ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ನಿರಂತರವಾಗಿ ನಡೆಯುತ್ತಿರುವ ಆನೆ ದಾಳಿಯಿಂದ ರೋಸಿ ಹೋಗಿರುವ ಕೃಷಿಕರು ಬೃಹತ್ ಪ್ರತಿಭಟನೆಗೆ ಸಜ್ಜಾಗಿದ್ದಾರೆ.
ಈ ಕುರಿತಾಗಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿ ತೀರ್ಮಾನಿಸಿದ ಸಂತ್ರಸ್ತರು, ಮೂಡಿಗೆರೆ ಭಾಗದಲ್ಲಿ ಆನೆ ದಾಳಿ ಮಿತಿ ಮೀರಿದ್ದು, ಈಗಾಗಲೇ ಅನೇಕರು ಪ್ರಾಣವನ್ನು ಸಹ ಕಳೆದುಕೊಂಡಿದ್ದಾರೆ, ಅಪಾರ ಪ್ರಮಾಣದ ಬೆಳೆಹಾನಿ ಕೂಡ ಈ ಭಾಗದಲ್ಲಿ ಸಂಭವಿಸಿದ್ದು ಜನರ ಬದುಕು ತೀವ್ರ ಆತಂಕಕ್ಕೆ ಸಿಲುಕಿದೆ ಎಂಬುದಾಗಿ ತಿಳಿಸಿದರು.
ಇದನ್ನೂ ಓದಿ : ಅಕ್ರಮವಾಗಿ ನಕ್ಷತ್ರ ಆಮೆಯನ್ನು ಸಾಗಾಟ ನಡೆಸುತ್ತಿದ್ದ ಇಬ್ಬರ ಬಂಧನ
ಮೂಡಿಗೆರೆ ತಾಲೂಕಿನ ತ್ರಿಪುರ, ಊರುಬಗೆ, ಬೆಟ್ಟಗೆರೆ, ಪಲ್ಗುಣಿ, ಬಿ.ಹೊಸಳ್ಳಿ, ಬಾಳೂರು, ಹಳೇ ಮೂಡಿಗೆರೆ ಸೇರಿದಂತೆ ಬಹುತೇಕ ಭಾಗಗಳಲ್ಲಿ ಒಂದೆಡೆ ಕಾಡಾನೆ ದಾಳಿಯಿಂದ ಭಾರೀ ಪ್ರಮಾಣದ ಬೆಳೆ ನಾಶವಾಗಿದ್ದರೆ ಅನೇಕರು ಆನೆದಾಳಿಯಿಂದಾಗಿ ತಮ್ಮ ಅಮೂಲ್ಯವಾದ ಜೀವನವನ್ನೇ ಕಳೆದು ಕೊಂಡಿದ್ದಾರೆ ಆದರೆ ಈ ಕುರಿತು ಯಾವುದೇ ಅಧಿಕಾರಿಗಳು ಧ್ವನಿಎತ್ತದೇ ಇರುವುದು ಅತ್ಯಂತ ದುರಾದೃಷ್ಟಕರ ಸಂಗತಿಯಾಗಿದೆ ಎಂದು ಜನರು ಸಮಸ್ಯೆಯ ಕುರಿತು ವ್ಯಕ್ತಪಡಿಸಿದರು.
ಕೂಡಲೇ ಕಾಡಾನೆಗಳ ಸ್ಥಳಾಂತರವಾಗಬೇಕು, ವಿದ್ಯುತ್ ತೂಗು ಬೇಲಿಯನ್ನು ಇತರೆ ಪ್ರದೇಶಗಳಿಗೂ ನಿರ್ಮಿಸಿ ಕೃಷಿಕರ ಜಾನುವಾರುಗಳನ್ನು ಕಾಡುಪ್ರಾಣಿಗಳಿಂದ ರಕ್ಷಿಸಬೇಕು ಎಂಬ ಆಗ್ರಹವನ್ನಿಟ್ಟುಕೊಂಡು ಸೆಪ್ಟೆಂಬರ್ 23 ರ ಶುಕ್ರವಾರ ಮೂಡಿಗೆರೆ ಪಟ್ಟಣದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ರೈತರು ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದೇವೆ ಎಂಬುದಾಗಿ ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.
ಈ ಸಭೆಯಲ್ಲಿ ಹೋರಾಟ ಸಮಿತಿ ಸಂಚಾಲಕ ಎಂ.ಕೆ ಸದಾಶಿವ, ಬೆಳೆಗಾರರ ಸಂಘದ ಕಾರ್ಯದರ್ಶಿ ಕೆ.ಡಿ ಮನೋಹರ್, ಎಂ. ಮಂಜುನಾಥ, ಪುಟ್ಟಸ್ವಾಮಿ ಗೌಡ, ನಿಖಿಲ್ ಚಕ್ರವರ್ತಿ ಸೇರಿದಂತೆ ಅನೇಕರು ಹಾಜರಿದ್ದರು.

%20-%20Copy.jpeg)



0 Comments