ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಪೊಲೀಸ್ ಠಾಣಾ ಸರಹದ್ದಿನಲ್ಲಿರುವ ಕೋಟೆವೂರು ಗ್ರಾಮದ ಮನೆಯ ಹಿಂಭಾಗದ ಕೊಟ್ಟಿಗೆಯಲ್ಲಿ ತಯಾರು ನಡೆಸುತ್ತಿದ್ದ ಕಳ್ಳಭಟ್ಟಿ ಅಡ್ಡೆಯ ಮೇಲೆ ಪೊಲೀಸರು ಮಾಹಿತಿಯ ಮೇರೆಗೆ ದಾಳಿ ನಡೆಸಿ ಅಪಾರ ಕಳ್ಳಭಟ್ಟಿಯನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಮಗಳ ಎಂಗೇಜ್ಮೆಂಟ್ ಗಾಗಿ ಸಾಕಿದ ಹಸುವನ್ನೇ ಕಡಿದ ಹಂತಕರು; ಮಾಂಸದ ಸಹಿತ ಇಬ್ಬರು ಆರೋಪಿಗಳು ಪೊಲೀಸರ ವಶಕ್ಕೆ
ಮಾರಾಟ ಮಾಡುವ ಉದ್ದೇಶದಿಂದಾಗಿ ಕಳ್ಳಭಟ್ಟಿ ಬೇಯುಸುತ್ತಿರುವ ಬಗ್ಗೆ ದೊರೆತ ಮಾಹಿತಿಯ ಆಧಾರದ ಮೇರೆಗೆ ಪಿ.ಎಸ್.ಐ. ಆಲ್ದೂರು ಪೊಲೀಸ್ ಠಾಣೆ ಮತ್ತು ಸಿಬ್ಬಂದಿಗಳು ದಾಳಿ ನಡೆಸಿದ್ದು ಈ ವೇಳೆ ಪೊಲೀಸರನ್ನು ನೋಡಿದ ಕಳ್ಳಭಟ್ಟಿ ಬೇಯುಸುತ್ತಿದ್ದ ವ್ಯಕ್ತಿ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ. ಸ್ಥಳದಲ್ಲಿ ದೊರೆತ 05 ಲೀಟರ್ ನ 02 ಕ್ಯಾನಿನಲ್ಲಿದ್ದ 10 ಲೀಟರ್ ಕಳ್ಳಭಟ್ಟಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಈ ಕುರಿತು ಆಲ್ದೂರು ಪೊಲೀಸ್ ಠಾಣಾ ಮೊ.ನಂ. 106/2022 ಕಲಂ 272, 273 ಐಪಿಸಿ, 13(ಎ), 32,34 ಕೆ ಈ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪೊಲೀಸರನ್ನು ಕಂಡು ಓಡಿಹೋದ ಆರೋಪಿಯನ್ನು ಮಂಜಯ್ಯ ಎಂದು ಗುರುತಿಸಲಾಗಿದೆ. ಇಂತಹ ಅಕ್ರಮ ಕೃತ್ಯಗಳಲ್ಲಿ ಯಾರೇ ಭಾಗಿಯಾಗಿದ್ದರು ಕೂಡ ಅಂತಹವರನ್ನು ಕಾನೂನಿನ ಅಡಿಯಲ್ಲಿ ಸೂಕ್ತವಾದ ಶಿಕ್ಷೆಗೆ ಗುರಿಪಡಿಸುವುದಾಗಿ ಪೊಲೀಸ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.





0 Comments