ಶೃಂಗೇರಿ/ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಕಿಗೆ ಬಂದಿದೆ. 

ಇದನ್ನೂ ಓದಿ: ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾದ ಚಿಕ್ಕಮಗಳೂರು ಮೂಲದ ಐಟಿ ಉದ್ಯೋಗಿ

ಶೃಂಗೇರಿಯಲ್ಲಿ ಅನೇಕ ವರ್ಷಗಳ ಕಾಲ ಪೈಂಟಿಂಗ್ ವೃತ್ತಿಯನ್ನು ನಡೆಸುತ್ತಿದ್ದ ಶಿವಮೊಗ್ಗ ಮೂಲದ ಚೆನ್ನಗಿರಿ ನಿವಾಸಿ ಪ್ರದೀಪ್ (28) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. 


ಶೃಂಗೇರಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಬಜರಂಗದಳ ದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸದಾ ಚಟುವಟಿಕೆಗಳಲ್ಲಿ ತೊಡಗಿದ್ದ ಪ್ರದೀಪ್ (ಚೋಟು) ಎಲ್ಲರ ಅಚ್ಚುಮೆಚ್ಚಿನ ಯುವಕನಾಗಿದ್ದ. 

ಪ್ರಸ್ತುತ ಶಿವಮೊಗ್ಗದಲ್ಲಿ ಕೆಲಸ ಮಾಡುತ್ತಿದ್ದ ಪ್ರದೀಪ್ ನಿನ್ನೆ ರಾತ್ರಿಯ ವೇಳೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಘಟನಾ ಸಂಬಂಧ ಸಂಬಂಧಿಕರು ಹಾಗೂ ಅಪಾರ ವರ್ಗದ ಸ್ನೇಹಿತರು ತೀವ್ರ ಬೇಸರವನ್ನು ವ್ಯಕ್ತಪಡಿಸಿದ್ದು ಸಂತಾಪ ಸೂಚಿಸಿದ್ದಾರೆ.

ಸಾಮಾನ್ಯವಾಗಿ ಜನರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣಗಳೇನು? ಅತೀ ಒತ್ತಡ ಹಾಗೂ ವ್ಯಸನವೇ ಪ್ರಮುಖ ಕಾರಣವೇ ?

ಮನುಷ್ಯನನ್ನು ಆತ್ಮಹತ್ಯೆಯ ಸನ್ನಿವೇಶಕ್ಕೆ ತಳ್ಳುವ ಕಾರಣಗಳು ಅನೇಕ. ಎನ್‌ಸಿಆರ್‌ಬಿ ಡೇಟಾ ಪ್ರಕಾರ ಹೇಳುವುದಾದರೆ, ಕೌಟುಂಬಿಕ ಸಮಸ್ಯೆ, ಗಂಭೀರ ಅನಾರೋಗ್ಯ, ಮಾದಕ ದ್ರವ್ಯ ಮತ್ತು ಮದ್ಯ ವ್ಯಸನ, ವೈವಾಹಿಕ ಬಿಕ್ಕಟ್ಟು, ಲವ್‌ ಅಫೇರ್ಸ್‌, ಸಾಲ/ ದಿವಾಳಿತನ, ವೃತ್ತಿಪರ ವಿಚಾರ, ಬಡತನ ಮತ್ತು ಇತರೆ ಕಾರಣಗಳು. ಕೋವಿಡ್‌ನಿಂದಲೂ ಆತ್ಮಹತ್ಯೆ ಪ್ರಕರಣ ಕಳೆದ ವರ್ಷ ಹೆಚ್ಚಾಗಿದೆ. ಐಸೋಲೇಷನ್‌ ಮನುಷ್ಯನನ್ನು ಒಂಟಿತನಕ್ಕೆ ತಳ್ಳಿಬಿಡುತ್ತದೆ.

ಎನ್‌ಸಿಆರ್‌ಬಿ ಡೇಟಾ ಪ್ರಕಾರ ಕಳೆದ ವರ್ಷ ದಾಖಲಾದ ಒಟ್ಟು ಆತ್ಮಹತ್ಯೆ ಪ್ರಕರಣದಲ್ಲಿ ಯಾವ ಕಾರಣದ್ದು ಎಷ್ಟು ಪಾಲು ಎಂದು ಗಮನಿಸುವುದಾದರೆ, ಕೌಟುಂಬಿಕ ಸಮಸ್ಯೆಗೆ ಶೇಕಡ 33.2, ಗಂಭೀರ ಅನಾರೋಗ್ಯಕ್ಕೆ ಶೇಕಡ 18.6, ಡ್ರಗ್‌ ಅಬ್ಯೂಸ್‌/ಆಲ್ಕೋಹಾಲಿಕ್‌ ಅಡಿಕ್ಷನ್‌ಗೆ ಶೇಕಡ 6.4, ವೈವಾಹಿಕ ಬಿಕ್ಕಟ್ಟಿಗೆ ಶೇಕಡ 4.8, ಲವರ್‌ ಅಫೇರ್ಸ್‌ಗೆ ಶೇಕಡ 4.6, ಸಾಲ ಮತ್ತು ದಿವಾಳಿತನದ ಕಾರಣಕ್ಕೆ ಶೇಕಡ 3.9, ನಿರುದ್ಯೋಗದ ಕಾರಣ ಶೇಕಡ 2.2, ಪರೀಕ್ಷೆಯಲ್ಲ ಫೇಲಾದುದಕ್ಕೆ ಶೇಕಡ 1, ವೃತ್ತಿಪರ ಕಾರಣಗಳಿಗೆ ಶೇಕಡ 1.6, ಬಡತನದ ಕಾರಣ ಶೇಕಡ 1.1 ಆತ್ಮಹತ್ಯೆಗಳಾಗಿವೆ. ಈ ಪೈಕಿ ದೊಡ್ಡ ಪಾಲು ಕೌಟುಂಬಿಕ ಸಮಸ್ಯೆ ಮತ್ತು ಗಂಭೀರ ಕಾಯಿಲೆಗಳದ್ದು ಎಂಬುದು ಗಮನಾರ್ಹ.

ಅನಾರೋಗ್ಯದ ಪೈಕಿ ಪ್ಯಾಂಕ್ರಿಯಾಟಿಕ್‌ ಕ್ಯಾನ್ಸರ್‌ ತುಂಬ ನೋವುಕೊಡುವಂಥದ್ದು. ಅದನ್ನು ತಡೆದುಕೊಳ್ಳುವುದು ಎಲ್ಲರಿಂದಲೂ ಆಗದು. ಅದು ಕೂಡ ಆತ್ಮಹತ್ಯೆಗೆ ಒಂದು ಕಾರಣ. ಡ್ರಗ್‌ ಅಬ್ಯೂಸ್‌ ಮತ್ತು ಆಲ್ಕೋಹಾಲಿಕ್‌ ಅಡಿಕ್ಷನ್‌ ಎಂಬುದು ಒಂದು ವಿಷ ವರ್ತುಲ.

ಇಲ್ಲಿ ವಿಷ ವರ್ತುಲ ಎಂದರೆ ಬೇಜಾರಾಗಿದೆ ಎಂದು ಸುಲಭದಲ್ಲಿ ಸುಖ ಬೇಕು ಎಂದು ಡ್ರಗ್ಸ್‌ ಮತ್ತು ಆಲ್ಕೋಹಾಲ್‌ ವ್ಯಸನಕ್ಕೆ ಬೀಳುವುದು. ಎಷ್ಟೋ ಜನ ಕೆನೆಬೀಸ್‌ ತಗೊಳ್ತಾರೆ. ಅದರಿಂದ ಖುಷಿ ಸಿಗುತ್ತೆ ಎಂಬ ಭಾವನೆ ಅವರದ್ದು. ಎಷ್ಟೋ ಜನ ಆಲ್ಕೋಹಾಲ್‌ ತಗೊಳ್ತಾರೆ, ಎಷ್ಟೋ ಜನ ಬೇರೆ ಬೇರೆ ಡ್ರಗ್ಸ್‌ ತಗೊಳ್ತಾರೆ. ಹೆಚ್ಚು ಖಿನ್ನತೆಗೆ ಒಳಗಾದಾಗ ಹೆಚ್ಚು ಹೆಚ್ಚು ವ್ಯಸನಕ್ಕೆ ಒಳಗಾಗುತ್ತಾರೆ.

ಡ್ರಗ್ಸ್‌ ಮತ್ತು ಆಲ್ಕೊಹಾಲ್‌ ಡಿಪ್ರೆಶನ್‌ ಹೆಚ್ಚಿಸುತ್ತದೆ. ಅದು ತಾತ್ಕಾಲಿಕ ಧೈರ್ಯವನ್ನು ತುಂಬುತ್ತದೆಯೇ ಹೊರತು ಖಿನ್ನತೆಯನ್ನು ಕಡಿಮೆ ಮಾಡದು. ಮನುಷ್ಯತ್ವದ ಮನಸ್ಸನ್ನು ಹದಗೆಡುವಂತೆ ಮಾಡಿ ಅಪಾಯಕಾರಿ ಕ್ರಮಕ್ಕೆ ಮುಂದಾಗಲು ಪ್ರೇರಣೆ ಕೊಡುತ್ತದೆ ಎಂಬುದನ್ನು ಗಮನಿಸಬೇಕು.