ಸರ್ಕಾರಿ ಜಮೀನುಗಳಲ್ಲಿ ಬೇಸಾಯ ನಡೆಸುತ್ತಿರುವ ಸಾಗುವಳಿದಾರರ ಅರ್ಜಿಯನ್ನು ಸಕ್ರಮಗೊಳಿಸುವ ಸಲುವಾಗಿ ಅರ್ಜಿ ಸ್ವೀಕರಣೆಗೆ ಕಾಲಾವಕಾಶ ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ಮೂಲಕ ಅಕ್ರಮ ಸಾಗುವಳಿದಾರರಿಗೆ ಸಿಹಿ ಸುದ್ದಿಯನ್ನು ನೀಡಿದೆ.

ಸರ್ಕಾರಿ ಜಮೀನುಗಳಲ್ಲಿ ಅನಧಿಕೃತವಾಗಿ ಸಾಗುವಳಿ ಮಾಡಿಕೊಂಡು ಬಂದಿರುವ ರೈತರು ಹಾಗೂ ಸಣ್ಣ ರೈತರ ಹಿತದೃಷ್ಟಿಯಿಂದಾಗಿ ಅಂತೆಯೇ ಈ ರೀತಿಯಾದ ಜಮೀನುಗಳನ್ನು ಸಕ್ರಮಗೊಳಿಸುವ ಉದ್ದೇಶದಿಂದಾಗಿ, ಅನೇಕ ಸಂಖ್ಯೆಯಲ್ಲಿ ಕೃಷಿಕರು ಈ ಕುರಿತಾದ ಮಾಹಿತಿ ಹಾಗೂ ತಿಳುವಳಿಕೆ ಕೊರತೆಯಿಂದ ಅರ್ಜಿಯನ್ನು ಸಲ್ಲಿಸದೇ ಇರುವವರು ಅರ್ಜಿ ಸಲ್ಲಿಕೆಗೆ ಕಾಲಾವಕಾಶ ವಿಸ್ತರಣೆ ಮಾಡಿರುವುದರಿಂದಾಗಿ ಈ ಅವಕಾಶವನ್ನು ಬಳಸಿಕೊಂಡು ಅರ್ಜಿ ಸಲ್ಲಿಸಬಹುದಾಗಿರುತ್ತದೆ.


ಈ ಅರ್ಜಿಗಳನ್ನು ಸಲ್ಲಿಸಲು 30.5.2022 ರಿಂದ ಒಂದು ವರ್ಷದ ಅವಧಿಯವರೆಗೆ ಕಾಲಾವಕಾಶವನ್ನು ಸರ್ಕಾರ ವಿಸ್ತರಣೆ ಮಾಡಿದ್ದು ಅರ್ಹರು ನಮೂನೆ 57 ರಲ್ಲಿ ಅರ್ಜಿ ಸಲ್ಲಿಸುವ ಮೂಲಕ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ.

ಚಿಕ್ಕಮಗಳೂರು: ಜೂಜಾಟದಲ್ಲಿ ಭಾಗಿಯಾಗಿದ್ದ ಏಳು ಜನ ಆರೋಪಿಗಳು ಪೊಲೀಸರ ವಶಕ್ಕೆ :

ತರೀಕೆರೆ: ಜೂಜಾಟದಲ್ಲಿ ಭಾಗಿಯಾಗಿದ್ದ ಏಳು ಜನ ಆರೋಪಿಗಳನ್ನು ಕಾರ್ಯಾಚರಣೆಯ ಮೂಲಕ ಸೆರೆ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. 

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಇಟ್ಟಿಗೆ ಗ್ರಾಮದಲ್ಲಿ ಜೂಜಾಟ ನಡೆಸುತ್ತಿರುವುದರ ಕುರಿತು ಮಾಹಿತಿಯನ್ನು ಪಡೆದು ಖಚಿತ ಪಡಿಸಿಕೊಂಡ ಪೊಲೀಸರು ಕೂಡಲೇ ದಾಳಿ ನಡೆಸಿ ಏಳು ಜನ ಆರೋಪಿಗಳನ್ನು ಹಾಗೂ 9,470 ರೂಪಾಯಿ ನಗದನ್ನು ಆರೋಪಿಗಳಿಂದ ವಶಕ್ಕೆ ಪಡೆದಿದ್ದಾರೆ.

ಈ ಕಾರ್ಯಾಚರಣೆಯನ್ನು ತರೀಕೆರೆ ಪೊಲೀಸ್ ಠಾಣೆಯ PSI ಮತ್ತು ಸಿಬ್ಬಂದಿಗಳು ನಡೆಸಿದ್ದು, ಆರೋಪಿಗಳನ್ನು ಕಿರಣ್, ರವಿನಾಯ್ಕ, ಸೋಮೇಶ ನಾಯ್ಕ ಶಿವ, ನಾಗರಾಜ ನಾಯ್ಕ, ಮಲ್ಲೇಶನಾಯ್ಕ, ಮತ್ತು ಅಶೋಕ ಎಂದು ಗುರುತಿಸಲಾಗಿದೆ. 

ಘಟನಾ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಜಿಲ್ಲೆಯಲ್ಲಿ ಅಕ್ರಮವಾಗಿ ನಡೆಯುತ್ತಿರುವ ಚಟುವಟಿಕೆಗಳನ್ನು ನಿಯಂತ್ರಿಸುವಲ್ಲಿ ನಿಟ್ಟಿನಲ್ಲಿ ಪೊಲೀಸರು ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.