ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿ ಉಡುಗೊರೆ ಕಳಿಸುವುದಾಗಿ ಪುಸಲಾಯಿಸಿ ಲಕ್ಷಗಟ್ಟಲೆ ಹಣವನ್ನು ಯುವತಿಗೆ ವಂಚಿಸಿರುವ ಘಟನೆ ಬೆಳಕಿಗೆ ಬಂದಿದ್ದು ಈ ಸಂಬಂಧ ಪ್ರಕರಣ ಸಹ ದಾಖಲಾಗಿದೆ.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳನ್ನು ಹ್ಯಾಕ್ ಮಾಡಿ ಬೇರೆಯವರಿಂದ ಹಣ ಲಪಟಾಯಿಸುವ ಮಾರ್ಗವನ್ನು ಹ್ಯಾಕರ್ ಗಳು ಆರಂಭಿಸಿದ್ದು ಈ ರೀತಿಯ ಅನೇಕ ಪ್ರಕರಣಗಳು ಈಗಾಗಲೇ ನಡೆದಿದೆ.
ಇದನ್ನೂ ಓದಿ : ಹೇಗಿದೆ ಗೊತ್ತಾ ಸಾಮಾಜಿಕ ಜಾಲತಾಣದಲ್ಲಿ ನಡೆಯುವ ಮೋಸದ ಜಾಲ ? ಹ್ಯಾಕ್ ಆದರೆ ಏನು ಮಾಡಬೇಕು ?
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಅಂಗಡಿ ಗ್ರಾಮದ ಯುವತಿಗೆ Instagram ಮೂಲಕ ಪರಿಚಯವಾದ ವ್ಯಕ್ತಿ ವಿದೇಶದಲ್ಲಿರುವುದಾಗಿ ಆಕೆಗೆ ಹೇಳಿಕೊಂಡು ಇಬ್ಬರ ಸ್ನೇಹದ ಸಂಕೇತವಾಗಿ ದುಬಾರಿ ಮೌಲ್ಯದ ಉಡುಗೊರೆಯನ್ನು ಕಳುಹಿಸುವುದಾಗಿ ಯುವತಿಯನ್ನು ನಂಬಿಸಿದ್ದ. ಇದನ್ನು ನಂಬಿದ ಯುವತಿ ಆತ ಕೇಳಿದಾಗಲೆಲ್ಲ ಹಂತ ಹಂತವಾಗಿ ಹಣವನ್ನು ಆತನ ಅನಾಮಿಕ ಖಾತೆಗೆ ಹಾಕಿದ್ದಾಳೆ. ಆದರೆ ಉಡುಗೊರೆಯಾಗಲಿ ಅಥವಾ ಬೇರೇನೋ ಆಗಲಿ ಯಾವುದನ್ನೂ ಆತ ಕಳುಹಿಸದೆ ಯುವತಿಯಿಂದ 2.20 ಲಕ್ಷ ಹಣವನ್ನು ಪಡೆದು ವಂಚಿಸಿದ್ದಾನೆ.
ಈ ಕುರಿತು ಸಿಇನ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿರುವ ಯುವತಿ ಇಂತಹ ಕೃತ್ಯ ಎಸಗುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಹಣವನ್ನು ಮರಳಿ ಪಡೆಯುವ ಸಲುವಾಗಿ ನೆರವಾಗಬೇಕೆಂದು ಅಧಿಕಾರಿಗಳನ್ನು ಕೋರಿದ್ದಾರೆ. ಘಟನಾ ಸಂಬಂಧ ದೂರು ದಾಖಲು ಮಾಡಿಕೊಂಡಿರುವ ಅಧಿಕಾರಿಗಳು ಈ ಕುರಿತು ಮುಂದಿನ ತನಿಖೆ ಆರಂಭಿಸಿದ್ದಾರೆ.


%20-%20Copy.jpeg)


0 Comments