ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಭಯೋತ್ಪಾದಕ ಸಂಘಟನೆಗಳ ಜೊತೆಗೆ ಸಂಪರ್ಕದಲ್ಲಿರುವ ಹಾಗೂ ದೇಶ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿರುವ ಹಿನ್ನೆಲೆ ಪಿಎಫ್ಐ ಸಂಘಟನೆಯನ್ನು ದೇಶದಾದ್ಯಂತ 5 ವರ್ಷಗಳ ಕಾಲ ಬ್ಯಾನ್ ಮಾಡಿದ್ದು ಈ ಕುರಿತಾಗಿ ಪ್ರಜಾಪ್ರಭುತ್ವ ಉಳಿಸಿ ಆಂದೋಲನ ವೇದಿಕೆಯ ಕಾರ್ಯಕರ್ತ ನಾಗೇಶ್ ಅಂಗೀರಸ ಅವರು ಪತ್ರಿಕಾ ಹೇಳಿಕೆ ನೀಡಿದ್ದಾರೆ. 

PFI ನಿಷೇಧದ ಕುರಿತು ತಿಳಿಸಿರುವ ಅವರು ಸರ್ಕಾರವು ಮತೀಯ ದ್ವೇಷ ಹಾಗೂ ದೇಶವಿರೋಧಿ ಕ್ರಿಮಿನಲ್ ಚಟುವಟಿಕೆಯ ಇತಿಹಾಸ ಹೊಂದಿರುವ ಪಿ.ಎಫ್.ಐ ಸಂಘಟನೆಯನ್ನು ನಿಷೇಧಿಸಿದ ಕ್ರಮವನ್ನು ನಮ್ಮ ಸಂಘಟನೆಯು ಬೆಂಬಲಿಸುತ್ತದೆ ಹಾಗೂ ಶ್ಲಾಘಿಸುತ್ತದೆ ಎಂದರು. ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿಯವರು ಕೇವಲ ಮತಬ್ಯಾಂಕ್ ಓಲೈಕೆಯ ರಾಜಕಾರಣಕ್ಕಾಗಿ ದೇಶವನ್ನು ಬಲಿಕೊಟ್ಟು ಶಾಬಾನು ಪ್ರಕರಣದಲ್ಲಿ ದೇಶದ ಸರ್ವೋಚ್ಛ ನ್ಯಾಯಾಲಯದ ಐತಿಹಾಸಿಕ ಆದೇಶವನ್ನು ಧಿಕ್ಕರಿಸಿ ಇಡೀ ಕಾನೂನಿಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತಂದ ಕ್ರಮ ಮತ್ತು ರಾಜ್ಯದಲ್ಲಿ ಮತಬ್ಯಾಂಕ್ ರಾಜಕಾರಣ ಮುಂದುವರೆದ ಭಾಗವಾಗಿ ಹಿಂದಿನ ಮುಖ್ಯಮಂತ್ರಿ ಕಾಂಗ್ರೆಸ್ಸಿನ ಸಿದ್ದರಾಮಯ್ಯನವರು ಕೇವಲ ಚುನಾವಣೆ ಗೆಲ್ಲುವ ಉದ್ದೆಶಕ್ಕಾಗಿ ಚುನಾವಣಾ ಪೂರ್ವದಲ್ಲಿಯೇ ಪಿ.ಎಫ್.ಐ ಹಾಗೂ ಎಸ್.ಡಿ.ಪಿ.ಐ ನವರ ಪೂರ್ಣ ಬೆಂಬಲ ಪಡೆದು ಚುನಾವಣೆ ಗೆಲುವಿನ ನಂತರ ಆ ಸಂಘಟನೆಗಳ ಋಣ ತೀರಿಸುವ ಉದ್ದೇಶದಿಂದ ತಾನು ಅದಿಕಾರ ಪಡೆದ ಪ್ರಾರಂಭದಲ್ಲಿಯೇ ಏಕಪಕ್ಷೀಯವಾಗಿ 176 ಜನರ ಸಾವಿರಾರು ಮೊಕದ್ದಮೆಗಳನ್ನು ಹಿಂಪಡೆದ ಕುರಿತು ಈಗ ರಾಜ್ಯದ ಜನತೆಗೆ ಸ್ಪಷ್ಟೀಕರಣ ನೀಡಬೇಕಾಗಿ ನಾವು ಆಗ್ರಹಿಸುತ್ತೇವೆ ಎಂದರು. 


ಈ ಇಬ್ಬರು ಪ್ರಮುಖ ರಾಜಕೀಯ ನಾಯಕರ ಅಪಕ್ವ ನಡೆ ಇಂದು ಇಂತಹ ಸಂಘಟನೆಗಳ ಮಿತಿ ಮೀರಿದ ಉಪಟಳಗಳಿಗೆ ಕಾರಣವಾಗಿದೆ. 2000ನೇ ಇಸವಿಯಲ್ಲಿ ಸರ್ಕಾರವು ಅನಿವಾರ್ಯವಾಗಿ ಸಿಮಿ ಸಂಘಟನೆಯನ್ನು ನಿಷೇಧಿಸಿದ್ದು ಇದೇ ಸಂಘಟನೆಯು 2003 ರಲ್ಲಿ ಪಿ.ಎಫ್.ಐ ಎಂಬ ಹೆಸರಿನಲ್ಲಿ ಮರುಜೀವ ಪಡೆದಿದ್ದು ರಾಜ್ಯದ ಎಸ್.ಡಿ.ಪಿ.ಐ ಅದರ ರಾಜಕೀಯದ ಇನ್ನೊಂದು ಮುಖವಾಗಿದೆ. ಕೇರಳ ರಾಜ್ಯದ ಕಮ್ಯುನಿಸ್ಟ್ ಮತ್ತು ಕಾಂಗ್ರೆಸ್ ಎರಡು ಸರ್ಕಾರಗಳು 2000ದ ದಶಕದಲ್ಲಿಯೇ ಪಿ.ಎಫ್.ಐ ಸಂಘಟನೆಯ ಕ್ರಿಮಿನಲ್ ಮತ್ತು ದೇಶವಿರೋಧಿ ಚಟುವಟಿಕೆಗಳ ವಿವರಗಳನ್ನು ಕೇಂದ್ರಕ್ಕೆ ಸಲ್ಲಿಸಿ ಆ ಸಂಘಟನೆಯನ್ನು ನಿಷೇದಿಸುವಂತೆ ಶಿಫಾರಸ್ಸು ಮಾಡಿರುತ್ತವೆ. ಆದರೂ ಈ ಘಟನೆಯ 5-6 ವರ್ಷಗಳ ನಂತರ ಸಿದ್ದರಾಮಯ್ಯ ಅವರಿಗೆ ಈ ಸಂಘಟನೆಗಳ ಕುರಿತು ಪ್ರೀತಿ ಉಕ್ಕಿ ಬಂದಿದ್ದು ಅವರ ರಾಜಕೀಯ ನಡೆಯ ಬಗ್ಗೆ ರಾಜ್ಯದ ಜನತೆಗೆ ಅನುಮಾನ ಉಂಟುಮಾಡುತ್ತಿದೆ ಎಂದರು. 

ಉತ್ತರ ಪ್ರದೇಶದ ಮತ್ತು ದೆಹಲಿಯ CAA ವಿರೋಧಿ ಗಲಭೆ ಜಾರ್ಖಂಡ್‌ನ ಕೋಮುಗಲಭೆಗಳು ಕೇರಳದ ನೂರಾರು ರಾಜಕೀಯ ಹತ್ಯೆಗಳು ಕರ್ನಾಟಕದ 22 ರಾಜಕೀಯ ಹತ್ಯೆಗಳು ಕಣ್ಣೂರಿನ ಬಾಂಬ್ ಬ್ಲಾಸ್ಟ್ ಪ್ರಕರಣಗಳು ಬಿಹಾರ ತಮಿಳುನಾಡಿನ ಗಲಭೆ ನಡೆಸಿದ ಮತ್ತು ನಡೆಸಲಿರುವ ಸಂಚು ಮುಸ್ಲಿಂ ರಾಷ್ಟ್ರಗಳಿಂದ ದೇಶವಿರೋಧಿ ಕೃತ್ಯ ನಡೆಸಲು ಅಪಾರ ಪ್ರಮಾಣದ ಹಣ ಪಡೆದ ಸಾಕ್ಷಿಗಳು ಐಸಿಸ್ ಮತ್ತು ಅಲ್ಕೈದಾದಂತಹ ವಿಶ್ವದ ಉಗ್ರ ಸಂಘಟನೆಗಳಿಗೆ ಭಾರತದ ತಾಲ್ಲೂಕು ಮಟ್ಟದಿಂದ ಯುವಕರನ್ನು ಮತ್ತು ಯುವತಿಯರನ್ನು ಸೇನಾಪಡೆಗಳಿಗೆ ಸೇರಿಸುವ ಮಾದರಿಯಲ್ಲಿ ಸ್ಲೀಪರ್ ಸೆಲ್ ಕಾರ್ಯಚರಣೆ ದೇಶದೊಳಗೆ ಕೋಮುಗಲಭೆ ಆಯಕಟ್ಟಿನ ಪ್ರಮುಖ ಜನರ ಹತ್ಯೆ ಪೋಲಿಸ್ ವ್ಯವಸ್ಥೆಯನ್ನು ಗುರಿಯಾಗಿಸಿ ದಾಳಿ ನಡೆಸಿ ಸಮಾಜದಲ್ಲಿ ಭೀತಿ ಮೂಡಿಸುವ ಅಂತಹ ಅಕ್ರಮ ಚಟುವಟಿಕೆಗಳ ಸೂಕ್ತ ದಾಖಲೆಗಳನ್ನು ಇಟ್ಟುಕೊಂಡೆ ಕೇಂದ್ರ ಸರ್ಕಾರವು ಈ ಕ್ರಮ ಕೈಗೊಂಡಿದ್ದು ತಡವಾಗಿಯಾದರೂ ಅತ್ಯಂತ ಸಮಂಜಸವಾಗಿದೆ ಕೇಂದ್ರ ಸರ್ಕಾರದ ಈ ನಡೆಗೆ ದೇಶ ಋಣಿಯಾಗಿದೆ. 2009 ರಲ್ಲಿಯೇ ಈ ಸಂಘಟನೆಗಳ ಚಟುವಟಕೆಯ ಕುರಿತು ನಾವು ದ್ವನಿ ಎತ್ತಿದ್ದು ಈ ಸಂಘಟನೆಗಳನ್ನು ನಿಷೇಧಿಸುವಂತೆ ವರ್ಷದ ಹಿಂದೆಯೇ ನಾವು ಸರ್ಕಾರವನ್ನು ಎಚ್ಚರಿಸಿದ್ದು ಈ ಸಂದರ್ಭದಲ್ಲಿ ಜ್ಞಾಪಿಸಿಕೊಳ್ಳುತ್ತಿದ್ದು ದೇಶದ ಬೆಳವಣಿಗೆಗೆ, ಸಾರ್ವಭೌಮತೆಗೆ ಯಾವುದೇ ರೀತಿಯ ಧಕ್ಕೆ ಉಂಟಾಗದ ರೀತಿಯಲ್ಲಿ ಹಾಗೂ ಮುಂದಿನ ದಿನಗಳಲ್ಲಿ ಈ ರೀತಿಯ ಯಾವುದೇ ಸಂಘಟನೆಗಳು ಹುಟ್ಟಿದರೂ ಕೂಡ ಅವುಗಳನ್ನು ಸರ್ಕಾರ ಮಟ್ಟಹಾಕಬೇಕು ಎಂದು ಆಗ್ರಹಿಸಿದರು.