ಹಾಸನ: (ನ್ಯೂಸ್ ಮಲ್ನಾಡ್ ವರದಿ) ಊಟ ತಿಂಡಿ ನೀಡದೆ ಮನೆಯಲ್ಲಿ ಕೂಡಿ ಹಾಕಿ ಹಿಂಸೆ ನೀಡಿದ ಕಾರಣಕ್ಕಾಗಿ ಮನನೊಂದು ವೃದ್ದೆ ಕೆರೆಗೆ ಹಾರಿ ಸಾವನ್ನಪ್ಪಿರುವ ಘಟನೆ ದ್ವಾರಸಮುದ್ರ ಕೆರೆಯಲ್ಲಿ ನಡೆದಿದೆ.
ಹಾಸನದ ಭಾರತಿ ಕಲ್ಯಾಣ ಮಂಟಪ ಮುಂಭಾಗದ ನಿವಾಸಿ ಕಮಲಮ್ಮ(75) ಮೃತ ದುರ್ದೈವಿ. ಕಮಲಮ್ಮ ಗುರುವಾರ ಮಧ್ಯಾಹ್ನ ಹಳೇಬೀಡಿನ ದ್ವಾರಸಮುದ್ರ ಕೆರೆಗೆ ಹಾರಿ ನೀರಿನಲ್ಲಿ ಮುಳುಗಿ ಕೈಕಾಲು ಬಡಿದುಕೊಳ್ಳುತ್ತಿದ್ದಾಗ ಸ್ಥಳೀಯರು ಅಜ್ಜಿಯನ್ನು ಮೇಲಕ್ಕೆತ್ತಿ ರಕ್ಷಿಸುವ ಪ್ರಯತ್ನ ಮಾಡಿದರೂ ಕೂಡ ಆ ವೇಳೆಗೆ ಅಜ್ಜಿ ಮೃತಪಟ್ಟಿದ್ದರು.
ಇದನ್ನೂ ಓದಿ: ಕರ್ತವ್ಯದಲ್ಲಿ ಲೋಪಎಸಗಿದ ಹಿನ್ನೆಲೆ DRFO ಅಮಾನತು
ಅಜ್ಜಿ ಎದೆಯ ಎಡಭಾಗದಲ್ಲಿ ಪರ್ಸ್ ಒಂದು ದೊರೆತಿದ್ದು, ವಿಳಾಸದ ಕುರಿತು ಮಾಹಿತಿ ದೊರೆಯಬಹುದು ಎಂದು ಪರ್ಸ್ ತೆರೆದು ಅದರಲ್ಲಿ ಹುಡುಕಿದಾಗ ಅದರಲ್ಲಿ ಚೀಟಿ ದೊರೆತಿದ್ದು, ಪ್ರತಿಭಾ ಹಾಗೂ ಮಂಜು ಎಂಬುವರು ಮನೆಯ ಒಳಗೆ ಕೂಡಿ ಹಾಕಿ, ಊಟಕೊಡದೇ ತೊಂದರೆ ಕೊಡುತ್ತಾರೆ, ನನ್ನ ಸಾವಿಗೆ ಅವರೇ ಕಾರಣ ಎಂದು ಬರೆದಿರುವುದು ಗೊತ್ತಾಗಿದೆ.
ಊಟಕೊಡದೇ ಮನೆಯೊಳಗೆ ಕೂಡಿಹಾಕಿ ತೊಂದರೆ ಕೊಟ್ಟಿದ್ದರಿಂದ ಮನನೊಂದು ಕೆರೆಯಲ್ಲಿ ಮುಳುಗಿ ಸಾಯುತ್ತಿದ್ದೇನೆ ಎಂದು ವೃದ್ದೆಯೇ ಬರೆದಿದ್ದಾರೆ ಎನ್ನಲಾಗಿದ್ದು ಹಳೇಬೀಡು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಈ ಸಂಬಂಧ ತನಿಖೆ ಆರಂಭಿಸಿದ್ದಾರೆ.
ಮಂಗಳೂರಿಗೆ ಪ್ರಧಾನಿ ಭೇಟಿ ಹಿನ್ನೆಲೆ KSRTC ಬಸ್ ಸಂಚಾರ ಸ್ಥಗಿತ: ಬಸ್ಸಿಲ್ಲದೇ ಪ್ರಯಾಣಿಕರ ಪರದಾಟ :
ಚಿಕ್ಕಮಗಳೂರು: ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮನದ ಹಿನ್ನೆಲೆ ವ್ಯಾಪಕವಾದ ಭದ್ರತೆ ಹಾಗೂ ವ್ಯವಸ್ಥೆಗಳನ್ನು ಸರ್ಕಾರ ಕಲ್ಪಿಸಿದ್ದು, ಕೆಲವು ಆದೇಶಗಳಿಂದಾಗಿ ಸಾರ್ವಜನಿಕರಿಗೆ ಸಮಸ್ಯೆ ತಲೆದೋರಿದೆ ಎಂಬ ಮಾತುಗಳು ಸಹ ಕೇಳಿ ಬಂದಿದೆ.
ಕಡಲ ಕಿನಾರೆ ಮಂಗಳೂರಿಗೆ ಪ್ರಧಾನಿ ನರೇಂದ್ರಮೋದಿ ಭೇಟಿ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಮಾರ್ಗದಿಂದ ಮಂಗಳೂರು ಮಾರ್ಗ-ಮಂಗಳೂರು ಮಾರ್ಗದಿಂದ ಚಿಕ್ಕಮಗಳೂರು ಸಂಚರಿಸುವ KSRTC ಬಸ್ಸುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಸರ್ಕಾರಿ ಬಸ್ಸುಗಳನ್ನು ಅವಲಂಬಿಸಿಕೊಂಡು ಸಂಚರಿಸುವ ಸಾರ್ವಜನಿಕರು, ರೋಗಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಬಸ್ ನಿಲ್ದಾಣದಲ್ಲಿ ಕಾಯುವ ಪರಿಸ್ಥಿತಿ ಉಂಟಾಗಿದೆ ಎಂದು ಸಾರ್ವಜನಿಕರು ಸಮಸ್ಯೆಯ ಕುರಿತು ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರು ಕೆ.ಎಸ್.ಆರ್.ಟಿ.ಸಿ ಹಿರಿಯ ಅಧಿಕಾರಿಗಳು ಯಾವುದೇ ಪ್ರಕಟಣೆಯಲ್ಲಿ ಈ ಕುರಿತಾಗಿ ತಿಳಿಸಿಲ್ಲ, ಬಸ್ ಸಂಚಾರ ಇಲ್ಲದ ಪರಿಣಾಮ ಓಡಾಡಲು ತೀವ್ರತರಹದ ಸಮಸ್ಯೆ ಎದುರಾಗಿದೆ - ಅಮೃತ, ಬಿಸಿಎ ವಿದ್ಯಾರ್ಥಿನಿ
ಚಿಕ್ಕಮಗಳೂರು, ಮೂಡಿಗೆರೆ, ಕೊಟ್ಟಿಗೆಹಾರ ಮಾರ್ಗದಿಂದ ಸಂಚರಿಸುವ KSRTC ಬಸ್ಸುಗಳ ಸಂಚಾರವನ್ನು ಬೆಳಿಗ್ಗೆ 06 ರಿಂದ ಸಂಜೆ 06 ರ ವರೆಗೆ ಸ್ಥಗಿತಗೊಳಿಸಲಾಗಿದ್ದು ಮುಂಚೆಯೇ ಪ್ರಕಟಣೆಯನ್ನು ಹೊರಡಿಸಿಲ್ಲ, ಜನರಲ್ಲಿ ಈ ಕುರಿತು ಮುಂಚಿನದಾಗಿ ತಿಳಿಸಿದ್ದರೆ ಅನುಕೂಲಕರವಾಗುತ್ತಿತ್ತು ಎಂದು ಸಾರ್ವಜನಿಕರು ಆಕ್ರೋಶವನ್ನು ಹೊರಹಾಕಿದ್ದಾರೆ.
- ತನು ಕೊಟ್ಟಿಗೆಹಾರ, ವರದಿಗಾರರು

%20-%20Copy.jpeg)



0 Comments