ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಆದಿಗುರು ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಮಠಗಳಲ್ಲಿ ಪ್ರಥಮವಾದ ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠದಲ್ಲಿ ಈ ಬಾರಿ ಶಾರದಾ ಶರನ್ನವರಾತ್ರಿಯ ಅಂಗವಾಗಿ ಈಗಾಗಲೇ ತಯಾರಿಗಳು ಭರದಿಂದ ಆರಂಭವಾಗಿದ್ದು ಸೆಪ್ಟೆಂಬರ್ 25 ರಿಂದ ಅಕ್ಟೋಬರ್ 06ರ ವರೆಗೆ ಈ ಬಾರಿ ನವರಾತ್ರಿ ನಡೆಯಲಿದ್ದು, ದೇವಿ ಶಾರದೆ ವಿವಿಧ ಅಲಂಕಾರಗಳಲ್ಲಿ ಕಂಗೊಳಿಸಲಿದ್ದಾಳೆ. 

ಇದನ್ನೂ ಓದಿ: ಶೃಂಗೇರಿ: ಅಕ್ರಮ ಗೋಮಾಂಸ ಸಾಗಾಟ ನಡೆಸುತ್ತಿದ್ದ ಇಬ್ಬರ ಬಂಧನ ; ಕಠಿಣ ಕ್ರಮಕ್ಕೆ ಹಿಂದೂ ಸಂಘಟನೆಗಳ ಆಗ್ರಹ

ಶರನ್ನವರಾತ್ರಿಯ ದಿನಗಳಲ್ಲಿ ಜಗನ್ಮಾತೆ ಶಾರದೆಗೆ ವಿಶೇಷ ಪೂಜೆ ಪುನಸ್ಕಾರಗಳು, ಸೇವೆಗಳು ನಡೆಯಲಿದ್ದು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. 


ಶ್ರೀ ಮಠದ ರಾಜಗೋಪುರ, ಆವರಣ ಹಾಗೂ ಪಟ್ಟಣದ ಪ್ರಮುಖ ರಸ್ತೆಗಳು ವಿದ್ಯುತ್ ದೀಪಾಲಂಕಾರದಿಂದ ನವರಾತ್ರಿಯ ದಿನಗಳಲ್ಲಿ ಕಂಗೊಳಿಸಲಿದ್ದು, ಉತ್ಸವ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಸಲುವಾಗಿ ರಾಜ್ಯದ, ದೇಶದ ಅನೇಕ ಕಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಶೃಂಗೇರಿಗೆ ಆಗಮಿಸುತ್ತಾರೆ.

ಶರನ್ನವರಾತ್ರಿಯ ದಿನಗಳಂದು ಶಾರದಾ ದೇವಿಗೆ ನಡೆಯುವ ಅಲಂಕಾರಗಳು: 

ಸೆ. 25 ರಂದು ಶಾರದಾಂಬೆಗೆ ಮಹಾಭಿಷೇಕ ನಡೆಯಲಿದ್ದು ಅಂದು ಜಗತ್ಪ್ರಸೂತಿಕಾಲಂಕಾರದಲ್ಲಿ ದೇವಿ ಕಂಗೊಳಿಸಲಿದ್ದಾಳೆ.

ಸೆ.26 ಹಂಸವಾಹನಾಲಂಕಾರ

ಸೆ.27 ಬ್ರಾಹ್ಮೀ ಅಲಂಕಾರ

ಸೆ.28 ಮಾಹೇಶ್ವರಿ

ಸೆ.29 ಮಯೂರವಾಹನಾಲಂಕಾರ

ಸೆ.30 ಗರುಡವಾಹನಾಲಂಕಾರ

ಅ.01 ಮೋಹಿನಿ ಅಲಂಕಾರ

ಅ.02 ವೀಣಾಶಾರದಾಲಂಕಾರ

ಅ.03 ರಾಜರಾಜೇಶ್ವರಿ ಅಲಂಕಾರ

ಅ.04 ಸಿಂಹವಾಹನ ಅಲಂಕಾರ

ಅ.05 ಗಜಲಕ್ಷ್ಮೀ ಅಲಂಕಾರ

ಅ.06 ರಂದು ಗಜಲಕ್ಷ್ಮೀ ಅಲಂಕಾರದಲ್ಲಿ ಶ್ರೀ ಶಾರದಾದೇವಿಯ ಮಹಾರಥೋತ್ಸವ ನಡೆಯಲಿದೆ. 

ನವರಾತ್ರಿಯ ಈ ದಿನಗಳಂದು ಶಾಸ್ತ್ರೀಯ ಸಂಗೀತ, ಹಾಡುಗಾರಿಕೆ, ವಯೋಲಿನ್ ವಾದನ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹ ಶ್ರೀ ಮಠದ ಆವರಣದಲ್ಲಿ ನಡೆಯಲಿದೆ.