ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಅಕ್ರಮವಾಗಿ ಮದ್ಯ ಮಾರಾಟ ನಡೆಸುತ್ತಿದ್ದ ಎರಡು ಸ್ಥಳಗಳ ಮೇಲೆ ಪೊಲೀಸರು ದಾಳಿ ನಡೆಸಿ ಆರೋಪಿಗಳಿಂದ ಸಾವಿರಾರು ರೂಪಾಯಿ ಮೌಲ್ಯದ ಮದ್ಯವನ್ನು ವಶಕ್ಕೆ ಪಡೆದಿರುವ ಘಟನೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಅಡಿಕೆ ಮರಗಳನ್ನು ಕಡಿದು ಕಳ್ಳತನ ನಡೆಸುತ್ತಿದ್ದ ಮೂವರ ಬಂಧನ
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಮೇಲ್ ನೆಮ್ಮಾರುವಿನ ನಟೇಶ್ ಎಂಬುವವರು ತಮ್ಮ ಅಂಗಡಿ ಮುಂಭಾಗದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಸುತ್ತಿರುವ ಕುರಿತು ಖಚಿತ ಮಾಹಿತಿ ಪಡೆದ ಪೊಲೀಸರು ಕೂಡಲೇ ಕಾರ್ಯಾಚರಣೆಗೆ ಮುಂದಾಗಿ ಪಂಚರುಗಳ ಸಮಕ್ಷಮದಲ್ಲಿ ದಾಳಿ ನಡೆಸಿ ಯಾವುದೇ ಪರವಾನಗಿ ಹೊಂದದೇ ಅಕ್ರಮವಾಗಿ ಪ್ಲಾಸ್ಟಿಕ್ ಕೈ ಚೀಲದಲ್ಲಿರಿಸಲಾಗಿದ್ದ 1,440 ರೂಪಾಯಿ ಬೆಲೆಯ ಮದ್ಯವನ್ನು ಪೊಲೀಸರು ವಶಕ್ಕೆ ಪಡೆದಿದ್ದು ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮಕ್ಕೆ ಅನುವುಮಾಡಿದ್ದಾರೆ.
ಇದೇ ಗ್ರಾಮದ ವಾಸಿ ರತ್ನಾಕರ ಎಂಬುವವರ ಮನೆಯ ಮುಂಭಾಗದಲ್ಲಿ ಸಹ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದೆ ಎಂಬುದರ ಕುರಿತಾಗಿ ಮಾಹಿತಿ ಆಧರಿಸಿ ದಾಳಿ ನಡೆಸಿದ ಶೃಂಗೇರಿ ಠಾಣೆಯ ಪೊಲೀಸರು 1,534 ರೂಪಾಯಿ ಬೆಲೆಯ ಮದ್ಯ ತುಂಬಿದ ಪೌಚ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ಯಾವುದೇ ಪರವಾನಗಿಯನ್ನು ಹೊಂದದೇ ಮಾರಾಟಕ್ಕೆಂದು ಇಟ್ಟುಕೊಂಡಿದ್ದ ಮದ್ಯವನ್ನು ಪೊಲೀಸರು ವಶಕ್ಕೆ ಪಡೆದಿದ್ದು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕ್ಕೆ ಅನುವುಮಾಡಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಶೃಂಗೇರಿ ಠಾಣೆಯ ಪಿಎಸ್ಸೈ ಅಶೋಕ್ ಕುಮಾರ್ ಹಾಗೂ ನೇತೃತ್ವದ ತಂಡ ಭಾಗವಹಿಸಿ ಆರೋಪಿಗಳನ್ನು ಹಾಗೂ ಮದ್ಯವನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.





0 Comments