ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕಳೆದ ಕೆಲ ದಿನಗಳ ಹಿಂದಷ್ಟೇ ಬಸ್ಸಿನಿಂದ ಅಚಾನಕ್ಕಾಗಿ ಕೆಳಗೆ ಬಿದ್ದು ಮೆದುಳು ನಿಷ್ಕ್ರಿಯಗೊಂಡು ನಂತರದಲ್ಲಿ ಅಂಗಾಂಗದಾನ ಮಾಡಿದ್ದ ಮೃತ ರಕ್ಷಿತಾಳ ಕುಟುಂಬಕ್ಕೆ ಇಂದು ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಪರಿಹಾರ ವಿತರಣೆ ನಡೆಯಿತು.
ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಮೃತ ಯುವತಿ ರಕ್ಷಿತಾ ಮನೆಗೆ ಭೇಟಿ ನೀಡಿದ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜು ರಕ್ಷಿತಾಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ರಕ್ಷಿತಾಳ ತಂದೆ ತಾಯಿ ಹಾಗೂ ಸಹೋದರರಿಗೆ ಸಾಂತ್ವಾನ ಹೇಳಿದರು.
ಇದನ್ನೂ ಓದಿ: ಕಾಫಿ ತೋಟದಲ್ಲಿ ಬೀಡುಬಿಟ್ಟ ಕಾಡಾನೆಗಳು; ಗ್ರಾಮಸ್ಥರಲ್ಲಿ ಮೂಡಿದ ಆತಂಕ
ಸರ್ಕಾರದ ವತಿಯಿಂದ ಐದು ಲಕ್ಷ ರೂಗಳ ಪರಿಹಾರ, ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಅವರು ವೈಯುಕ್ತಿಕವಾಗಿ ಎರಡು ಲಕ್ಷ ರೂಪಾಯಿ ಹಣ ಹಾಗೂ ತಾಂಡ್ಯ ಅಭಿವೃದ್ದಿ ನಿಗಮದ ವತಿಯಿಂದ ಒಂದು ಲಕ್ಷ ರೂಪಾಯಿ ಒಟ್ಟಾರೆ ಎಂಟು ಲಕ್ಷ ರೂಪಾಯಿ ಹಣ ಕುಟುಂಬಕ್ಕೆ ಪರಿಹಾರದ ರೂಪದಲ್ಲಿ ಇಂದು ವಿತರಿಸಲಾಯಿತು.
ಈ ಸಮಯದಲ್ಲಿ ಜಿಲ್ಲಾಧಿಕಾರಿ ಕೆ.ಎನ್ ರಮೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಕಡೂರು ಶಾಸಕ ಬೆಳ್ಳಿ ಪ್ರಕಾಶ್, ಜನಪ್ರತಿನಿಧಿಗಳು ಸೇರಿದಂತೆ ಅಧಿಕಾರಿಗಳು ಹಾಗೂ ಮೃತಳ ಕುಟುಂಬಸ್ಥರು ಇದ್ದರು.
ಕಾಫಿ ತೋಟದಲ್ಲಿ ಬೀಡುಬಿಟ್ಟ ಕಾಡಾನೆಗಳು; ಗ್ರಾಮಸ್ಥರಲ್ಲಿ ಮೂಡಿದ ಆತಂಕ
ಹಾಸನ: ಹಾಸನದಲ್ಲಿ ಎರಡು ಕಾಡಾನೆಗಳು ಪ್ರತ್ಯಕ್ಷವಾಗಿದ್ದು ಸ್ಥಳೀಯರನ್ನು ಆತಂಕಕ್ಕೆ ದೂಡಿದೆ.
ಹಾಸನದ ಕಿತ್ತಗಳಲೆ ಬಳಿಯಲ್ಲಿ ಎರಡು ಆನೆಗಳು ಪ್ರತ್ಯಕ್ಷವಾಗಿದ್ದು, ಒಂದೆಡೆ ಪ್ರಾಣಭೀತಿ ಜನರಲ್ಲಿ ಎದುರಾಗಿದ್ದರೆ, ಇತ್ತ ಬೆಳೆಹಾನಿ ಸಂಭವಿಸುವ ಸಾಧ್ಯತೆಗಳೂ ರೈತರಲ್ಲಿ ತಲೆದೋರಿದೆ.
ಇಲ್ಲಿನ ಕಾಫಿ ತೋಟದಲ್ಲಿ ಆನೆಗಳು ತಿರುಗುತ್ತಿದ್ದು ಸ್ಥಳೀಯರಲ್ಲಿ ಅತೀವ ಆತಂಕ ಎದುರಾಗಿದೆ. ಮಲೆನಾಡು ಭಾಗದಲ್ಲಿ ಕಳೆದ ಅನೇಕ ವರ್ಷಗಳಿಂದ ಕಾಡಾನೆಗಳ ದಾಂಧಲೆ, ಉಪಟಳ ನಡೆಯುತ್ತಲೇ ಇದ್ದು ಅನೇಕ ಕೃಷಿಕರು ತಾವು ಬೆಳೆದ ಬೆಳೆಯನ್ನು ಕಳೆದು ಕೊಂಡಿದ್ದರೆ ಇನ್ನೂ ಅನೇಕ ಕೃಷಿ ಕಾರ್ಮಿಕರು, ಮಾಲೀಕರು ತಮ್ಮ ಜೀವವನ್ನೇ ಆನೆ ದಾಳಿಯಿಂದ ಕಳೆದುಕೊಂಡಿದ್ದಾರೆ.
ಆನೆ ಬಂದಿರುವ ಸುದ್ದಿ ತಿಳಿದು ಕಾಫಿ ತೋಟಗಳಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಮನೆಗೆ ಹಿಂದಿರುಗಿದ್ದಾರೆ. ಸುದ್ದಿ ತಿಳಿದು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಪುಂಡಾನೆಗಳನ್ನು ಮರಳಿ ಕಾಡಿಗೆ ಅಟ್ಟುವ ಸಲುವಾಗಿ ಪ್ರಯತ್ನ ನಡೆಸುತ್ತಿದ್ದಾರೆ.








0 Comments