ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಸಮರ್ಪಕವಾದ ರಸ್ತೆ ವ್ಯವಸ್ಥೆಯಿಲ್ಲದೆ ಜನರು ತೀವ್ರ ಸಮಸ್ಯೆಗೀಡಾಗಿರುವ ಸ್ಥಿತಿ ಶೃಂಗೇರಿಯ ಬೇಗಾರು ಗ್ರಾಮದಲ್ಲಿ ತಲೆದೋರಿದೆ.
ಇದನ್ನೂ ಓದಿ : ಚಾಲಕನ ನಿಯಂತ್ರಣ ತಪ್ಪಿ ಉರುಳಿದ ಬೊಲೆರೋ ವಾಹನ
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಬೇಗಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೀಗಾ ಗ್ರಾಮದ ಸುರಗೋಡು ಸಮೀಪದ ರಸ್ತೆಯು ಕಳೆದ ಅನೇಕ ವರ್ಷಗಳಿಂದ ದುರಾವಸ್ಥೆಗೆ ತಲುಪಿದ್ದು ಸ್ಥಳೀಯರು ಈ ಮಾರ್ಗದಲ್ಲಿ ಓಡಾಡಲು ತೀವ್ರತರಹದ ಸಮಸ್ಯೆ ಎದುರಾಗಿದೆ.
ಈ ಗ್ರಾಮದಲ್ಲಿರುವ ಮನೆಗಳ ನಡುವಿನ ಅಂತರ ಸಹ ಹೆಚ್ಚಿದ್ದು ಜಲ್ಲಿ ರಸ್ತೆಯನ್ನು ನಿರ್ಮಿಸಲು ಹೆಚ್ಚಿನ ಅನುದಾನದ ಅವಶ್ಯಕತೆಯಿದೆ. ಮಳೆಗಾಲ ಮುಗಿದ ಬಳಿಕ ಕಾಮಗಾರಿಯನ್ನು ನಡೆಸಿ ಜನರ ಓಡಾಟಕ್ಕೆ ಅನುಕೂಲಕರ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಲಾಗುವುದು - ಅಹಮ್ಮದ್, ಪಿಡಿಓ, ಬೇಗಾರ್ ಗ್ರಾಮ ಪಂಚಾಯತ್
ಶಾಸಕರಿಗೆ, ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಎಷ್ಟೇ ಮನವಿ ಮಾಡಿದರೂ ಕೂಡ ಸಮಸ್ಯೆಗೆ ಪೂರಕವಾದ ಪರಿಹಾರ ದೊರೆಯುತ್ತಿಲ್ಲ ಜನರ ಕಷ್ಟಕ್ಕೆ ಯಾರಿಂದಲೂ ಸ್ಪಂದನೆ ದೊರೆಯುತ್ತಿಲ್ಲ ಎಂದು ಸ್ಥಳೀಯರು ಸಮಸ್ಯೆಯ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ.
ರಸ್ತೆ ಸಮಸ್ಯೆ ಕಳೆದ ಅನೇಕ ವರ್ಷಗಳಿಂದ ಇದ್ದು, ಸಂಬಂಧಿಸಿದ ಎಲ್ಲಾ ಅಧಿಕಾರಿಗಳಿಗೆ ಈ ಕುರಿತಾಗಿ ಮನವಿ ಮಾಡಿದರೂ ಕೂಡ ಯಾವುದೇ ಪ್ರಯೋಜನಗಳಾಗಿಲ್ಲ. ಮಕ್ಕಳು ಹಾಗೂ ವಯಸ್ಸಾದವರು ಈ ಭಾಗದ ಮನೆಗಳಲ್ಲಿದ್ದು ತುರ್ತು ಸಂದರ್ಭಗಳಲ್ಲಿ ಸಂಚಾರಕ್ಕೆ ತೀವ್ರತರಹದ ಸಮಸ್ಯೆಗಳು ಎದುರಾಗಿದೆ, ಇನ್ನಾದರೂ ಸಂಬಂಧಿಸಿದವರು ಸಮಸ್ಯೆಗೆ ಪರಿಹಾರ ಒದಗಿಸಬೇಕು - ಗ್ರಾಮಸ್ಥರು, ಸುರುಗೋಡು
ಮಲೆನಾಡು ಭಾಗದಲ್ಲಿ ಭಾರೀ ಪ್ರಮಾಣದ ಮಳೆಆಗಾಗ ಸಂಭವಿಸುತ್ತಲೇ ಇದ್ದು ಒಂದೆಡೆ ಮಳೆಯಿಂದಾಗಿ ಸಂಪರ್ಕಕ್ಕೆ ಸಮಸ್ಯೆಗಳಾಗುತ್ತಿದ್ದರೆ ಇತ್ತ ಅನೇಕ ವರ್ಷಗಳಿಂದ ಸಂಚಾರಕ್ಕೆ ಸೂಕ್ತವಾದ ರಸ್ತೆಯನ್ನು ಕಾಣದೇ ಜನರು ತೊಂದರೆಗೆ ಸಿಲುಕಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಕುರಿತಾಗಿ ಗಮನಹರಿಸಿ ಇನ್ನಾದರೂ ಜನರಿಗೆ ಅಗತ್ಯವಿರುವ ರಸ್ತೆ ವ್ಯವಸ್ಥೆಯನ್ನು ಕಲ್ಪಿಸಬೇಕಿದೆ.
ಒತ್ತುವರಿ ಮಾಡಿದ್ದ 9.92 ಎಕರೆ ಜಾಗವನ್ನು ಮರಳಿ ಅರಣ್ಯ ಇಲಾಖೆಗೆ ಹಿಂದಿರುಗಿಸಿದ ರೆಸಾರ್ಟ್ ಮಾಲೀಕರು
ರೆಸಾರ್ಟ್ ನ ಮಾಲೀಕರೇ ಒತ್ತುವರಿ ಮಾಡಿಕೊಂಡಿದ್ದ ಅರಣ್ಯ ಇಲಾಖೆಗೆ ಸಂಬಂಧಿಸಿದ ಜಾಗವನ್ನು ಇಲಾಖೆಗೆ ಮರಳಿಸಿರುವ ಘಟನೆ ನಡೆದಿದೆ.
ವಿರಾಜಪೇಟೆಯ ಪೆರುಂಬಾಡಿ ಬಳಿಯ ಆರ್ಜಿ ಗ್ರಾಮದ ಸರ್ವೇ ನಂಬರ್ 333/1 ಸೆಕ್ಷನ್ 4 ರ ಅರಣ್ಯ ಜಾಗವನ್ನು ಇಲ್ಲಿನ ರೆಸಾರ್ಟ್ ಮಾಲೀಕರು ಒತ್ತುವರಿ ಮಾಡಿರುವುದಾಗಿ ಇಲ್ಲಿನ ಸ್ಥಳೀಯರು ಕಂದಾಯ ಅದಾಲತ್ ನಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ಜಂಟಿ ಸರ್ವೇ ಕಾರ್ಯ ನಡೆಸಿದ ಅರಣ್ಯ ಹಾಗೂ ಭೂ ದಾಖಲೆಗಳ ಇಲಾಖೆ 9.92 ಎಕರೆ ಪ್ರದೇಶವು ಒತ್ತುವರಿಯಾಗಿದೆ ಎಂದು ಸಾಬೀತುಪಡಿಸಿತ್ತು.
ಈ ನಂತರದಲ್ಲಿ ಒತ್ತುವರಿ ಕುರಿತಾಗಿ ತೇಲಪಂಡ ಪ್ರಮೋದ್ ಸೋಮಯ್ಯ, ಅಜ್ಜಿನಂಡ ತಮ್ಮು ಪೂವಯ್ಯ, ಪಾಂಡಿರ ಮುತಣ್ಣ ಸೇರಿದಂತೆ ಮುಂತಾದವರು ದೂರು ನೀಡಿದ್ದರು. ಈ ಕುರಿತಾಗಿ ಇಲಾಖೆ ನೀಡಿದ ನೋಟೀಸ್ ಗೆ ರೆಸಾರ್ಟ್ ಮಾಲೀಕರು ಮರಳಿ ಒತ್ತುವರಿ ಮಾಡಿರುವ ಜಾಗವನ್ನು ಹಿಂದಿರುಗಿಸುವುದಾಗಿ ತಿಳಿಸಿ ಒತ್ತುವರಿ ಮಾಡಿದ್ದ ಜಾಗವನ್ನು ಮರಳಿ ನೀಡಿದ್ದಾರೆ.
ತೆರವು ಕಾರ್ಯಾಚರಣೆಯು ACF ನೆಹರು ಅವರ ನೇತೃತ್ವದಲ್ಲಿ ನಡೆದಿದ್ದು ಈ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಭಾಗವಹಿಸಿದ್ದರು.


.jpeg)

.jpeg)
%20-%20Copy.jpeg)



0 Comments