬೀರೂರು
8. ಮಂಜಮ್ಮ, ಮುಖ್ಯಶಿಕ್ಷಕರು ಸ.ಹಿ.ಪ್ರಾ.ಶಾಲೆ ಬಂಜೇನಹಳ್ಳಿ ಕಡೂರು
ಪ್ರೌಢಶಾಲಾ ವಿಭಾಗದಿಂದ ಆಯ್ಕೆಯಾದ ಶಿಕ್ಷಕರು :
1. ಪಿ. ಕರಿಬಸಪ್ಪ, ಸಹಶಿಕ್ಷಕರು ಕೆಪಿಎಸ್ ಪ್ರೌಢಶಾಲೆ ರಂಗೇನಹಳ್ಳಿ.
2. ವಾಸುದೇವ ಮುಖ್ಯ ಶಿಕ್ಷಕರು ಬಣಕಲ್ ಪ್ರೌಢಶಾಲೆ.
3. ದತ್ತಾತ್ರೇಯ ಯಾಜಿ ಮುಖ್ಯಶಿಕ್ಷಕರು ಸರ್ಕಾರಿ ಪ್ರೌಢಶಾಲೆ ತೊರೆಹಡ್ಲು
4. ಸುರೇಶ್ ಕೆ.ಟಿ ಮುಖ್ಯಶಿಕ್ಷಕರು, ಸರ್ಕಾರಿ ಪ್ರೌಢಶಾಲೆ ಅಗಳಗಂಡಿ
5. ಹರೀಶ ಬಿ.ಇ ಸಹಶಿಕ್ಷಕರು ಸರ್ಕಾರಿ ಪ್ರೌಢಶಾಲೆ ಕಟ್ಟಿನ ಮನೆ
6. ಶೀಲಾ ಸಹ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ ಸೋಮನಹಳ್ಳಿ
7. ಪುಟ್ಟರಾಜು ಎಚ್ ಕೆ ಸಹ ಶಿಕ್ಷಕರು ಕೆಎಲ್‌ಕೆ ಪ್ರೌಢಶಾಲೆ ಬೀರೂರು
8. ಕುಮಾರಸ್ವಾಮಿ ಬಿ ವೃತ್ತಿ ಶಿಕ್ಷಕರು ಸರ್ಕಾರಿ ಪದವಿ ಪೂರ್ವ ಕಾಲೇಜು ಬೇಲೂರು ರಸ್ತೆ
ಪ್ರಶಸ್ತಿಗೆ ಆಯ್ಕೆಯಾಗಿರುವ ಎಲ್ಲಾ ಶಿಕ್ಷಕರಿಗೆ ಶಾಲಾ ಅಭಿವೃದ್ಧಿ ಮಂಡಳಿ ಹಾಗೂ ಸಹ ಶಿಕ್ಷಕವೃಂದ ಹಾಗೂ ಶಾಲಾ ವಿದ್ಯಾರ್ಥಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.





0 Comments