ಕೊಡಗು: (ನ್ಯೂಸ್ ಮಲ್ನಾಡ್ ವರದಿ) ತೋಟದ ಕಾರ್ಮಿಕನ ಮೇಲೆ ಹುಲಿ ದಾಳಿ ನಡೆಸಿ ಆತನನ್ನು ಬಲಿಪಡೆದು ಕೊಂಡಿರುವ ಘಟನೆ ಇಂದು ಸಂಭವಿಸಿದೆ. ಪೊನ್ನಂಪೇಟೆ ತಾಲೂಕಿನ ಕೋತೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು. ಬೊಮ್ಮಾಡು ಗ್ರಾಮದ ನಿವಾಸಿ, ಕಾರ್ಮಿಕ ಕೃಷ್ಣ (53) ಎಂಬುವವರು ಹುಲಿದಾಳಿಗೆ ಬಲಿಯಾಗಿದ್ದಾರೆ. ಇವರು ಎಂ.ಕೆ.ಪ್ರಕಾಶ್ ಎಂಬುವವರ ತೋಟದಲ್ಲಿ ಕೆಲಸ ಮಾಡುತ್ತಿದ್ದರು.
ಇಂದು ಬೆಳಗ್ಗೆ ಹಸುವೊಂದರ ಮೇಲೆ ದಾಳಿ ನಡೆಸಿದ್ದ ಹುಲಿ, ಬಳಿಕ ಕಾರ್ಮಿಕನ ಮೇಲೆರಗಿ ಸಾಯಿಸಿದೆ. ಎರಡು ದಿನಗಳ ಹಿಂದಷ್ಟೇ ಒಂದು ಹುಲಿಯನ್ನು ಸೆರೆ ಹಿಡಿಯಲಾಗಿತ್ತು. ಆದರೆ ಇಂದು ಮತ್ತೊಂದು ಹುಲಿ ಕಾಣಿಸಿಕೊಂಡು ಜೀವಬಲಿ ಪಡೆದಿರುವುದು ಜನರಲ್ಲಿ ಆತಂಕ ಮೂಡಿಸಿದೆ.
ಈ ಭಾಗದಲ್ಲಿ ಪದೇ ಪದೇ ಹುಲಿ ದಾಳಿ ನಡೆಸುತ್ತಿರುವುದರಿಂದಾಗಿ ಸ್ಥಳೀಯರು ಹಾಗೂ ಕಾರ್ಮಿಕರು ಅತೀವ ಆತಂಕಕ್ಕೆ ಸಿಲುಕಿದ್ದಾರೆ. ಒಂದೆಡೆ ಸಾಕಿದ ಜಾನುವಾರುಗಳನ್ನು ಹುಲಿ ದಾಳಿ ಮಾಡಿ ಬಲಿ ಪಡೆದುಕೊಂಡಿದ್ದರೆ, ಇತ್ತ ಕೃಷಿಕೆಲಸ ಮಾಡುವ ಕಾರ್ಮಿಕರು ಸಹ ಅತೀವವಾದ ಸಂಕಷ್ಟಕ್ಕೆ ಸಿಲುಕಿದ್ದಾರೆ.





0 Comments