ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಗುಡ್ಡ ಕುಸಿತ ಸಂಭವಿಸಿದ ಸ್ಥಳಗಳಿಗೆ ಡ್ರೋನ್ ಬಳಕೆ ಮಾಡಿ ಸೀಡ್ ಬಾಲ್ ಗಳನ್ನು ಬಿತ್ತನೆ ಮಾಡುವ ವಿನೂತನ ಕಾರ್ಯ ಇಂದು ಮೂಡಿಗೆರೆಯ ಆಸುಪಾಸಿನ ಗುಡ್ಡ ಕುಸಿತ ಸಂಭವಿಸಿದ ಸ್ಥಳಗಳಲ್ಲಿ ನಡೆಯಿತು. 

ಇದನ್ನೂ ಓದಿ: ಕೋಳಿ ಫಾರಂ ನಲ್ಲಿದ್ದ ದೈತ್ಯ ಹೆಬ್ಬಾವನ್ನು ಸೆರೆ ಹಿಡಿದ ಸ್ನೇಕ್ ಕಿರಣ್ | ಕೈಗೆ ಸುತ್ತಿಕೊಂಡು ಕೆಲಕಾಲ ಕಾಡಿದ ಹೆಬ್ಬಾವು

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಭಾಗದಲ್ಲಿ ಈ ಭಾರೀ ಸುರಿದ ಭಾರಿ ಮಳೆಯಿಂದಾಗಿ ಭಾರೀ ಪ್ರಮಾಣದ ನಷ್ಟ ಒಂದೆಡೆ ಸಂಭವಿಸಿದರೆ ಇನ್ನೊಂದೆಡೆ ಅನೇಕ ಕಡೆಗಳಲ್ಲಿ ಧರೆ ಕುಸಿತ, ಗುಡ್ಡ ಜರಿತದಂತಹ ಘಟನೆಗಳು ಸಂಭವಿಸಿತ್ತು. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಭೂಕುಸಿತ ಸಂಭವಿಸಿದ ರೀತಿಯಲ್ಲಿ ಗಿಡ ಮರಗಳನ್ನು ಬೆಳೆಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಗುಜರಾತ್ ನ ಪ್ರೈಮ್ ಯುಎಇ ಸಂಸ್ಥೆಯ ಸಹಭಾಗಿತ್ವದೊಂದಿಗೆ ಇಂದು ಡ್ರೋನ್ ಗಳ ಮೂಲಕ ಸೀಡ್ ಬಾಲ್ ಬಿತ್ತನೆ ನಡೆಸಿತು. 


ಮೂಡಿಗೆರೆ ಭಾಗದ ಚಾರ್ಮಾಡಿ ಘಾಟ್, ಬಿದ್ರುತಳ, ಮದುಗುಂಡಿ, ಮೇಗೂರು, ಸೇರಿದಂತೆ ಹಲವೆಡೆ ಗುಡ್ಡ ಕುಸಿತವಾಗಿ ಅಪಾರ ಪ್ರಮಾಣದ ಹಾನಿ ಸಂಭವಿಸಿದ ಸ್ಥಳಗಳನ್ನು ಗುರುತಿಸಿ ಅಲ್ಲಿ ಇಂದು ಡ್ರೋನ್ ಮೂಲಕ ಬೀಜ ಬಿತ್ತನೆ ಮಾಡಿದ್ದು ಗುಡ್ಡ ಕುಸಿತ ತಡೆಗೆ ಪ್ರಯತ್ನ ನಡೆಸಲಾಗಿದೆ ಎಂದು ಮೂಡಿಗೆರೆ ವಲಯ ಅರಣ್ಯಾಧಿಕಾರಿ ಮೋಹನ್ ಕುಮಾರ್ ಮಾಹಿತಿ ನೀಡಿದರು. 

ಈ ಸಮಯದಲ್ಲಿ ಮೂಡಿಗೆರೆ ವಲಯ ಅರಣ್ಯಾಧಿಕಾರಿ ಮೋಹನ್ ಕುಮಾರ್, ಹಿಟೆನ್ ಪಟೇಲ್ CTO ಡ್ರೋನ್ ಸಂಸ್ಥಾಪಕ ಗುಜರಾತ್, ಉಪವಲಯ ಅರಣ್ಯಾಧಿಕಾರಿ ರಮೇಶ್, ಅರಣ್ಯ ರಕ್ಷಕ ಪರಮೇಶ್, ಚಾಲಕ ಸುಮಂತ್, ಅರಣ್ಯ ಇಲಾಖೆಯ ದಿನಕೂಲಿ ಕಾರ್ಮಿಕ ದಿನೇಶ್ ಇದ್ದರು. 

- ತನು ಕೊಟ್ಟಿಗೆಹಾರ, ವರದಿಗಾರರು