ಕಳಸ : (ನ್ಯೂಸ್ ಮಲ್ನಾಡ್ ವರದಿ) ತೋಟದಲ್ಲಿ ಕೆಲಸ ಮಾಡುವಾಗ ಕೂಲಿ ಕಾರ್ಮಿಕನ ಮೇಲೆ ಕರಡಿ ದಾಳಿ ಮಾಡಿರುವ ಘಟನೆ ಜಿಲ್ಲೆಯ ಕಳಸ ತಾಲೂಕಿನ ಕುದುರೆಮುಖ ಸಮೀಪದ ಬಿಳಗಲ್‍ನ ಕಾಫಿತೋಟದಲ್ಲಿ ನಡೆದಿದೆ.
ಕರಡಿ ದಾಳಿಗೊಳಗಾದ ಕೂಲಿ ಕಾರ್ಮಿಕನನ್ನ ಬೆಳ್ಳಪ್ಪ ಎಂದು ಗುರುತಿಸಲಾಗಿದೆ. ಕಾರ್ಮಿಕ ಬೆಳ್ಳಪ್ಪ ತೋಟದಲ್ಲಿ ಕೆಲಸ ಮಾಡುವ ವೇಳೆ ಮರಿಗಳೊಂದಿಗೆ ತೋಟಕ್ಕೆ ಬಂದ ಕರಡಿ ಏಕಾಏಕಿ ದಾಳಿ ಮಾಡಿದೆ. ಕೂಡಲೇ ತೋಟದಲ್ಲಿ ಕೆಲಸ ಮಾಡುತ್ತಿದ್ದ ಇತರೆ ಕಾರ್ಮಿಕರು ಅವರನ್ನ ಆಸ್ಪತ್ರೆಗೆ ಸೇರಿಸಿದ್ದಾರೆ.
ಕರಡಿ ದಾಳಿಯಿಂದ ಬೆಳ್ಳಪ್ಪನವರ ಒಂದು ಕಾಲು ಗಂಭೀರ ಗಾಯವಾಗಿದೆ. ಮಂಡಿಯಿಂದ ಕೆಳಬಾಗದಲ್ಲಿ ಮಾಂಸಖಂಡಗಳನ್ನ ಸಂಪೂರ್ಣವಾಗಿ ಕಿತ್ತು ಹಾಕಿದೆ. ಕೂಡಲೇ ಅವರನ್ನ ಕಳಸ ತಾಲೂಕು ಆಸ್ಪತ್ರೆ ದಾಖಲಿಸಿ ಗಂಭೀರ ಗಾಯಗೊಂಡಿದ್ದ ಅವರನ್ನ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ರವಾನಿಸಲಾಗಿದೆ.
ಸ್ಥಳಕ್ಕೆ ಪೊಲೀಸರು ಹಾಗೂ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಒತ್ತುವರಿ ಮಾಡಿದ್ದ 9.92 ಎಕರೆ ಜಾಗವನ್ನು ಮರಳಿ ಅರಣ್ಯ ಇಲಾಖೆಗೆ ಹಿಂದಿರುಗಿಸಿದ ರೆಸಾರ್ಟ್ ಮಾಲೀಕರು
ಕೊಡಗು: ರೆಸಾರ್ಟ್ ನ ಮಾಲೀಕರೇ ಒತ್ತುವರಿ ಮಾಡಿಕೊಂಡಿದ್ದ ಅರಣ್ಯ ಇಲಾಖೆಗೆ ಸಂಬಂಧಿಸಿದ ಜಾಗವನ್ನು ಇಲಾಖೆಗೆ ಮರಳಿಸಿರುವ ಘಟನೆ ನಡೆದಿದೆ.
ವಿರಾಜಪೇಟೆಯ ಪೆರುಂಬಾಡಿ ಬಳಿಯ ಆರ್ಜಿ ಗ್ರಾಮದ ಸರ್ವೇ ನಂಬರ್ 333/1 ಸೆಕ್ಷನ್ 4 ರ ಅರಣ್ಯ ಜಾಗವನ್ನು ಇಲ್ಲಿನ ರೆಸಾರ್ಟ್ ಮಾಲೀಕರು ಒತ್ತುವರಿ ಮಾಡಿರುವುದಾಗಿ ಇಲ್ಲಿನ ಸ್ಥಳೀಯರು ಕಂದಾಯ ಅದಾಲತ್ ನಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ಜಂಟಿ ಸರ್ವೇ ಕಾರ್ಯ ನಡೆಸಿದ ಅರಣ್ಯ ಹಾಗೂ ಭೂ ದಾಖಲೆಗಳ ಇಲಾಖೆ 9.92 ಎಕರೆ ಪ್ರದೇಶವು ಒತ್ತುವರಿಯಾಗಿದೆ ಎಂದು ಸಾಬೀತುಪಡಿಸಿತ್ತು.
ಈ ನಂತರದಲ್ಲಿ ಒತ್ತುವರಿ ಕುರಿತಾಗಿ ತೇಲಪಂಡ ಪ್ರಮೋದ್ ಸೋಮಯ್ಯ, ಅಜ್ಜಿನಂಡ ತಮ್ಮು ಪೂವಯ್ಯ, ಪಾಂಡಿರ ಮುತಣ್ಣ ಸೇರಿದಂತೆ ಮುಂತಾದವರು ದೂರು ನೀಡಿದ್ದರು. ಈ ಕುರಿತಾಗಿ ಇಲಾಖೆ ನೀಡಿದ ನೋಟೀಸ್ ಗೆ ರೆಸಾರ್ಟ್ ಮಾಲೀಕರು ಮರಳಿ ಒತ್ತುವರಿ ಮಾಡಿರುವ ಜಾಗವನ್ನು ಹಿಂದಿರುಗಿಸುವುದಾಗಿ ತಿಳಿಸಿ ಒತ್ತುವರಿ ಮಾಡಿದ್ದ ಜಾಗವನ್ನು ಮರಳಿ ನೀಡಿದ್ದಾರೆ.
ತೆರವು ಕಾರ್ಯಾಚರಣೆಯು ACF ನೆಹರು ಅವರ ನೇತೃತ್ವದಲ್ಲಿ ನಡೆದಿದ್ದು ಈ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಭಾಗವಹಿಸಿದ್ದರು








0 Comments