ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕಳೆದ ಮೂರು ತಿಂಗಳಿನಿಂದ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಸುರಿದ ಧಾರಾಕಾರ ಮಳೆಯಿಂದಾಗಿ ಜಿಲ್ಲೆಯಲ್ಲಿ 398 ಕೋಟಿ ರೂಪಾಯಿ ಹಣ ನಷ್ಟವಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎನ್ ರಮೆಶ್ ಮಾಹಿತಿ ನೀಡಿದರು.
ಇದನ್ನೂ ಓದಿ: ಮೂಡಿಗೆರೆ: ಆನೆ ಕಾಲ್ತುಳಿತಕ್ಕೆ ಸಿಲುಕಿ ಕೃಷಿಕ ಬಲಿ; ಗ್ರಾಮಸ್ಥರಲ್ಲಿ ಮೂಡಿದ ಆತಂಕ
ಈ ಕುರಿತಾಗಿ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಮಾಹಿತಿ ನೀಡಿದ ಅವರು ವಾಡಿಕೆಗಿಂತ ಈ ಬಾರಿ ಅತ್ಯಧಿಕವಾಗಿ ಹೆಚ್ಚಿನ ಮಳೆಯಾಗಿದ್ದು ಜಿಲ್ಲೆಯ ಹಲವೆಡೆ ವಿವಿಧ ರೀತಿಯ ಅವಾಂತರಗಳು ಸೃಷ್ಟಿಯಾಗಿದೆ. ಹಾನಿಯಾಗಿರುವುದರ ಕುರಿತು ಈಗಾಗಲೇ ವರದಿಯನ್ನು ಸಂಬಂಧಿಸಿದ ಅಧಿಕಾರಿಗಳಿಂದ ತರಿಸಿಕೊಂಡಿದ್ದು ಸರ್ಕಾರಕ್ಕೆ ಕಳುಹಿಸಲಾಗಿದೆ, ಮನೆಗಳ ಹಾನಿ ಪ್ರಮಾಣ 18 ಕೋಟಿ ಎಂದು ಅಂದಾಜಿಸಲಾಗಿದ್ದು ಸರ್ಕಾರದಿಂದ ಬರುವ ಹಣವನ್ನು ಕೂಡಲೇ ಫಲಾನುಭವಿಗಳಿಗೆ ದೊರಕಿಸುವ ವ್ಯವಸ್ಥೆಯನ್ನು ಮಾಡಲಾಗುವುದು ಎಂದರು.
ಜಿಲ್ಲೆಯಲ್ಲಿ ಹಾನಿಗೀಡಾದ 90 ಪ್ರತಿಶತ ಮನೆಗಳಿಗೆ ಮೊದಲ ಹಂತದ ಅನುದಾನವನ್ನು ಬಿಡುಗಡೆಗೊಳಿಸಲಾಗಿದ್ದು, ಮುಂದಿನ ಹಣ ಬಿಡುಗಡೆ ಮನೆ ಕಟ್ಟುವ ಹಂತದ ಪ್ರಗತಿಯ ಮೇಲೆ ನೇರವಾಗಿ ಪಾವತಿಯಾಗುತ್ತದೆ ಎಂಬುದಾಗಿ ಮಾಹಿತಿ ನೀಡಿದರು.
9,815 ಹೆಕ್ಟೇರ್ ಪ್ರದೇಶ ಕೃಷಿಭೂಮಿ ಹಾನಿ:
ಸಂಭವಿಸಿದ ಧಾರಾಕಾರ ಮಳೆಯಿಂದಾಗಿ ಜಿಲ್ಲೆಯಲ್ಲಿ ಕೃಷಿ ಹಾಗೂ ತೋಟಗಾರಿಕಾ ಇಲಾಖೆಗೆ ಸಂಬಂಧಿಸಿದ ಪ್ರದೇಶಗಳು ಹಾನಿಯಾಗಿದ್ದು ಇದರ ಮೊತ್ತ ಅಂದಾಜು ಮೌಲ್ಯದಲ್ಲಿ 136 ಕೋಟಿ ಯಾಗಿದ್ದು ಈ ಕುರಿತಾಗಿಯೂ ವರದಿಯನ್ನು ಸರ್ಕಾರಕ್ಕೆ ನೀಡಲಾಗಿದೆ ಎಂಬುದಾಗಿ ಜಿಲ್ಲಾಧಿಕಾರಿಗಳಾದ ಕೆ.ಎನ್ ರಮೇಶ್ ಮಾಹಿತಿ ನೀಡಿದರು.





0 Comments