ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕೊತ್ವಾಲ್ ರಾಮಚಂದ್ರರ ಶಿಷ್ಯರೂ ರಾಜಕಾರಣದಲ್ಲಿದ್ದಾರೆ, ಅವರಿಂದ ಯಾರಿಗೂ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಸಿದ್ದರಾಮಯ್ಯ ಅವರಿಗೆ ಭದ್ರತೆ ನೀಡಿದ್ದೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.
ನನಗೆ ಯಾವುದೇ ಬೆದರಿಕೆ ಇಲ್ಲ. ಭದ್ರತೆ ಏಕೆ ಹೆಚ್ಚಿಸಿದ್ದಾರೋ ಗೊತ್ತಿಲ್ಲ ವಿಚಾರಕ್ಕೆ ಜಿಲ್ಲೆಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಿ ಟಿ ರವಿ ಅವರು, ಸಿದ್ದರಾಮಯ್ಯ ಅವರಿಗೆ ಯಾವುದೇ ಬೆದರಿಕೆ ಇಲ್ಲದೆ ಇರಬಹುದು. ಆದರೆ, ರಾಜಕಾರಣದಲ್ಲಿ ಕೊತ್ವಾಲ್ ರಾಮಚಂದ್ರರ ಶಿಷ್ಯರೂ ಇರೋ ಕಾರಣಕ್ಕೆ ಸಿದ್ದರಾಮಯ್ಯ ಅವರಿಗೆ ಭದ್ರತೆ ನೀಡಿದ್ದೇವೆ ಎಂದು ಸಿಟಿ ರವಿ ತಿಳಿಸಿದರು.
ನನಗೆ ಭದ್ರತೆ ಹೆಚ್ಚಿಸಿರುವುದು ನನಗೆ ಗೊತ್ತಿಲ್ಲ. ರಾಜ್ಯ ಸರ್ಕಾರದವರು ಮಾಡಿದ್ದಾರೆ, ಯಾಕ್ ಮಾಡಿದ್ದಾರೆ ಗೊತ್ತಿಲ್ಲ. ನನಗೆ ಬೆದರಿಕೆ ಇತ್ತು ಅಂತಾ ಯಾರೋ ಹೇಳಿದ್ದಾರೆ. ನಾನು ಈ ಬಗ್ಗೆ ಏನು ಹೇಳಿಲ್ಲ, ನನಗೆ ಏನು ಗೊತ್ತಿಲ್ಲ ಎಂದು ಸಿದ್ದರಾಮಯ್ಯ ಅವರು ಇಂದು ಮಂಡ್ಯದಲ್ಲಿ ಹೇಳಿಕೆ ನೀಡಿದ್ದರು.
ಕಾಂಗ್ರೆಸ್ ಅನ್ಯಾಯ ಮಾಡಿದ್ದರೆ ಬಿಜೆಪಿಗೆ ಬನ್ನಿ; ವಿಪಕ್ಷ ನಾಯಕರಿಗೆ ಆಹ್ವಾನ :
ಕಾಂಗ್ರೆಸ್ ಅನ್ಯಾಯ ಮಾಡಿದೆ, ಬಿಜೆಪಿ ಸೇರುತ್ತೇನೆ ಎಂದರೆ ಬನ್ನಿ ಎನ್ನುತ್ತೇವೆ, ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕರು ಬರುತ್ತೇವೆ ಎಂದರೆ ಬನ್ನಿ ಎನ್ನುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ಹೇಳಿದ್ದಾರೆ.
ಗೋವಾದಲ್ಲಿ 11 ಶಾಸಕರಲ್ಲಿ 9ಜನ ಬಿಜೆಪಿಗೆ ಬಂದಿದ್ದಾರೆ. ನಾವು ಯಾರಿಗೂ ಡಿಮ್ಯಾಂಡ್ ಮಾಡಿ ಬನ್ನಿ ಅಂದಿಲ್ಲ. ಅವರೇ ಬಂದು ಸೇರುತ್ತೇವೆ ಎಂದಾಗ ಬೇಡ ಅನ್ನಲು ನಾವೇನು ಸನ್ಯಾಸಿಗಳಲ್ಲ. ರಾಜ್ಯದಲ್ಲೂ ವಿಪಕ್ಷ ನಾಯಕರೇ ಬರುತ್ತೀನಿ ಎಂದರೂ ಬನ್ನಿ ಎನ್ನುತ್ತೇವೆಂದು ವಿಪಕ್ಷ ನಾಯಕರನ್ನು ಆಹ್ವಾನಿಸಿದರು.





0 Comments